“ವಿಶೇಷ ಒಲಿಂಪಿಕ್ಸ್‌ ಭಾರತ ಅಧ್ಯಕ್ಷರಾಗಿ ಮಾಜಿ ಸಚಿವೆ, ಶಿಕಲಾ ಜೊಲ್ಲೆ ಆಯ್ಕೆ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಂಗಳೂರು :–

2023 ಆಗಸ್ಟ್‌ 31: ಕರ್ನಾಟಕದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿಶೇಷ ಒಲಿಂಪಿಕ್ಸ್‌ ಭಾರತ್‌ನ ಕರ್ನಾಟಕದ ಅಧ್ಯಕ್ಷ ರಾಗಿ ಗುರುವಾರ ಚುನಾಯಿತರಾಗಿದ್ದಾರೆ.

ವಿಶೇಷ ಚೇತನ ಮಕ್ಕಳಿಗೆ ರಾಷ್ಟ್ರೀಯ ಮಟ್ಟದಲ್ಲಿಕ್ರೀಡಾಕೂಟವನ್ನು ಹಮ್ಮಿಕೊಳ್ಳುವ ವಿಶೇಷ ಒಲಿಂಪಿಕ್ಸ್‌ ಭಾರತ್‌ನ ಚುನಾವಣೆ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಿತು.

ಕರ್ನಾಟಕದಿಂದ ಅಧ್ಯಕ್ಷ ರಾಗಿ ಶ್ರೀಮತಿ ಶಶಿಕಲಾ ಜೊಲ್ಲೆ, ಉಪಾಧ್ಯಕ್ಷ ರಾಗಿ ಶ್ರೀ ರೂಪಸಿಂಗ್‌ ಜನರಲ್‌, ಕಾರ್ಯದರ್ಶಿಯಾಗಿ ಶ್ರೀ ಅಮರೇಂದ್ರ ಎ., ಕ್ರೀಡಾ ನಿರ್ದೇಶಕರಾಗಿ ಶ್ರೀ ನಾರಾಯಣ ಐ.ಡಿ, ಶ್ರೀಮತಿ ಶಕುಂತಲಾ ಎಸ್‌. ಭಟ್‌, ಶ್ರೀ ಹಾಲಪ್ಪಎಸ್‌. ಹಿರೇಮಠ್‌, ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿರುವ ಶಶಿಕಲಾ ಜೊಲ್ಲೆ, ‘‘ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾ ನಡ್ಡಾ ಜಿ ಅವರ ನೇತೃತ್ವದಲ್ಲಿ ದೇಶದಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರ ನಾಯಕತ್ವದಲ್ಲಿ ಕರ್ನಾಟಕದಾದ್ಯಂತ ವಿಶೇಷ ಚೇತನ ಮಕ್ಕಳಿಗೆ ಅವಕಾಶ ಕಲ್ಪಿಸಿ ವಿಶೇಷ ಒಲಿಂಪಿಕ್ಸ್‌ಗೆ ಅವರನ್ನು ಸಿದ್ಧಗೊಳಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ನೊಂದವರ ವಿಶೇಷ ಮಕ್ಕಳ ಪಾಲಕರಿಗೆ ಧೈರ್ಯ ತುಂಬುವ ಜವಾಬ್ದಾರಿ ನಮ್ಮದಾಗಿದೆ,’’ ಎಂದು ಹೇಳಿದ್ದಾರೆ.


Share with Your friends

Leave a Reply

Your email address will not be published. Required fields are marked *