“ಪ್ರಕೃತಿಯ ಮೇಲೆ ನಮ್ಮ ಹಿಡಿತವಿಲ್ಲದಿದ್ದರೂ, ಜನತೆಯ ಸಂರಕ್ಷಣೆಗೆ ಎಲ್ಲಾ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ನಮ್ಮದು” – ಶಶಿಕಲಾ ಜೊಲ್ಲೆ

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ನಿಪ್ಪಾಣಿ :–

ಪ್ರಕೃತಿಯು ತನ್ನದೇ ಶೈಲಿಯಲ್ಲಿ ವರ್ತಿಸುತ್ತದೆ. ಸಾಧಾರಣ ಮಳೆ, ಅತಿವೃಷ್ಟಿ, ಪ್ರವಾಹ, ಅನಾವೃಷ್ಟಿಗಳನ್ನೂ ನಿಯಂತ್ರಿಸುವುದು ನಮ್ಮ ಹಿಡಿತದಲ್ಲಿಲ್ಲ. ಆದರೂ ಕೆಲವುದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯ ಹಿನ್ನೆಲೆ, ವೇದಗಂಗಾ ನದಿಯು ತುಂಬಿ ಹರಿಯುತ್ತಿದ್ದು ಪ್ರವಾಹದ ಸನ್ನಿವೇಶ ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.

ಈ ನಿಟ್ಟಿನಲ್ಲಿ ನಿಪ್ಪಾಣಿ ಮತಕ್ಷೇತ್ರದ ಭಿವಶಿ ಗ್ರಾಮಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಭೇಟಿ, ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ. ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸಂಜೀವ್ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಶ್ರೀ. ಹರ್ಷಲ್ ಬೋಯರ,ಎ ಸಿ ಮಾಧವ ಗಿತ್ತೆ ಹಾಗೂ ಇತರ ಸರ್ಕಾರಿ ಅಧಿಕಾರಿಗಳು ಸ್ಥಳೀಯ ಮುಖಂಡರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *