ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಚೌಸನ ಶಿಕ್ಷಣ ಮಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ
ಚಿಕ್ಕೋಡಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ.ಕನಕಾಚಲ ಕನಕಗಿರಿ ಹೇಳಿದರು
ಸ್ಥಳೀಯ ಚೌಸನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ ದೇಶದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಕಲಿಕೆ ಮೂಲಕ ಶಿಕ್ಷಣ ತುಂಬಿ ಉತ್ತಮ ಪ್ರಜೆಗಳನ್ನಾಗಿಸಲು ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದರು.
ಇನ್ನೋರ್ವ ಅತಿಥಿಗಳಾದ ಪ್ರೊಫೆಸರ್ ಸುಜಾತ ಚಂದ್ರ ಗಡೆ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ ಒಳ್ಳೆಯ ಸಂಸ್ಕಾರ ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಿ ಅವರನ್ನು ರಾಷ್ಟ್ರದ ಶ್ರೇಷ್ಠ ಸಂಪನ್ಮೂಲಗಳಾಗಿಸುತ್ತಾರೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ
ಡಾ . ನಂದು ಕುಮಾರ್ ಸಿಂಧೆ ಅವರು ಮಾತನಾಡಿ ದೇಶಕ್ಕೆ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕೊಡುಗೆ ಅಪಾರವಾಗಿದೆ ಶಿಕ್ಷಕರು ಮೌಡ್ಯತೆತೆಯಿಂದ ಹೊರಬಂದು ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರ ಶಿಕ್ಷಣಾರ್ಥಿಗಳಾದ ಸಚಿನ್ ಸುಬ್ಬಣ್ಣವರ್ ವಿಜಯಲಕ್ಷ್ಮಿ ತಳವಾರ್ ಮುಸ್ಕಾನ್ ಮುಜಾವರ್ ಶ್ರುತಿ ಬಡಿಗೆ ರ. ಪ್ರೇಮ ಕಾಳೆ. ಪ್ರಶಾಂತ್ ಕೋತ್ ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮಹಾರುನ್ನಿಸಾ ಪಕಾಳೆ ಸ್ವಾಗತಿಸಿದರು. ವೇದಿಕೆಯಲ್ಲಿ ಇಂದಿರಾ ಮೈತ್ರಿ, ಪ್ರಶಾಂತ್ ಪತ್ತಾರ್ ಕೃಷ್ಣ ಅರಗೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೀರ್ತಿ ಗಾಡಿ ವಡ್ಡರ್ ನಿರೂಪಿಸಿದರು.
+ There are no comments
Add yours