“ಜೊಲ್ಲೆ ಗ್ರೂಪ್‌ನ ಪ್ರೇರಣಾ ಪುರಸ್ಕಾರಕ್ಕೆ ಭಾಜನರಾದ ವಿಶೇಷ ಚೇತನರಾದ ಯಾಶಿಕಾ ಭಟ್ “

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ನೆಟ್‌ಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗೆದ್ದು ಅತ್ಯುತ್ತಮ ಅಂತರರಾಷ್ಟ್ರೀಯ ಆಟಗಾರ್ತಿಯಾಗಿದ್ದಾರೆ. ಅವರು ಅಬುಧಾಬಿ (ಯುಎಇ) ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದರು. ವಿಶೇಷ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರಿಗೂ ನಿಜವಾದ ಪ್ರೇರಣೆಯಾಗಿದ್ದಾರೆ. ವಿಶೇಷ ಒಲಂಪಿಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಯಾಶಿಕಾ ಆಗಿದ್ದು,ಅವರ ಮುಂದಿನ ಪ್ರಯತ್ನಗಳಿಗೆ ನಾವೆಲ್ಲರೂ ಶುಭ ಹಾರೈಸೋಣ. ಈ ಸಮಾರಂಭದಲ್ಲಿ ಯಡೂರಿನ ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ […]

“ಅರಣ್ಯ ಇಲಾಖೆ” ಉದ್ದಾರಕ್ಕೆ “ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ” ದಿವಾಳಿಯಾಗಬೇಕಾ..?!

ಬೆಂಗಳೂರು: ಸರ್ಕಾರದ ಬೊಕ್ಕಸ ಬರಿದಾಗಿದೆಯೇ..? ಇಲಾಖೆಗಳನ್ನು ನಡೆಸ್ಲಿಕ್ಕೆ ಹಣದ ಕೊರತೆ ಎದುರಾಗಿದ್ಯಾ..? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೊಕ್ಕಸದಲ್ಲಿದ್ದ ಹಣವನ್ನು ಅರಣ್ಯ ಇಲಾಖೆಯ ನಿರ್ವಹಣೆಗೆ ಬಿಡುಗಡೆ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ, ಫೈನಾನ್ಸ್ ಡಿಪಾರ್ಟ್ಮೆಂಟ್ ಮಂಡಳಿಗೆ ಬರೆದಿರುವ ಪತ್ರವೇ ಇಂತದ್ದೊಂದು ಅನುಮಾನ ಬಲಗೊಳಿಸುತ್ತದೆ.ತನ್ನದೇ ಶ್ರಮ-ಪ್ರಯತ್ನದಿಂದ ಸಂಪನ್ಮೂಲ ಕ್ರೋಢೀಕರಿಸಿಟ್ಟುಕೊಂಡಿರುವ ಮಂಡಳಿಯ ಹಣದಲ್ಲಿ ನೂರಾರು ಕೋಟಿ ಹಣವನ್ನು ಅನಾಮತ್ತಾಗಿ ಅರಣ್ಯ ಇಲಾಖೆಗೆ ಕೊಡುವಂತೆ ಆದೇಶಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮಂಡಳಿಯ ಅಧಿಕಾರಿ-ನೌಕರರಲ್ಲಿ ಮೂಡಿದೆ.ಸರ್ಕಾರದ ಧೋರಣೆ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಲು […]

ಆತ್ಮಹತ್ಯೆ ಪ್ರಚೋದನೆ,ಹಲ್ಲೆ ಆರೋಪ:BMTC ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು..

ಶಿವಪ್ರಕಾಶ್ ವಿರುದ್ಧ ಘಟಕ 12ರ ಸಿಬ್ಬಂದಿ ಮಹೇಶ್ ಆತ್ಮಹತ್ಯೆಗೆ ಪ್ರಚೋದನೆ,ಸಿಬ್ಬಂದಿ ಲಕ್ಕಪ್ಪ ಮೇಲೆ ಮಾರಣಾಂತಿಕ ಹಲ್ಲೆ ಆರೋಪ  ಬೆಂಗಳೂರು:ಸಾರಿಗೆ ನೌಕರರು ಸಣ್ಣ ತಪ್ಪು ಮಾಡಿದ್ರೂ ಘನಘೋರ ಅಪರಾಧ ಎನ್ನುವಂತೆ ಬಿಂಬಿಸಿ ಶಿಕ್ಷೆ ನೀಡೊಕ್ಕೆ ಕಾದು ಕುಂತಿರುತ್ತದೆ ಬಿಎಂಟಿಸಿ ಆಡಳಿತ ಮಂಡಳಿ.ಆದ್ರೆ ಅದೇ ಅಧಿಕಾರಿಗಳು ಪ್ರಾಣ-ಮಾನ ಹೋಗುವಂಥ ಗಂಭೀರ ಸ್ವರೂಪದ ಕೃತ್ಯ ಎಸಗಿದ್ರೂ, ಗಂಭೀರ ಸ್ವರೂಪದ ಆಪಾದನೆ ಎದುರಿಸುತ್ತಿದ್ದರೂ ಅಂಥವ್ರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ.ಇದಕ್ಕೊಂದು ಜ್ವಲಂತ ನಿದರ್ಶನ ಎಂದರೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ಎನಿಸುತ್ತದೆ […]

EDUCATION EXCLUSIVE….PU ಶಿಕ್ಷಣ ಇಲಾಖೆಯಲ್ಲಿ, ನಿರ್ದೇಶಕರನ್ನೇ “ದಾರಿ” ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ “ಹಿತಾಸಕ್ತಿ”ಗಳಿವೆಯಾ..?!

ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ..? ದಕ್ಷ-ಪ್ರಾಮಾಣಿಕ IAS ಅಧಿಕಾರಿ ಸಿಂಧೂ B ರೂಪೇಶ್ ಅವರ “ಒಳ್ಳೆಯತನ”…?! ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ  ಪದವಿ ಪೂರ್ವ ಶಿಕ್ಷಣ ಇಲಾಖೆ(DEPARTMENT OF SCHOOL EDUCATION-PRE UNIVERSITY) ಗೆ  ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ  ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು […]

EXCLUSIVE….INDISCIPLINE IN PU BOARD..?! ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ..?! ಏನ್ ಮಾಡುತ್ತಿದ್ದಿರಾ ಶಿಕ್ಷಣ ಸಚಿವರೇ..?!

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಳಿ ತಪ್ಪಿದ ಆಡಳಿತ..ಹದ್ದುಮೀರಿದ ಅಧಿಕಾರಿಗಳು…ಶಿಕ್ಷಣ ಸಚಿವರ ನಿಷ್ಕಾಳಜಿ..?! ಬೆಂಗಳೂರು:ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ನಿರ್ಣಾಯಕ ಘಟ್ಟ ಎನಿಸಿಕೊಳ್ಳುತ್ತೆ  ಪದವಿಪೂರ್ವ ಶಿಕ್ಷಣ..ಇದರ ನಿರ್ವಹಣೆಗೆಂದೇ ಪಿಯು ಶಿಕ್ಷಣ ಇಲಾಖೆ ಎನ್ನೋದು ಕೆಲಸ ಮಾಡುತ್ತದೆ.ಆದ್ರೆ ಅಂತದ್ದೊಂದು ಇಲಾಖೆ ನಿಜಕ್ಕೂ ಜೀವಂತವಾಗಿದೆಯೇ..? ಇಲಾಖೆಯ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನಿಜಕ್ಕೂ ಅಲ್ಲಿ ಏನಾಗುತ್ತಿದೆ ಎನ್ನುವುದರ ಅರಿವು ಇದೆಯೇ..? ಆ ಇಲಾಖೆ ಮಾಡಬೇಕಿರುವುದೇನು..? ಮಾಡುತ್ತಿರುವುದೇನು ಎನ್ನುವುದರ ಮಾಹಿತಿಯಾದರೂ ಅವರಿಗಿದೆಯೇ..? ಇಲಾಖೆಯ ನಿರ್ದೇಶಕರೆನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ..? ಅಲ್ಲಿರುವ ಕೆಳ ಹಂತದ ಅಧಿಕಾರಿಗಳ […]

BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮೌನವನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೋ..? ಅಥವಾ  ಅವರ ಒಳ್ಳೇತನಕ್ಕೆ ಬೆಲೆ ಕೊಡುತ್ತಿಲ್ಲವೋ..? ಅಥವಾ ಏನ್ ಮಾಡಿದ್ರೂ ಅವ್ರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಬಿಡು ಎನ್ನುವ ತಾತ್ಸಾರವೋ..? ಗೊತ್ತಿಲ್ಲ..ಬಿಎಂಟಿಸಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಂತಾಗಿದೆ. .ಇದಕ್ಕೆ ಜ್ಬಲಂತ ಉದಾಹರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗಳು. ಬಿಎಂಟಿಸಿ ಡಿಪೋ 34 ಕ್ಕೆ ಸಂಬಂಧಿಸಿದ್ದೆಂದು ಹೇಳಲಾಗ್ತಿರೋ ಒಂದಷ್ಟು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ವೀಡಿಯೋ […]

DEEPAWALI BUMPER TO KSRTC: ದೀಪಾವಳಿ ಬಂಪರ್- KSRTC ಗೆ 18.62 ಕೋಟಿ ಗಳಿಕೆ-ಒಂದೇ ದಿನ ಸಾರ್ವಕಾಲಿಕ ದಾಖಲೆಯ 85,462 ಟಿಕೆಟ್ ಬುಕ್ಕಿಂಗ್

ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ. ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ […]

EVEN DEEPAVALI CRACKERS MENACE POLLUTION DECREASE…! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ವಾಯುಮಾಲಿನ್ಯ ವಾಗಿಲ್ವಂತೆ..?!

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(POLLUTION CONTROLE BOARD) ಕೊಟ್ಟಿರುವ ವಿವರಣೆಯನ್ನು ನಂಬಬೇಕೋ..ಬಿಡಬೇಕೋ ಗೊತ್ತಾಗ್ತಿಲ್ಲ. ವಾಯುಮಾಲಿನ್ಯ(AIR POLLUTION) ಹಾಗೂ ಶಬ್ದ ಮಾಲಿನ್ಯ(NOISE POLLUTION) ವನ್ನು ಮಾನಿಟರ್ ಮಾಡುವ ಯಂತ್ರಗಳೇ ತಾಂತ್ರಿಕವಾಗಿ ಹಾಳಾಗಿವೆಯೇ..? ಅಥವಾ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ..? ಅಥವಾ ದೋಷಪೂರಿತವಾದ ಮಾಹಿತಿ ಕೊಡುತ್ತಿವೆಯೋ..ಒಂದೂ ಗೊತ್ತಾಗ್ತಿಲ್ಲ.ಏಕೆಂದರೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ  ಬೆಂಗಳೂರಲ್ಲಿ ಪಟಾಕಿ(CRACKERS) ಸಿಡಿಸಲಾಗಿದ್ದರೂ  ವಾಯುಮಾಲಿನ್ಯ ಕಳೆದ ಬಾರಿಗಿಂತ ಬಹುತೇಕ ಈ ಬಾರಿ ಕಡಿಮೆಯಾಗಿದೆಯಂತೆ.ಇದನ್ನು ಸ್ವತಹ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳ್ತಿದೆ. ಪಟಾಕಿ ಸಿಡಿಸುವ ಮುನ್ನ […]

ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

“ಗುರು ಒಬ್ಬ ವ್ಯಸನಿ….ಆತನಲ್ಲಿ ಸೃಜನಶೀಲತೆಯೇ ಸತ್ತೋಗಿತ್ತು..ನನ್ನಿಂದ ಕೆಟ್ಟ ಸಿನೆಮಾ ಮಾಡಿಸಿದಾತ..ಎಂದು ಹೇಳಿದ್ದ ಜಗ್ಗೇಶ್.”ಸಾವನ್ನು ಯಾರೂ‌ ಸಂಭ್ರಮಿಸಬಾರದು..ಸತ್ತವರ ಬಗ್ಗೆ ಅವರ ನೆಗೆಟಿವ್ಸ್ ಏನೇ ಇರಲಿ ಅದನ್ನು ಪರಾಮರ್ಷೆ ಮಾಡಿ,ಹೀಯಾಳಿಸಬಾರದು ಎನ್ನುತ್ತಾರೆ ಹಿರಿಯರು ಹಾಗೂ ಅನುಭಾವಿಗಳು.. ಅವರ ಮಾತನ್ನು ಪರಿಗಣಿಸುವುದೇ ಆದಲ್ಲಿ,ಜಗ್ಗೇಶ್ ಅವರಂಥ ಹಿರಿಯ ನಟರ ಬಾಯಲ್ಲಿ ಇಂಥಾ ಮಾತುಗಳು ಬರಬಾರದಿತ್ತು..ಹೀಗೆ ನನಗಷ್ಟೇ ಅಲ್ಲ,ನನ್ನಂತ ಎಷ್ಟೋ ಜ‌ನರಿಗೆ ಎನ್ನಿಸಿದರೂ ತಪ್ಪಿಲ್ಲ.. ಕನ್ನಡದ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಮೊದಲು ಚಾನೆಲ್ ಗಳು ಮಾತನಾಡಿಸಿದ್ದೇ ನಟ ಜಗ್ಗೇಶ್ ಅವರನ್ನು..ಆರಂಭದಲ್ಲಿ […]

BLACK DEEPAVALI FOR BMTC EMPLYOEES..!? BMTC ಸಿಬ್ಬಂದಿ ಪಾಲಿಗೆ ಕತ್ತಲಾದ ದೀಪಾವಳಿ..?! KSRTC ಸಿಬ್ಬಂದಿಗೆ ಫುಲ್ ಸ್ಯಾಲರಿ…!? BMTC ಸಿಬ್ಬಂದಿಗೆ ಮಾತ್ರ ಹಬ್ಬದ ಅಡ್ವಾನ್ಸ್ ಆಗಿ ಹಾಫ್ ಸ್ಯಾಲರಿ..!?

ಬೆಂಗಳೂರು: ಎಲ್ಲಾ ನಿಗಮಗಳ ಸಾರಿಗೆ ಸಿಬ್ಬಂದಿಯನ್ನೂ ಒಂದೇ ರೀತಿ ಸರ್ಕಾರ ಟ್ರೀಟ್ ಮಾಡಬೇಕಾಗುತ್ತದೆ.ಅದು ಸ್ವಾಭಾವಿಕ ಅಷ್ಟೇ ಅಲ್ಲ ಸಾಮಾಜಿಕ ನ್ಯಾಯ ಕೂಡ ಹೌದು..ಆದ್ರೆ ಪರಸ್ಪರರು ಹಿಡಿಶಾಪ ಹಾಕಿಕೊಳ್ಳುವ ,ಬೈಯ್ದಾಡಿಕೊಳ್ಳುವ,ಆರೋಪ-ಪ್ರತ್ಯಾರೋಪಗಳಲ್ಲಿ ಸಂಘರ್ಷಕ್ಕಿಳಿಯುವ ಮಟ್ಟಕ್ಕೆ  ನಿಗಮಗಳ ಸಿಬ್ಬಂದಿಯ ನಡುವೆ ತಂದಿಟ್ಟು ತಮಾಷೆ ನೋಡುವ ಕೆಲಸವನ್ನು ಸರ್ಕಾರ ಮಾಡಿದ್ರೆ ಹೇಗೆ..? ಅದನ್ನು ಸಹಿಸಿಕೊಳ್ಳಲಿಕ್ಕೆ ಆಗುತ್ತಾ..? ಖಂಡಿತಾ ಇಲ್ಲ. ಕೆಎಸ್ ಆರ್ ಟಿಸಿ(KSRTC) ಹಾಗೂ ಬಿಎಂಟಿಸಿ (BMTC) ಸಿಬ್ಬಂದಿ ಪರಿಸ್ತಿತಿ ಹಾಗೆಯೇ ಆಗಿದೆ.ಇದಕ್ಕೆಲ್ಲಾ ಕಾರಣ  ಬೆಳಕಿನ ಹಬ್ಬ ದೀಪಾವಳಿ(DEEPAVALI FESTIAVAL) ಆಚರಣೆಗೆ ಪೂರಕವಾಗಿ […]