“ಧುಳಗನವಾಡಿಯಲ್ಲಿ ಎಂಟನೇ ವರ್ಷದ ದುರ್ಗಾದೇವಿ ನಾಡಹಬ್ಬ ದಸರಾ ಉತ್ಸವ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ರಂಗದರ್ಶನ ಗ್ರಾಮೀಣ ವಿಕಾಸ ಸಂಘ(ರಿ) ಧುಳಗನವಾಡಿ  ಇವರ ಸಹಯೋಗದಲ್ಲಿ ಶ್ರೀ ದುರ್ಗಾದೇವಿ ನಾಡಹಬ್ಬ ದಸರಾ ಉತ್ಸವ ಕಾರ್ಯಕ್ರಮವನ್ನು  ಅಕ್ಟೋಬರ 15 ರಿಂದ 24 ರ ವರೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೋ.ಬ್ರ.ನಿ ಸದ್ಗರು ಬಸವಪ್ರಭು ಮಹಾರಾಜರು ಚಿಂಚಣಿ-ಮಜಲಟ್ಟಿ ವಹಿಸುವರು. ಖಡಕಲಾಟ ಪೋಲಿಸ್‌ ಸ್ಟೇಶನ ಪಿ.ಎಸ್.ಆಯ್‌ ಅನೀತಾ ರಾಠೋಡ ಇವರು ಕಾರ್ಯಕ್ರಮ ಉದ್ಘಾಟಿಸುವರು. ಗೌರವ ಅಥಿತಿಗಳಾಗಿ ಸ್ಥಳೀಯ ಗ್ರಾಮ ಪಂಚಾಯತ ಸರ್ವ ಸದಸ್ಯರು ಉಪಸ್ಥಿತರಿರುವರು. ಕಾರ್ಯಕ್ರಮದ ಅಂಗವಾಗಿ 16-10-2023 ರಂದು ಕೈಲಾಸ ಬಾರಮಲ ಇವರಿಂದ ಉಪನ್ಯಾಸ ಮಹಾಲಕ್ಷ್ಮೀ ಭಜನಾ ಮಂಡಳ ಭಜನಾ ಸೇವೆ 17 ರಂದು ಎಸ್‌ .ಆರ್‌ ಡೋಂಗರೆ ಇವರಿಂದ ಪ್ರವಚನ ಹಾಗೂ ಬಸವೇಶ್ವರ ಶಿವ ಭಜನಾ ಮಂಡಳ ಇವರಿಂದ ಭಜನಾ ಸೇವೆ 18 ರಂದು ಅಲ್ಲಗೌಡಾ ಪಾಟೀಲ ಪ್ರವಚನ ನಿರೂಪಿಸುವರು ಬಸವೇಶ್ವರ ಭಜನಾ ಮಂಡಳ ಇವರು ಭಜನಾ ಸೇವೆ 19 ರಂದು ಬಿ.ಎಸ್‌ ನಾಡಕರ್ಣಿ ಇವರಿಂದ ಉಪನ್ಯಾಸ ಹಾಗೂ ಸಂಗಮೇಶ್ವರ ಭಜನಾ ತಂಡ ಇವರು ಭಜನಾ ಸೇವೆ ನಡೆಸುವರು 20 ರಂದು ಕೇದಾರಿಗೌಡಾ ಪಾಟೀಲ ಇವರಿಂದ ಪ್ರವಚನ ಹಾಗೂ ಬ್ರಹ್ಮದೇವ ಭಜನಾ ಮಂಡಳ ಇವರಿಂದ ಭಜನಾ ಕಾರ್ಯಕ್ರಮ  21 ರಂದು ಹನಮಂತ ಶಾಸ್ತ್ರಿಗಳು ಪ್ರವಚನ ನಿರೂಪಿಸುವರು ಹನುಮಾನ ಭಜನಾ ಮಂಡಳ ಹಾಗೂ ಹರಿ ಭಜನಾ ಮಂಡಳ ಭಜನಾ ಸೇವೆ 22 ರಂದು ಸಾವಿತ್ರಿ ವಿಜಯನಗರೆ ಇವರಿಂದ ಪ್ರವಚನ ಜರುಗುವದು ಥಳೋಬಾ ಭಜನಾ ಮಂಡಳ ಇವರು ಭಜನಾ ಸೇವೆ ನೀಡುವರು 23 ರಂದು ಕಾಶಿನಾಥ ಕಾಗಲಗೊಂಬ ಇವರು ಉಪನ್ಯಾಸ ನೀಡುವರು ಲಕ್ಷ್ಮಣ ಕಂಕಣವಾಡಿ ಇವರಿಂದ ಭಜನಾ ಸೇವೆ ಅಕ್ಟೋಬರ 24 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗುವದು ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಿಗೆ ದುರ್ಗಾಶಕ್ತಿ ಪ್ರೇರಣಾ ಪುರಸ್ಕಾರ  ಸನ್ಮಾನ ಜರುಗುವದು ಎಂದು ಕಾರ್ಯಕ್ರಮದ ಸಂಘಟಕರಾದ ಮಾರುತಿ ಕಾಮಗೌಡಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  


Share with Your friends

Leave a Reply

Your email address will not be published. Required fields are marked *