ಅಂತೂ ಇಂತೂ ನಿಗಮ ಮಂಡಳಿಗಳ ಪಟ್ಟಿ ಪ್ರಕಟ: ಹ್ಯಾರೀಸ್ ಗೆ BDA, ಶ್ರೀನಿವಾಸ್ ಗೆ KSRTC, ಶಿವಣ್ಣಗೆ BMTC..ಸಂಗಮೇಶ್ ಗೆ ಲ್ಯಾಂಡ್ ಆರ್ಮಿ.
ಬೆಂಗಳೂರು: ಹಲವು ತಿಂಗಳ ಕಾತುರ ಹಾಗೂ ನಿರೀಕ್ಚೆಗೆ ಸರ್ಕಾರ ಕೊನೆಗೂ ತೆರೆ ಎಳೆದಿದೆ.32 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪ್ರಕಟಿಸಿದೆ.ಪ್ರಮುಖ ಆಯಕಟ್ಟಿನ ನಿಗಮಗಳ ಪಟ್ಟಿಯನ್ನು ಮೊದಲು ಪ್ರಕಟಿಸಿದ್ದು ಮಳವಳ್ಳಿ ಎಮ್ಮೆಲ್ಲೆ ನರೇಂದ್ರ ಸ್ವಾಮಿ,ಶಾಂತಿನಗರ ಎಮ್ಮೆಲ್ಲೆ ಎನ್ ಎ ಹ್ಯಾರೀಸ್, ತುಮಕೂರಿನ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರಿಗೆ ಕೆಎಸ್ ಆರ್ ಟಿಸಿ, ಅರಸಿಕೆರೆ ಶಾಸಕ ಶಿವಲಿಂಗೆಗೌಡ ಅವರಿಗೆ ಗೃಹಮಂಡಳಿ, ಭದ್ರಾವತಿ ಎಮ್ಮೆಲ್ಲೆ ಸಂಗಮೇಶ್ ಅವರಿಗೆ ಕೆಆರ್ ಐಡಿಎಲ್ ನಿಗಮಗಳ ಅಧ್ಯಕ್ಷಸ್ಥಾನ ನೀಡಲಾಗಿದೆ. ಸರ್ಕಾರದ ಆದೇಶವನ್ನು […]
“ಕಳಂಕಿತ” ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!
ಅಕ್ರಮ ಕಣ್ಣಿಗೆ ರಾಚುವಂತಿದ್ರೂ ಡಿ ಸಿ.ನಾಗರಾಜಮೂರ್ತಿ ವಿರುದ್ದ ಕ್ರಮವೇಕಿಲ್ಲ…?! BMTCಯಲ್ಲಿ ಇದೆಂಥಾ ಅನ್ಯಾಯ..!? ಕ್ಷುಲ್ಲಕ ತಪ್ಪೆಸಗಿದ್ರೆ ಸಿಬ್ಬಂದಿಗೆ ಸಸ್ಪೆಂಡ್-ಡಿಸ್ಮಿಸ್.. ಗಂಭೀರ ಆಪಾದನೆಯಿದ್ರೂ ಕ್ಷಮಾದಾನ..?! ಬೆಂಗಳೂರು: ಬಿಎಂಟಿಸಿ ಆಡಳಿತದ ಕಾರ್ಮಿಕ ವಿರೋಧಿ ಧೋರಣೆ ಮತ್ತೆ ಸಾಬೀತಾಗಿದೆ.ನಮ್ಮ ಬೆಂಬಲ-ಸಹಕಾರ ಯಾವತ್ತಿದ್ರೂ ಅಧಿಕಾರಿಗಳಿಗೇ ವಿನಃ ,ಕೆಳಹಂತದ ಸಿಬ್ಬಂದಿಗಲ್ಲ. ಅಧಿಕಾರಿಗಳು ಕಣ್ಣಿಗೆ ರಾಚುವಂತ ಗಂಭೀರ ಸ್ವರೂಪದ ತಪ್ಪು ಮಾಡಿದ್ರೂ ಅವರನ್ನು ರಕ್ಷಿಸುವುದೇ ನಮ್ಮ ಮೂಲಮಂತ್ರ.ಹಾಗೆಯೇ ಕೆಳಹಂತದ ಸಿಬ್ಬಂದಿ ಕ್ಷುಲ್ಲಕ ಎನಿಸುವಂತ ತಪ್ಪೆಸಗಿದ್ರೂ ನಮಗದು ಗಂಭೀರ.ಅವರನ್ನು ಅಮಾನತುಗೊಳಿಸದೆ ಬಿಡೋ ಪ್ರಶ್ನೆಯೇ ಇಲ್ಲ ಎನ್ನುವಂತ ಆಡಳಿತದ […]
BMRCL VIOLATES GOVERNMENT ORDER, ALSO INSULTS TO DR.B.R AMBEDKAR..!?”ಸಂವಿಧಾನಶಿಲ್ಪಿ”ಯನ್ನೇ ಮರೆತುಬಿಡ್ತಾ BMRCL..?!-ಗಣತಂತ್ರ ದಿನದಂದೇ ಅಂಬೇಡ್ಕರ್ ಗೆ ಅಗೌರವ.!?
ಬೆಂಗಳೂರು: ನಮಗೆ ಲಭ್ಯವಾಗಿರುವ ದೃಶ್ಯಾವಳಿಗಳು ನಮ್ಮ ಹೆಮ್ಮೆಯ ಮೆಟ್ರೋದ ಆಡಳಿತದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ-ಅಗೌರವವನ್ನು ಸಾರಿ ಹೇಳುತ್ತದೆ.ಇದು ಸತ್ಯವೇ ಆಗಿದ್ದಲ್ಲಿ ಬಿಎಂಆರ್ ಸಿಎಲ್ ಆಡಳಿತ ಕೇವಲ ಅಂಬೇಡ್ಕರ್ ವಿರೋಧಿ ಅಷ್ಟೇ ಅಲ್ಲ, ಸಂವಿಧಾನವಿರೋಧಿಯೂ ಹೌದೆಂದು ಬೇಸರ-ಅಪಮಾನ-ಆಕ್ರೋಶದಿಂದಲೇ ಹೇಳಬೇಕಾಗುತ್ತದೆ. ದೇಶಕ್ಕೆ ಸಂವಿಧಾನದಂಥ ಮಹಾನ್ ಗ್ರಂಥ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಎನ್ನುವುದೇ ಬಿಎಂಆರ್ ಸಿಎಲ್ ಗೆ ಗೊತ್ತಿಲ್ಲ ಎನ್ನಿಸುತ್ತೆ.ಹಾಗಾಗಿನೇ ಸರ್ಕಾರ ಈ ಬಗ್ಗೆ ಹೊರಡಿಸಿದ್ದ ಆದೇಶವನ್ನೂ ಗಾಳಿಗೆ ತೂರಿದೆ. ಗಣರಾಜ್ಯೊತ್ಸವ ಸಮಾರಂಭಗಳಂದು ರಾಜ್ಯದ ಸರ್ಕಾರಿ ಕಚೇರಿಗಳು.ಸರಕಾರಿ ಶಾಲಾ […]
EXCLUSIVE…BMTC ಲಾಕ್‌ಡೌನ್ “ಗೋಲ್ಮಾಲ್”ಮುಖ್ಯಲೆಕ್ಕಾಧಿಕಾರಿ SUSPEND…ಬಾಡಿಗೆ ವಿನಾಯ್ತಿ” ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯಲ್ಲಿ ನಡೆದಿತೆನ್ನಲಾದ ಮತ್ತೊಂದು ಭಾರೀ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರ್ಥಿಕ ವಿಭಾಗದ ಮುಖ್ಯಾಧಿಕಾರಿಯವರ “ತಲೆದಂಡ”ವಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಅದೇ ವಿಭಾಗದ ಇನ್ನಷ್ಟು ಅಧಿಕಾರಿ ಸಿಬ್ಬಂದಿ ವಿರುದ್ದವೂ ಕಠಿಣ ಕ್ರಮಕ್ಕೆ ಆದೇಶವಾಗಿದೆ ಯಂತೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ ಪ್ರಸಾದ್ ಅವರ ಆದೇಶದ ಮೇರೆಗೆ ಈ ಮಹತ್ವದ ಆದೇಶ ಹೊರಬಿ ದ್ದಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ. ಲಾಕ್ […]
3 ಸಾರಿಗೆ ನಿಗಮಗಳ ನೂತನ ಅಧ್ಯಕ್ಷರಿಗೆ ನೂರು ಸವಾಲು…-ದಾರಿ ತುಂಬೆಲ್ಲಾ ಮುಳ್ಳು…-ಅವ್ಯವಸ್ಥೆ ಸರಿಯಾದರೆ ಮಾತ್ರ ಉದ್ದಾರ…-ಶ್ರಮಿಕರ ಬದುಕೂ ಹಸನು…
ಬೆಂಗಳೂರು: ಮೊದಲಿಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿ ರುವ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶ್ರೀನಿವಾಸ್,ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಿವಣ್ಣ ಮತ್ತು ಬೆಳಗಾಂ ಜಿಲ್ಲೆ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸ್ತೇವೆ..ನೀವು ಇರುವಷ್ಟು ದಿನಗಳಲ್ಲಿ ಎಲ್ಲವೂ ಚೆನ್ನಾಗಿ ನಡೆದು ಸಮಸ್ಯೆಗಳಿಂದ ತುಂಬಿತುಳುಕುತ್ತಿರುವ ನಿಗಮಗಳಿಗೆ ಚೈತನ್ಯ-ಪುನಶ್ಚೇತನ ಸಿಗುವಂತಾಗಲಿ.. ನೂತನ ಅಧ್ಯಕ್ಷರು, ಬಂದ ಪುಟ್ಟ ಹೋದ ಪುಟ್ಟರಂತಾಗದಿರಲಿ.. ಶಕ್ತಿ ಯೋಜನೆ ಸಮರ್ಪಕ ನಿರ್ವಹಣೆ […]
MLA N.A. HARRIS NEW CHAIRMAN TO BDA..!? BDA ಅಧ್ಯಕ್ಷಗಾದಿಗೆ MLA ಎನ್.ಎ ಹ್ಯಾರೀಸ್ ಹೆಸರು ಫೈನಲ್..?!
CM ಸಿದ್ದರಾಮಯ್ಯ, DCM ಡಿ.ಕೆ.ಶಿವಕುಮಾರ್ ಗೆ ಅತ್ಯಾಪ್ತರಾಗಿರುವ ಹ್ಯಾರೀಸ್. ಬೆಂಗಳೂರು: ಎಲ್ಲಾ ನಿರೀಕ್ಷೆಯಂತಾದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ)ದ ಅಧ್ಯಕ್ಷಗಾಧಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಗೆ ಒಲಿಯಬಹುದೆನ್ನಲಾಗ್ತಿದೆ ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಸರ್ಕಾರ ಕೊಡುತ್ತಾ ಬಂದಿದ್ದ ಡೆಡ್ ಲೈನ್ ಎಲ್ಲಾ ಮುಗಿದಿದ್ದು ಯಾವ್ ಕ್ಷಣದಲ್ಲಿ ಬೇಕಾದ್ರೂ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಹೊರಬೀಳಬಹುದೆಂದು ಹೇಳಲಾಗುತ್ತಿದೆ.ಅನುಭವಿಗಳಿಗೆ ಆಯಕಟ್ಟಿನ ಹುದ್ದೆಗಳು ಸಿಗುವ ಸಾಧ್ಯತೆ ದಟ್ಟವಾಗಿರುವ ಜತೆಗೇನೆ ಪ್ರಮುಖ ನಿಗಮಮಂಡಳಿಗಳಲ್ಲಿ ಒಂದಾದ ಬಿಡಿಎ ಅಧ್ಯಕ್ಷರಾಗಿ […]
EXCLUSIVE…BMTC ಯಲ್ಲಿ DC ನಾಗರಾಜಮೂರ್ತಿ “ಕಮಾಲ್”.! :ತೋಡಿದ “ಖೆಡ್ಡಾ”ಕ್ಕೆ ತಾವೇ ಬಿದ್ದು “ಪಜೀತಿ”ಮಾಡಿಕೊಂಡ್ರಾ…!..-ಚಾಲಕನಿಗೆ ವೈದ್ಯಕೀಯ “ರಜೆ” ಕೊಟ್ಟು “ಗೈರು” ನಾಟಕ ಸೃಷ್ಟಿಸಿದ್ರಾ….!
ಇದೆಲ್ಲಾ ಹೇಗೆ ಸಾಧ್ಯ ಸಾರ್…ವೈದ್ಯಕೀಯ ರಜೆ ಮಂಜೂರು ಮಾಡಿದ್ದು ನಾಗರಾಜ್ ಮೂರ್ತಿನೇ..! ಗೈರಾದ್ರು 3 ತಿಂಗಳು ವೇತನ ಕೊಡಿಸಿದ್ದೂ ಅವರೇ..! ವಿಚಾರಣೆ ನಡೆಸದೆ ಚಾಲಕನಿಗೆ ಶಿಕ್ಷೆಯ ತೀರ್ಮಾನ ಕೈಗೊಂಡಿದ್ದು ಅವರೇ..! ಬೆಂಗಳೂರು;ಮೊದಲಿಗೆ,ಬಿಎಂಟಿಸಿ ನೂತನ ಎಂಡಿಯಾಗಿ ಅಧಿಕಾರ ಸ್ವೀಕರಿಸಿರುವ ರಾಮಚಂದ್ರನ್ ಅವರಿಗೆ ಶುಭಾಷಯಗಳು.ಕೆಲವೇ ಕೆಲವರ ಹಿತಾಸಕ್ತಿಗೆ ಈಡಾಗಿ ನಷ್ಟದ ಅಂಚಿಗೆ ತಲುಪಿರುವ ಸಂಸ್ಥೆಯನ್ನು ಲಾಭದ ಹಳಿಗೆ ತಂದು ಗಮನಾರ್ಹ ಬದಲಾವಣೆಗೆ ಕಾರಣವಾಗಬೇಕೆನ್ನುವ ಉಮೇದು-ಹುಮ್ಮಸ್ಸಿ ನಲ್ಲಿರುವ ನೂತನ ಎಂಡಿ ಅವರ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದು ನಮ್ಮ ಶುಭ ಹಾರೈಕೆ. ನೂತನ […]
BMTC MD ಸತ್ಯವತಿ ವರ್ಗಾವಣೆ ಹಿಂದಿನ “ಸತ್ಯ”ಗಳೇನು…!?ಸ್ಥಳ ತೋರಿಸದೆ “ಔಟ್” ಮಾಡೊಕ್ಕೆ “ಕಾರಣ”ಗಳೇನು..?! ಇಲ್ಲಿದೆ “EXCLUSIVE” ಡೀಟೈಲ್ಸ್…
“ಸಾರಿಗೆ ಸಿಬ್ಬಂದಿ ವಿರೋಧಿ ಧೋರಣೆ”ನೇ ಸತ್ಯವತಿಗೆ ಮುಳುವಾಯ್ತಾ..? ಸಿಎಂಗೆ ಬರೆದ ದೂರು-ಸಾರಿಗೆ ಯೂನಿಯನ್ ನ ವ್ಯಾಪಕ ಆಕ್ರೋಶಕ್ಕೆ ಬೆಲೆ ತೆತ್ತರಾ ಸತ್ಯವತಿ..! ಬೆಂಗಳೂರು: ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ, ಅಧಿಕಾರವನ್ನು ತನಗೆ ಮನಸೋಇಚ್ಛೇ ಚಲಾಯಿಸಿದರೆ ಏನಾಗಬಹುದೆನ್ನುವುದಕ್ಕೆ ಬಹುಷಃ ಐಎಎಸ್ ಸತ್ಯವತಿ ಅವರ ವರ್ಗಾವಣೆ ದುರಂತ ನಿದರ್ಶನವಾಗಬಹುದಾ..? ಗೊತ್ತಿಲ್ಲ..ಆದರೆ ಸಣ್ಣ ಮುನ್ಸೂಚನೆ ಕೊಡದೆ ಅವರನ್ನು ಸರ್ಕಾರ ಸ್ಥಳವನ್ನೂ ತೋರಿಸದೆ ವರ್ಗಾವಣೆ ಮಾಡಿರುವುದು ಇಂತದ್ದೊಂದು ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿದೆ. ಸತ್ಯವತಿ ಮೇಡಮ್ ,ತಮ್ಮ ಸ್ವಯಂಕೃತಾಪರಾಧಕ್ಕೆ ಸರಿಯಾದ ಬೆಲೆ ತೆತ್ತಿದ್ದಾರೆ ಎನಿಸುತ್ತದೆ.ಬಿಎಂಟಿಸಿ […]
NEW MD TO BMTC: BMTC ಗೆ ನೂತನ ಸಾರಥಿ: ರಾಮಚಂದ್ರನ್ ಹೊಸ MD -ಸತ್ಯವತಿ ಔಟ್..
ಸಾರಿಗೆ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಟನೆಗಳ ಒತ್ತಾಯಕ್ಕೆ ಮಣಿದು ವರ್ಗಾವಣೆ.?! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ) ಗೆ ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ರಾಮಚಂದ್ರನ್ ನಿಯೋಜನೆಗೊಂಡಿದ್ದಾರೆ. ರಾಜ್ಯ ಸರ್ಕಾರದಿಂ ಹೊರಟಿರುವ ವರ್ಗಾವಣೆ ಆದೇಶದಲ್ಲಿ ಹಾಲಿ ಎಂಡಿಯಾಗಿರುವ ಸತ್ಯವತಿ ಅವರನ್ನು ವರ್ಗಮಾಡಿ ರಾಮಚಂದ್ರನ್ ಅವರನ್ನು ನಿಯೋಜನೆ ಮಾಡಲಾಗಿದೆ.ಅಂದ್ಹಾಗೆ ಸತ್ಯವತಿ ಅವರಿಗೆ ಯಾವುದೇ ಜಾಗವನ್ನು ತೋರಿಸದೆ ವರ್ಗ ಮಾಡಲಾಗಿದೆ. ಅಂದ್ಹಾಗೆ ರಾಮಚಂದ್ರನ್ ಅವರು ಬಿಬಿಎಂಪಿಯಲ್ಲಿ ಚುನಾವಣಾ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು.ಚುನಾವಣೆಯಲ್ಲಿ ಆಗಬೇಕಾದ ಸಾಕಷ್ಟು ಸುಧಾರಣೆಗಳ ಬಗ್ಗೆ […]
ಕೋರ್ಟ್ ಕಲಾಪ ವೇಳೆ ನ್ಯಾಯಮೂರ್ತಿ ಪ್ರಸನ್ನ ವರಾಳೆ ಗದ್ಗದಿತ-ಭಾವುಕ
ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರ ಅಂತಃಕರಣಕ್ಕೆ ಕರುನಾಡು ಮೆಚ್ಚುಗೆ ಬೆಂಗಳೂರು: ಹೈ ಕೋರ್ಟ್ ನಲ್ಲಿ ಇಂಥಾ ಘಟನೆಗಳು ನಡೆಯುವುದು ಅಪರೂಪ ಇರಬೇಕು.ಅಂತದ್ದೇ ಒಂದು ಘಟನೆಗೆ ಹೈ ಕೋರ್ಟ್ ನಲ್ಲಿ ನಡೆದ ಕಲಾಪವೇ ಸಾಕ್ಷಿ.ಮಲಗುಂಡಿಯಲ್ಲಿ ಜನರನ್ನು ಇಳಿಸಿ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮೇರೆಗೆ ನಡೆಯುತ್ತಿದ್ದ ಕಲಾಪದ ವೇಳೆ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ. ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆ ಅವರು ಕಲಾಪದ ವೇಳೆ ಗದ್ಗಿತರಾದ ಎಂದು ಮಾದ್ಯಮಗಳು ಮಾಡಿದ ಸುದ್ದಿ […]