“ಸ್ವಾತಂತ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಎಂ.ಇ.ಎಸ್ ಪ್ರೇರಿತ ಭಗವಾ ಧ್ವಜವನ್ನು ರಾಷ್ಟ್ರ ಧ್ವಜದ ಜೊತೆಗೆ ಹಾಕಲು ಪ್ರಯತ್ನಿಸಿದವರನ್ನು ಬಂದಿಸಲು ಮನವಿ”

Share with Your friends

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ,ಚಿಕ್ಕೋಡಿ ವತಿಯಿಂದ ನಿಪ್ಪಾಣಿ ನಗರಸಭೆಯ ಸದಸ್ಯರನ್ನು ಬಂಧಿಸಲು ಮನವಿ

ನಿಪ್ಪಾಣಿ ನಗರಸಭೆ ಸದಸ್ಯರಾದ ಶ್ರೀ ಸಂಜಯ್‌ ಸಾಂಗಾಂವಕರ ಮತ್ತು ಶ್ರೀ ವಿನಾಯಕ ವಡೆ ಈ ಬ್ಬರು ಸದಸ್ಯರು, ಅಗಸ್ಟ 15 ಸ್ವಾತಂತ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಎಂ.ಇ.ಎಸ್ ಪ್ರೇರಿತ ಭಗವಾ ಧ್ವಜವನ್ನು ರಾಷ್ಟ್ರ ಧ್ವಜದ ಜೊತೆಗೆ ಹಾಕಲು ಪ್ರಯತ್ನಿಸಿ ರಾಷ್ಟ್ರಧ್ವಜಕ್ಕೆ ಅವರು ನಡೆಸಿದ್ದಾರೆ ಜೊತೆಗೆ ನಿಪ್ಪಾಣಿ ನಗರದಲ್ಲಿ ಕನ್ನಡ, ಮರಾಠಿ ಭಾಷಿಕರಲ್ಲಿ ಸಮಸ್ಯೆ ಉದ್ಭವಿಸುವ ಅವರ ರಾಜಕೀಯ ಲಾಭಕ್ಕಾಗಿ ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿಯೂ ಕೂಡ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿ ಒಂದು ಕಡೆ ನಾಡದ್ರೋಹಿ ಇನ್ನೊಂದು ಕಡೆ ದೇಶದ್ರೋಹಿ, ಕೆಲಸಗಳಲ್ಲಿ ತೊಡಗಿಸಿಕೊಂಡು ಸದಾ ಶಾರತಿ, ಸುವ್ಯವಸ್ಥೆಯನ್ನು ಹಾಳು ಮಾಡುವ ಕೃತ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಆದ ಕಾರಣ ಇವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ, ಒಂದು ವೇಳೆ ಬಂಧಿಸದಿದ್ದಲ್ಲಿ ಮುಂದೆ ಶಾಂತಿ ಸುವ್ಯವಸ್ಥೆ ಹದಗೆಟ್ಟರೆ, ಅದಕ್ಕೆ ನಾವು ಜವಾಬ್ದಾರನಲ್ಲ ಅಂತಾ ತಮ್ಮಲ್ಲಿ ಮತ್ತೊಮ್ಮೆ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತೇವೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯ ಪಿ ಎಸ್ ಐ ರವರಿಗೆ ಮನವಿಯನ್ನು ಸಲ್ಲಿಸಿದರು. ಸಂಧರ್ಭದಲ್ಲಿ

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷರಾದ ನಾಗೇಶ ಮಾಳಿ, ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ,ಚನ್ನಪ್ಪ ಬಡಿಗೇರ, ರಾಜೇಂದ್ರ ಪಾಟೀಲ,ರಫೀಕ್ ಪಠಾಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *