ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿರುವ ಲಿಬರಲ್ ಕೋ-ಆಪ್ ಮತ್ತು ಕ್ರೆಡಿಟ್ ಸೊಸೈಟಿಯ ಸಂಸ್ಥಾಪಕ ಹಾಗೂ ಎ.ಪ ಸದಸ್ಯ ಪ್ರಕಾಶ ಹುಕ್ಕೇರಿಯವರ ಮಾರ್ಗದರ್ಶನದಲ್ಲಿ 2022-23ನೇ ಸಾಲಿನಲ್ಲಿ 80.38 ಲಕ್ಷ ರೂ ಲಾಭಗಳಿದ್ದು ಸದಸ್ಯರಿಗೆ ಶೇ.21ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಹಾಗೂ ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಗುರುವಾರ ಪಟ್ಟಣದ ಅಣ್ಣಪೂರ್ಣೇಶ್ವರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಿದ್ದ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯು 4301 ಸದಸ್ಯರನ್ನು ಹೊಂದಿದ್ದು 38.56 ಲಕ್ಷ ರೂ. ಶೇರು ಬಂಡವಾಳ, 8.83 ಕೋಟಿ ರೂ.ನಿಧಿ, 77.01 ಕೋಟಿ ರೂ. ಠೇವು ಸಂಗ್ರಹಿಸಿ 38.61 ಕೋಟಿ ಸಾಲ ವಿತರಿಸಿದೆ. 80.38 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು 121.03 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ. ಕಳೆದ ಮೂರು ದಶಕಗಳಿಂದ ಸೊಸೈಟಿ ಉತ್ತಮ ಓದಿದರು. ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸದಲಗಾ ತಾಲೂಕಾಗಲಿದ್ದು ಚುನಾವಣೆ ಸಂದರ್ಭದಲ್ಲಿ ನೀಡಿದ ಐದೂ ಗ್ಯಾರಂಟಿಗಳು ಅಕ್ಟೋಬರ್ ಅಂತ್ಯದಲ್ಲಿ ಜಾರಿಗೊಳ್ಳಲಿವೆ. ರೈತರ
ಅನುಕೂಲಕ್ಕಾಗಿ ನೀರಾವರಿ ಯೋಜನ ಜಾರಿಗೆ ತರಲಾಗಿದ್ದು ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಮತ್ತು ನಮ್ಮ ತಂದೆಯವರು ಪ್ರಾಮಾಣಿಕ
ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಶಿವಗೌಡಾ ಪಾಟೀಲ, ರವೀಂದ್ರ ಮಿರ್ಜಿ ಮತ್ತು ಡಾ.ಚವ್ಹಾಣ ಮಾತನಾಡಿದರು. ರಾಜೇಂದ್ರ ಕರಾಳೆ, ವಿಜಯಸಿಂಹ ದೇಸಾಯಿ, ಸುನೀಲ ಸಪ್ತಸಾಗರೆ, ಶಿವಗೌಡಾ ಬಾವಚ, ಮಾರತಿ ಮಾನೆ, ಸುಭಾಷ ಕಲ್ಯಾಣಿ, ಚಿದಾನಂದ ಬೆಳೆ, ಬಾಳು ಖೋತ, ದಿಲೀಪ ದೇಸಾಯಿ, ಮಾರುತಿ ಪೂಜಾರಿ, ರವೀಂದ್ರ ಖೋತ, ಅಂಕುಶ ಖೋತ, ರತ್ನಪ್ಪಾ ಬಾಕಳೆ, ಮಲ್ಲು ಹವಾಲ್ದಾರ ಇದ್ದರು. ರಾಮಚಂದ್ರ ಮಡಿವಾಳೆ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎಂ.ಬಿ. ಕೇರೂರೆ ವರದಿ ಧುಪದಾಳ ನಿರೂಪಿಸಿದರು. ಡಾ.ಎ.ಎ. ಮಗದುಮ್ಮ ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಜಿಲ್ಲೆ ವಂದಿಸಿದರು.