“ನೆಚ್ಚಿನ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನದ ಅಂಗವಾಗಿ “ಸೇವಾ ಪಾಕ್ಷಿಕ” ಅಭಿಯಾನ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಲೋಕಸಭಾ ವ್ಯಾಪ್ತಿಯ ಯಕ್ಸಂಬಾ ಪಟ್ಟಣದ ಜ್ಯೋತಿಬಾ ಮಂದಿರದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಚಿಕ್ಕೋಡಿ-ಸದಲಗಾ ಮಂಡಲ ವತಿಯಿಂದ ನಮ್ಮ ನೆಚ್ಚಿನ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನದ ಅಂಗವಾಗಿ “ಸೇವಾ ಪಾಕ್ಷಿಕ” ಅಭಿಯಾನದಡಿ ಫಲಾನುಭವಿಗಳಿಗೆ ಉಚಿತ ಉಜ್ವಲಾ ಗ್ಯಾಸ್ ವಿತರಣೆ,  ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆ ಆದೇಶ ಪತ್ರ,ಹಾಗೂ ಆಯುಷ್ಮಾನ ಕಾರ್ಡ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ  ಅಣ್ಣಾಸಾಹೇಬ ಜೊಲ್ಲೆ  ವಿತರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಇದಕ್ಕೂ ಮೊದಲು  ಕುಲದೇವರಾದ ಶ್ರೀ ಜ್ಯೋತಿರ್ಲಿಂಗ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರೂ ವಿಶೇಷ ಪೂಜೆ ಸಲ್ಲಿಸಿ,ಮೋದಿ ಜಿ ಅವರಿಗೆ ದೇವರು ಉತ್ತಮ ಆಯುರಾರೋಗ್ಯ,ಯಶಸ್ಸು ಮತ್ತು ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಬಳಿಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಮಾತನಾಡಿ ಹಗಲಿರುಳು ಎನ್ನದೆ ದೇಶದ ಶ್ರೇಯೋಭಿವೃದ್ಧಿಗಾಗಿ ಅವಿಶ್ರಾಂತ ಸೇವೆ ಸಲ್ಲಿಸುತ್ತಿರುವ ರಾಷ್ಟ್ರಸೇವಕ, ಭವ್ಯ ಭಾರತದ ಕನಸುಗಾರ ನಮ್ಮ ಪ್ರಧಾನಿಗಳವರ ಜನ್ಮದಿನವನ್ನು ದೇಶದಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತಿದ್ದು, “ಸೇವಾಪಾಕ್ಷಿಕ ” ಅಭಿಯಾನದಡಿ ಸೇವೆ ಸಮರ್ಪಿಸಲಾಗುತ್ತಿದೆ. 

ಈ ಸಂದರ್ಭದಲ್ಲಿ ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಶ ನೇರ್ಲಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ ಸದಲಗಾ ಮಂಡಲ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪವನ ಮಹಾಜನ,  ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ದೀಪಕ ಪಾಟೀಲ, ಶ್ರೀ ವಿಕಾಸ ಪಾಟೀಲ,ಶ್ರೀ ಸುಭಾಷ ಚೌಗಲಾ, ಸ್ಥಳೀಯ ಮುಖಂಡರು ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *