“ಕಾಂಗ್ರೆಸ್‌ನಿಂದ ರೈತ ವಿರೋಧಿ ನೀತಿ” – ಅಣ್ಣಾಸಾಹೇಬ ಜೊಲ್ಲೆ
ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ರೈತರ ಪ್ರಗತಿಗೊಸ್ಕರ ರೈತರ ಯೋಜನೆಗಳನ್ನು ರದ್ದುಗೊಳಿಸುವ ಮುಖಾಂತರ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜಂಟಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ಸಂಸದರ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು,ರೈತರಿಗೆ ಅನುಕೂಲವಾಗಬೇಕು.
ರೈತರ ಪ್ರಗತಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ರೈತ ವಿದ್ಯಾನಿಧಿ ಯೋಜನೆ ಜಿಲ್ಲೆಗೊಂದು ಗೋಶಾಲೆ ಯೋಜನೆ, ಕಿಸಾನ್ ಸಮ್ಮಾನ ಯೋಜನೆ, ರೈತ ಶಕ್ತಿ ಯೋಜನೆ, ಕೃಷಿ ಭೂ ಮಾರಾಟ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸುವ ಮುಖಾಂತರ ರೈತರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಯೋಜನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು
ಕಾಂಗ್ರೆಸ್ ಪಕ್ಷದವರು ಮಾಡಿರುವ ಪಾದಯಾತ್ರೆ ಕೇವಲ ರಾಜಕೀಯ ಎಂಬುದನ್ನು ರಾಜ್ಯದಲ್ಲಿನ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡುವ ಮುಖಾಂತರ ಸಾಬೀತು ಪಡಿಸಿದೆ ಎಂದರು.
ವಿದ್ಯುತ್ ದರ ಏರಿಕೆಯಿಂದ ಜವಳಿ ಉದ್ಯಮ, ನೇಕಾರರು, ರೈಸ ಮಿಲ್ ಸೇರಿದಂತೆ ಈ ರೀತಿಯಾಗಿ ಅತಿ ಸಣ್ಣ, ಸಣ್ಣ ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಇವುಗಳಿಗೆ ಬಾರಿಹೊಡೆತ ಉಂಟಾಗಿದೆ. ಗೃಹ ಬಳಕೆಯ ವಿದ್ಯುತ್ ದರ ಹೆಚ್ಚಳ ಸಹ ಮಾಡುವ ಮುಖಾಂತರ ರೈತರಿಗೂ ಪೆಟ್ಟು ಕೊಟ್ಟಿದೆ ಎಂದರು.
ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಅಂತಹ
ಪೂಜನೀಯ ಗೋಮಾತೆಯನ್ನು ಆಗಿದೆ. ಅಕ್ರಮ ಗೋ ಸಾಗಾಣೆಕಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಿಂಪಡೆಯಲು ನಿರ್ಣಯಿಸಿದ್ದು ಖಂಡಿಸುತ್ತೇವೆ ಎಂದರು.
ರಾಜ್ಯದ 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲು 1000 ಕೋಟಿ ಅನುದಾನದ ಅಡಿಯಲ್ಲಿ ಸ್ಥಾಪಿಸಿದ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ನ್ನು ಕೂಡ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಲು ನಿರ್ಣಯಿಸಿರುವುದು ಸಹ ರೈತ ವಿರೋಧಿ ನೀತಿಯೇ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ , ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡ, ಸಂಜಯ ಪಾಟೀಲ ಹಾಗೂ ಅಪ್ಪಾಜಿಗೋಳ ಉಪಸ್ಥಿತರಿದ್ದರು.
+ There are no comments
Add yours