ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಜಿಎಲ್ ಬಿಸಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ನೂರಾರು ರೈತರು ಚಿಕ್ಕೋಡಿ- ಮಿರಜ ರಾಜ್ಯ ಹೆದ್ದಾರಿ ಹತ್ತಿರ ತಾಲ್ಲೂಕಿನ ಕೇರೂರ ಕ್ರಾಸ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ- ಮಿರಜ ರಾಜ್ಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ತಡೆ ಹಿಡಿದರು. ಕಾಲುವೆಗೆ ನೀರು ಹರಿಸದೇ ಇರುವ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕಾ ಅಧ್ಯಕ್ಷರಾದ, ಮಂಜುನಾಥ ಪರಗೌಡ ಮಾತನಾಡಿ ತಾಲೂಕಿನ ಕೇರೂರ, ಕಾಡಾಪೂರ, .ಅರಬ್ಯಾನವಾಡಿ, ರೂಪಿನಾಳ ಹಾಗೂ ನನದಿವಾಡಿ ಸೇರಿದಂತೆ ಹತ್ತಾರು ಗ್ರಾಮದ ರೈತರಿಗೆ ಅನುಕೂಲವಾಗುವ ಜಿ ಎಲ್ ಬಿಸಿ ಕಾಲುವೆಗೆ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ಕೊಡಲಾಗಿತ್ತು. ಆದರೂ ಕಾಲುವೆಗೆ ನೀರು ಬಿಡದೆ ಇರುವ ಕಾರಣ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ನೀರು ಬಿಡುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಅಧಿಕಾರಿ ನಾಗೇಶ ಕೋಲಕಾರ ಮಾತನಾಡಿ. ನೀರಾವರಿ ಸಲಹಾ ಸಮಿತಿ ಇದೆ. ಬೇಡಿಕೆ ಅನುಗುಣವಾಗಿ ನೀರು ಬಿಡಲು ಆದೇಶ ಮಾಡುತ್ತಾರೆ. ಬರಗಾಲ ಇರುವುದರಿಂದ ವ್ಯತ್ಯಾಸ ಆಗಿದೆ. ಸಲಹಾ ಸಮಿತಿ ಒಪ್ಪಿಗೆ ಕೊಟ್ಟರೆ ಇವತ್ತೆ ನೀರು ತರುತ್ತೇನೆ. ಕಿನಾಲ ಸ್ವಚ್ಚತೆ ಮಾಡಿ ನೀರು ತರಲಾಗುತ್ತದೆ.ಜಿಎಲ್ ಬಿಸಿ ಕಾಲುವೆಗೆ ನೀರು ಬಿಟ್ಟರೆ ಎಂಟು ದಿನಗಳ ಒಳಗಾಗಿ ಕೇರೂರ ಗ್ರಾಮಕ್ಕೆ ನೀರು ತರುತ್ತೇನೆ. ಇದನ್ನು ಒಪ್ಪದ ರೈತ ಮುಖಂಡ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಮಂತಿಗಳು ಬರಬೇಕು ನೀರಿನ ತೀರ್ಮಾನ ತಕ್ಷಣವೇ ಆಗಬೇಕು ಎಂದರು.ಕೊನೆಗೆ ಉಪವಿಭಾಧಿಕಾರಿ ಮಾಧವ ಗಿತ್ತೆ ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಚರ್ಚೆಗೆ 8 ದಿನ ಕಾಲಾವಕಾಶ ಕೇಳಿದರು.ರೈತ ಮುಖಂಡ ಮಂಜುನಾಥ ಪರಗೌಡರು ಮಾತನಾಡಿ ಸಭೆ ನಡೆಸಿ ತುರ್ತು ಪರಿಸ್ಥಿತಿಗೆ ಜಿ ಆರ್ ಬಿ ಸಿ. ಕಾಲುವೆಯಿಂದ ನೀರು ಕೊಡಿ ಮತ್ತು 8 ದಿನಗಳಲ್ಲಿ ಕಲ್ಲೊಳ ಬ್ಯಾರೇಜ್ ನಿಂದ ಬಂದ ಪಾಯಿಪ್ ಲಾಯಿನ ಮುಖಾಂತರ ಇಂಜಿಯರ್ ಜೊತೆ ಚರ್ಚೆ ನಡೆಸಿ ಜಿ ಎಲ್ ಬಿ ಸಿ ಕಾಲುವೆಗೆ ನೀರು ಕೊಡಬೇಕು ಎಂದು ತಿಳಿಸಿದರು ಇಲ್ಲವಾದಲ್ಲಿ ಮತ್ತೆ 8 ದಿನಗಳಲ್ಲಿ ಜಿಲ್ಲೆಯ ರೈತರನ್ನು ಸೇರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿ.ಚಳುವಳಿ ಕೈ ಬಿಟ್ಟರು
ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ, ಅಥಣಿ ರೈತ ಸಂಘದ ಅಧ್ಯಕ್ಷ ,ಮಹಾದೇವ ಮಡಿವಾಳ, ಪ್ರತಾಪ ಪಾಟೀಲ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಬಾಳಗೌಡ ಪಾಟೀಲ.ಶಂಕರ ಹೆಗಡೆ.ಜ್ಯೋತಿಬಾ ಮಗದುಮ.ಗುರುನಾಥ ಹೆಗಡೆ.ಬಾಪು ಕುತ್ತೆ. ಶಿವಾನಂದ ಕೋಳಿ.ಜ್ಯೋತಿ ಪಾಟೀಲ್.ಕೆಂಚಗೌಡ ಪಾಟೀಲ.ಮಲ್ಲು ಕಾನಡೆ .ದುಂಡಪ್ಪ ಹಿಂಗ್ಲಜೆ.ಇನ್ನೂ ನೂರಾರು ರೈತರು ಉಪಸ್ಥಿತರಿದ್ದರು.
+ There are no comments
Add yours