ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಮಾಂಜರಿ ಗ್ರಾಮದ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಕುರಾನ್ ಪಠಣ ಮುಗಿಸಿದ ಮಕ್ಕಳ ಸತ್ಕಾರ ಸಮಾರಂಭ (ಜಲಸಾ) ವನ್ನು ಗ್ರಾಮದಲ್ಲಿ ರುವ ಮಸಜಿದ ಎ ಕುಬಾ ನಲ್ಲಿ ಏರ್ಪಡಿಸಲಾಗಿತ್ತು.

ಕುರಾನ್ ಪಠಣ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಧಾರ್ಮಿಕ ಆಚರಣೆ ಕುರಿತ ಭಾಷಣ ಹಾಗೂ ಅರೇಬಿಕ್ ಸುರಹ ಗಳ ಪಠಣ ನೋಡುಗರ ಮನಸ್ಸು ಗೆದ್ದಿತು. ಕುರಾನ್ ಪಠಣ ಪೂರ್ಣಗೋಳಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣೆ ಕಾಣಿಕೆ ನಿಡುವ ಮೂಲಕ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ 60 ಮಕ್ಕಳಿಗೆ ಪ್ರೋತ್ಸಾಹಿಕವಾಗಿ ಟಿಫಿನ್ ಬಾಕ್ಸ್ ನೀಡಲಾಯಿತು.
ಸಮಾರಂಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಮುಸ್ಲಿಂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕುಬಾ ಮಸಜಿದ್ ಆಡಲಿತ್ ಮಂಡಲಿ ಹಾಗೂ ಸಮಾಜದ ಗುರು ಹಿರಿಯರಾದ ಅಪ್ಪಾ ಮುಲ್ಲಾ , ಸಾದಿಕ ಮುಲ್ಲಾ , ಅಬ್ಬಾಸ ಕಿಲ್ಲೇದಾರ , ಭೋಲಾ ಘಾಲವಾಡೆ ,ನೊರು ತಾಂಬೊಳಿ, ಸದ್ದಾಮ ಘಾಲವಾಡೆ, ದಾವುದ ಮುಲ್ಲಾ, ಬಾಪು ಮುಲ್ಲಾ ಹಾಗೂ ಮುಖ್ಯ ಅತಿಥಿಯಾಗಿ ಮೌಲಾನಾ ಇಬ್ರಾಹಿಮ್, ಮೌಲಾನಾ ಆಸಿಫ , ಹಾಫಿಜ್ ಸುಲ್ತಾನ್, ಉಪಸ್ಥಿತರಿದ್ದರು. ಮೌಲಾನಾ ಮಿರಾ ನಿರೂಪಿಸಿದರು ರಿಯಾಜ ತಾಂಬೊಳಿ ವಂದಿಸಿದರು ವಿಷೇಶವಾಗಿ ಕಾರ್ಯಕ್ರಮ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಯಿತು.