ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿರುವುದನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಖಂಡಿಸಿದ್ದಾರೆ.
ಜೈನ ಸಮಾಜದ ಮುನಿಗಳು ಅಹಿಂಸಾವಾದಿಗಳಾಗಿರುವ ಅವರು ಅಹಿಂಸಾ ಪರಮೋಧರ್ಮ ಎಂದು ಬೋದಿಸುವ ಜೈನಮುನಿಗಳಿಗೆ ಈ ರೀತಿಯಾಗಿ ಹತ್ಯೆ ಮಾಡಿರು ವುದು ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದರು.
ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು,ಕೊಲೆಗಡುಕರಿಗೆ ಶಿಕ್ಷೆ ಆಗಬೇಕೆಂದರು.
ಅಣ್ಣಾಸಾಹೇಬ ಜೊಲ್ಲೆ
ಸಂಸದರು,ಚಿಕ್ಕೋಡಿ ಹಾಗೂ ಶಶಿಕಲಾ ಜೊಲ್ಲೆ ಶಾಸಕರು ನಿಪ್ಪಾಣಿ