ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಬರ ಪರಿಹಾರ ರೈತರ ಸಾಲಕ್ಕೆ ಬ್ಯಾಂಕ್ ನವರು ಜಮಾ ಮಾಡಬಾರದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರವನ್ನು ಅದೇ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕುಗಳು ವರ್ತನೆ ಕ್ರೂರವಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಖಂಡಿಸುತ್ತದೆ.
ರೈತರ ಸಂಕಷ್ಟಕ್ಕೆ ಕೊನೆಯಿಲ್ಲ ಎನ್ನುವಂತಾಗಿದೆ ಹೆಸರಿಗೆ ಮಾತ್ರ ಅನ್ನದಾತ ಆದರೆ ಅವರ ಕಣ್ಣೀರು ವರಿಸಿ ಅವರಿಗೆ ದಾತನಾಗಿ ನಿಲ್ಲಬೇಕಾದ ರಾಜ್ಯ ಸರ್ಕಾರ ಕೈ ಕಟ್ಟಿ ಕುಳಿತಿದೆ ಕೇಂದ್ರ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಸರಿಯಾದ ರೀತಿಯಲ್ಲಿ ರೈತರ ಕೈಗೆ ತಲುಪುವಂತಾಗಬೇಕು ಮತ್ತು ಇನ್ನೂ ಸಾವಿರಾರು ರೈತರಿಗೆ ಬರ ಪರಿಹಾರ ಮೊತ್ತ ಜಮಾ ಆಗಿಲ್ಲ ಅದನ್ನು ಕೂಡ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಪರಿಹಾರ ಒದಗಿಸುವಂತಹದ್ದು ಆಗಬೇಕು.
ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ರೈತರು ಬ್ಯಾಂಕ್ ಗಳ ಮುಂದೆ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಮುಖಂಡರು ಸಂಜು ಬಡಿಗೇರ ಒತ್ತಾಯಿಸಿದರು.
+ There are no comments
Add yours