ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಹೀರೆಕುಡಿ ನಂದಿ ಪರ್ವತ ಆಶ್ರಮದ ಪೂಜ್ಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಅತ್ಯಂತ ದುಃಖಕರ ಹಾಗೂ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಪಾಪ ಕೃತ್ಯ ಎಸಗಿರುವವರನ್ನು ಶೀಘ್ರವೇ ಬಂಧಿಸಿ, ತಕ್ಕ ಕಾನೂನು ಶಿಕ್ಷೆ ವಿಧಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಆಗ್ರಹಿಸಿದರು.
ಘಟನೆ ನಡೆದ ಸ್ಥಳ ಮತ್ತು ಆಶ್ರಮಕ್ಕೆ ಭೇಟಿ ನೀಡಿದ ಅವರು, ಜೈನ ಮುನಿಗಳ ಪೂರ್ವಾಶ್ರಮದ ಸಹೋದರ ಹಾಗೂ ಆಶ್ರಮದ ಭಕ್ತರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಸಂಬಂಧಪಟ್ಟ ಪೊಲೀಸ್ ತನಿಖಾಧಿಕಾರಿಗಳೊಂದಿಗೆ ದೂರವಾಣಿ ಕರೆ ಮುಖಾಂತರ ಸಂಪರ್ಕಿಸಿ,ಹೆಚ್ಚಿನ ಮಾಹಿತಿ ಪಡೆದು,ಬಳಿಕ ಗೃಹ ಸಚಿವರಿಗೆ ಕರೆ ಮಾಡಿ ತನಿಖೆಯನ್ನು ಚುರುಕುಗೊಳಿಸುವಂತೆ ಹಾಗೂ ಕೂಡಲೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.