“ಅಂಕಲಿ ಗ್ರಾ ಪಂ ಯಲ್ಲಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ” ಚಾಲನೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಗಂಡು-ಹೆಣ್ಣಿಗೆ ಸಮಾನ ಕೂಲಿ,ಹಿರಿಯ ನಾಗಕರಿಗರಿಗೆ ಮತ್ತು ವಿಶೇಷಚೇತನರಿಗೆ ಶೇ.೫೦% ರಷ್ಟು ಕೂಲಿ ಕೆಲಸದಲ್ಲಿ ರಿಯಾಯತಿ ಇರುತ್ತದೆ. ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವುದಕ್ಕಾಗಿ. ಮನೆ ಮನೆ ಪ್ರಚಾರ ಕೈಗೊಂಡು ಯೋಜನೆಯ ಜಾಗೃತಿ ಮೂಡಿಸಲಾಗುವುದೆಂದು ತಾಲೂಕಾ ಐ.ಇ.ಸಿ ಸಂಯೋಜಕರಾದ ರಂಜೀತ ಕಾಂಬಳೆ ಹೇಳಿದರು.
ಬುಧವಾರ ತಾಲುಕಿನ ಅಂಕಲಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಸನ್ ೨೦೨೪-೨೫ ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು “ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ” ಚಾಲನೆ ನೀಡಿ ಮಾತನಾಡಿದರು. ಯೋಜನೆಯ ಹೆಚ್ಚು ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಗ್ರಾಮ ಪಂಚಾಯತಿಗಳಲ್ಲಿ ದನಗಳ ಶೇಡ್,ಮೇಕೆ ಶೇಡ್, ಕೋಳಿ ಶೆಡ್, ಎರೆ ಹುಳು ಗೊಬ್ಬರ ತೊಟ್ಟಿ, ಇಂಗು ಗುಂಡಿ ಇತರೇ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು, ತೋಟಗಾರಿಕೆ ಇಲಾಖೆಯಿಂದ ತೆಂಗು ಮಾವು,ದಾಳಿಂಬೆ,ಸೀತಾಫಲ, ನುಗ್ಗೆ,ಪಪ್ಪಾಯಿ,ಬಾಳೆ,ನೆಲ್ಲಿ,ಗುಲಾಬಿ ತೋಟ ಇತರೇ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ತಾಲೂಕಿನ ಎಲ್ಲ ರೈತರು ಹತ್ತಿರದ ಗ್ರಾಮ ಪಂಚಾಯತಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಳಪ್ಪಾ ಭೀಮರಾವ ಉಮರಾಣ ,ಪಿ.ಡಿ.ಓ ವಿನೋದ ಅಸೋದೆ ತಾಂತ್ರಿಕ ಸಹಾಯಕರು ಪ್ರಕಾಶ ನಾವಿ ಆಡಳಿತ ಸಹಾಯಕ ಅಕ್ಷಯ ಠಕ್ಕಪಗೋಳ, ಬಿ.ಎಫ್.ಟಿ ಮುತ್ತು ಯಾದಗುಡೆ, ಡಿ.ಇ.ಒ ಜೋತಿಬಾ ಬುಬನಾಳೆ, ಸಂಜೀವಿನಿ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂಧಿ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours