ವರದಿ : ಮಿಯಾಲಾಲ ಕಿಲ್ಲೇದಾರ
ಬೆಳಗಾವಿ :–
ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ ಶಾಲೆಗಳಿಗೆ ಮಾತ್ರ ರಜೆ
ಬೆಳಗಾವಿ : ಜುಲೈ 28(ಕರ್ನಾಟಕ ವಾರ್ತೆ): ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ ಘೋಷಿಸಲಾಗಿರುತ್ತದೆ.
ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಬಾರವಾಡ, ಕಾರದಗಾ ಗ್ರಾಮಗಳು;
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ, ಹೊಸೂರ ಮತ್ತು ಬಡಕುಂದ್ರಿ ಗ್ರಾಮಗಳು
ಕಾಗವಾಡ ತಾಲ್ಲೂಕಿನ ಜೂಗೂಳ, ಶಾಪುರ, ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ ಮತ್ತು ಬನಜವಾಡ ಗ್ರಾಮಗಳು
ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಜನವಾಡ, ಕಲ್ಲೋಳ ಹಾಗೂ ಅಂಕಲಿ ಗ್ರಾಮಗಳ ಶಾಲೆಗಳಿಗೆ ಮಾತ್ರ ಜುಲೈ 29 ಮತ್ತು ಜುಲೈ 30 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
+ There are no comments
Add yours