“ಪ್ರಾಥಮಿಕ ಹಂತದಲ್ಲೇ ನಾವೂ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ಪ್ರಜೆಗಳಾಗುತ್ತಾರೆ”- ಶಾಸಕ, ಗಣೇಶ ಹುಕ್ಕೇರಿ

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಇಂದಿನ ಮಕ್ಕಳೆ ನಾಳಿನ ಪ್ರಜೆಗಳು : ಶಾಸಕ ಹುಕ್ಕೇರಿ

ಇಂದಿನ ಮಕ್ಕಳೆ ನಾಳಿನ ಪ್ರಜೆಗಳು, ಪ್ರಾಥಮಿಕ ಹಂತದಲ್ಲೇ ನಾವೂ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದು ಗಣೇಶ ಹುಕ್ಕೇರಿ ಅವರು ಹೇಳಿದರು.

ಚಿಕ್ಕೋಡಿ ನಗರದ ಲೋಕೋಪಯೋಗಿ ಭವನದಲ್ಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕಾರಾದ ಗಣೇಶ ಪ್ರಕಾಶ ಹುಕ್ಕೇರಿಯವರ ಹುಟ್ಟುಹಬ್ಬದ ನಿಮಿತ್ಯ ಸಾಹುಕಾರ ಹುಡುಗರಿಂದ ಆಯೋಜಿಸಲಾಗಿದ್ದ ಅಂಗನವಾಡಿ ಕೇಂದ್ರಗಳಿಗೆ ಉಚಿತ ಆಟೋಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳಿಗೆ ಪುಸ್ತಕ ಓದು ಎಷ್ಟು ಮುಖ್ಯವೋ ಆಟ, ಕ್ರೀಡೆಯು ಅಷ್ಟೇ ಮುಖ್ಯವಾಗಿರುತ್ತದೆ. ಆಟದ ಜೊತೆಗೆ ಪಾಠ ಕಲಿತರೆ ಮಕ್ಕಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇತ್ತೀಚೆಗೆ ಮಕ್ಕಳು ಮೊಬೈಲ್‌ಗಳಿಗೆ ಅಂಟಿಕೊಳ್ಳುತ್ತಿದ್ದಾರೆ.ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಬದಲು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು,ಸ್ಥಳೀಯ ಮುಖಂಡರಾದ ಪ್ರಭಾಕರ ಕೋರೆ, ಬಾಬು ಸಮತಶೆಟ್ಟಿ,ಶ್ಯಾಮ ರೇವಡೆ,ಸಾಬಿರ ಜಮಾದಾರ, ಮುದ್ದು ಜಮಾದಾರ,ವರ್ಧಮಾನ ಸದಲಗೆ,ರಾಜು ಗುಲಗುಂಜಿ ಹಾಗೂ ಸಾಹುಕಾರ ಹುಡುಗರು ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *