“ಕೇಂದ್ರ ಗೃಹ,ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಬೀರೇಶ್ವರ ನೂತನ ಮುಖ್ಯ ಕಛೇರಿ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕದ ಉದ್ಘಾಟನೆಗೆ ಆಹ್ವಾನಿಸಿದ”- ಜೊಲ್ಲೆ ದಂಪತಿ

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ನವದೆಹಲಿ :–

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಜಿ ಅವರನ್ನು ಭೇಟಿ ಮಾಡಿ ಬೀರೇಶ್ವರ ನೂತನ ಮುಖ್ಯ ಕಛೇರಿ ಮತ್ತು ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕದ ಉದ್ಘಾಟನೆಗೆ ಆಹ್ವಾನಿಸಿದ ಜೊಲ್ಲೆ ದಂಪತಿ.*

ಗುರುವಾರ ನವದೆಹಲಿಯಲ್ಲಿ ಮಾನ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರನ್ನು *ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ* ಹಾಗೂ *ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ* ಯವರು ಭೇಟಿ ಮಾಡಿ, ನಮ್ಮ ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಲಿ., (ಬಹು-ರಾಜ್ಯ) ಸಂಸ್ಥೆಯ ನೂತನ ಮುಖ್ಯ ಕಛೇರಿಯ ಉದ್ಘಾಟನೆಗೆ ಹಾಗೂ ಶ್ರೀ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಪ್ಪಾಣಿ ಎಥೆನಾಲ್ ಉತ್ಪಾದಿಸುವ (ಡಿಸ್ಟಿಲರಿ) ಘಟಕ ಮತ್ತು  ಆಧುನಿಕರಣಗೊಂಡ ಸಕ್ಕರೆ ಕಾರ್ಖಾನೆ ಸ್ಥಾವರ ಘಟಕದ ಉದ್ಘಾಟನೆಗೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯ ಉಪಾಧ್ಯಕ್ಷರಾದ ಡಾ.ಅಜೀತ ಘೋಪಛಡೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *