ವರದಿ : ಮಿಯಾಲಾಲ ಕಿಲ್ಲೇದಾರ
ಬೆಂಗಳೂರು :–
ಕಳೆದ 3-4 ದಿನಗಳಲ್ಲಿ ರಾಜ್ಯದಲ್ಲಿ ಗಾಳಿ ಪ್ರಮಾಣದಲ್ಲಿ ಭಾರಿ ಇಳಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಪವನ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಸಾಮಾನ್ಯವಾಗಿ 2000 ಮೆಗಾವ್ಯಾಟ್ ಇರುತ್ತಿದ್ದ ಸುಮಾರು 500 ಮೆಗಾವ್ಯಾಟ್‌ಗೆ ಇಳಿದಿದೆ.
ಮತ್ತೊಂದೆಡೆ ಯುಪಿಸಿಎಲ್ ಲೈನ್ 900 ಮೆಗಾವ್ಯಾಟ್ ತ್ರಾಂತ್ರಿಕ ದೋಷದಿಂದಾಗಿ ಟ್ರಿಪ್ ಆಗಿದ್ದು, ಅದನ್ನು ಶೀಘ್ರವಾಗಿ ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ.
ಪಾವಗಡ ಸೋಲಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದಿರುವುದರಿಂದ ಸೌರ ವಿದ್ಯುತ್ ಉತ್ಪಾದನೆಯಲ್ಲಿ 500 ಮೆಗಾವ್ಯಾಟ್ ನಷ್ಟವಾಗಿದೆ
ಈ ಸಮಸ್ಯೆಗಳ ನಿರ್ವಹಣೆಗೆ ಇಂಧನ ಇಲಾಖೆ ಕೇಂದ್ರದಿಂದ ವಿದ್ಯುತ್ ವಿನಿಮಯ ಖರೀದಿಗಾಗಿ ಪ್ರಯತ್ನ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ತಿಳಿಸಿದೆ ಇದಕ್ಕೆ ಸಾರ್ವಜನಿಕರ ಸಹಕಾರವು ಅಷ್ಟೇ ಅತ್ಯಗತ್ಯವಾಗಿದೆ
+ There are no comments
Add yours