ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಸದಲಗಾ ಪಟ್ಟಣದ ವ್ಯಾಪ್ತಿಯ *ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆದೇಶಿಸಿ ಕನಾ೯ಟಕ ಸರ್ಕಾರದ ಕಾನೂನು ಪರಿಪಾಲನೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪುರಸಭೆ ಅಧಿಕಾರಿಗಳಿಗೆ ಹಾಗೂ ಸದಲಗಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಕನಾ೯ಟಕದಲ್ಲಿ ಕನ್ನಡವೇ ಸಾವ೯ಭೌಮ .ಎಲ್ಲ ನಾಮಫಲಕಗಳಲ್ಲಿ ಶೇ 60% ಕನ್ನಡ ಬಳಕೆ ಆಗಲೇಬೇಕು ಇದಕ್ಕೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳಿಗೆ ನೋಟಿಸ್ ನೀಡಿ ಸರ್ಕಾರದ ನಿಯಮದಂತೆ ಕ್ರಮ ಕೈಗೊಂಡು ಕನ್ನಡದ ಹಿತಕಾಯುತ್ತೇವೆ ಅಂಗಡಿ ಮುಂಗಟ್ಟುಗಳಿಗೆ ಪರವಾನಿಗೆ ಕೊಡುವಾಗ ಶೇ 60% ಕನ್ನಡ ಫಲಕ ಶರತ್ತು ವಿಧಿಸಿ ಅನುಮತಿಗೆ ಕ್ರಮ ಕೈಗೊಳ್ಳುತ್ತೆವೆ ಸದಲಗಾ ಪ್ರತಿಯೊಂದು ನಾಮಫಲಕದಲ್ಲಿ ಕನ್ನಡ ಅಗ್ರದಲ್ಲಿ ರಾರಾಜಿಸುವಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೆವೆ ಎಂದರು ಈ ಸಂದಭ೯ದಲ್ಲಿ ಸದಲಗಾ ಕರವೇ ಅಧ್ಯಕ್ಷರು ಸಂಜು ಲಠ್ಠೆ ಉಪಾಧ್ಯಕ್ಷರಾದ ವೈಭವ ಪಾಟೀಲ್, ಪ್ರಧಾನ ಕಾರ್ಯದರ್ಶಿ ಅಭಿಷೇಕ ನಾಂದ್ರೆ,ಕಾರ್ಯದರ್ಶಿ ಅಮಿತ ಹಣಬರ, ಸಂಚಾಲಕರಾದ ವಿಕಾಸ ನಿಡಗುಂದೆ,ಪ್ರತೀಕ ಗಿಡಗಲ್ಲೆ,ರೋಹನ ನವನಾಲೆ,ರಾಜು ವಾಲಿ, ಮಹೇಶ ಕೊಲ್ಲಾಪುರೆ, ನೀತಿನ ದೇಸಾಯಿ, ಮಲ್ಲಪ್ಪಾ ವಿಭುತ್ತೆ, ನದೀಮ್ ಲಾಟಕರ, ವಿಠ್ಠಲ್ ಹೂಗಾರ, ವಿಶಾಲ್ ಕಟ್ಟೇಕರ, ಸಂದೇಶ ಭಿವಸೆ, ಅಭಿ ದೇಸಾಯಿ, ಜೀತ ಪಾಟೀಲ್. ಪದಾಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours