ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಪ್ರೆಸಿಡೆನ್ಸಿ ಫೌಂಡೇಶನ್ ದೊಂದಿಗೆ ಮುಂಬರುವ ಶನಿವಾರ ದಿನಾಂಕ 15-02-2025 ರಂದು ಬೆಂಗಳೂರಿನಲ್ಲಿ ಮೇಗಾ ಜಾಬ್ ಮೇಳವನ್ನು ಆಯೋಜಿಸಲಾಗಿರುತ್ತದೆ

ಬೆಂಗಳೂರು :– ಪತ್ರಿಕಾ ಪ್ರಕಟಣೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಪ್ರೆಸಿಡೆನ್ಸಿ ಫೌಂಡೇಶನ್ ದೊಂದಿಗೆ ಮುಂಬರುವ ಶನಿವಾರ ದಿನಾಂಕ 15-02-2025 ರಂದು ನಗರದ ಖುದ್ದೂಸ್ ಸಾಹೇಬ್ ಇದ್ದಾ ಮೈದಾನ, ಮಿಲ್ಲರ್ಸ್ ರಸ್ತೆ ಬೆಂಗಳೂರಿನಲ್ಲಿ ಮೇಗಾ ಜಾಬ್ ಮೇಳವನ್ನು ಆಯೋಜಿಸಲಾಗಿರುತ್ತದೆ. ಇದರಲ್ಲಿ ರಾಷ್ಟ್ರದ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದಾರೆ. ರಾಜ್ಯದ ನಿರುದ್ಯೋಗಿ ಅಲ್ಪಸಂಖ್ಯಾತರಿಗೆ ಸುವರ್ಣ ಅವಕಾಶವಾಗಿರುತ್ತದೆ. ಸದರಿ ದಿನಾಂಕದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಇದರಲ್ಲಿ ಪಾಲುಗೊಂಡು ಉದ್ಯೋಗವಕಾಶವನ್ನು ಸದುಪಯೋಗಿಸಿಕೊಳ್ಳಲು ಕೋರಲಾಗಿದೆ.

ಕೇಂದ್ರ ದಿಂದ ಬೆಂಗಳೂರಿಗೆ ಖಾಲಿ ಚೊಂಬು

ಬೆಂಗಳೊರು : ಬೆಂಗಳೂರಿನ ಮೂಲಭೊತ ಸೌಲಭ್ಯಗಳಿಗಾಗಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರಿಗೆ ಗೌರವ ಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಅನುದಾನ ವನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಖಾಲಿ ಚೊಂಬು ಕೂಟ್ಟಿದೆ ಎಂದು ಸಾಮಾಜಿಕ ಜಾಲತಾಣದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಹೇಳಿದರು.

ಗೀಸರ್ ಕ್ಯಾಮೆರಾ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಅಕ್ರಮ ಸಂಬಂಧ ಮುಚ್ಚಿಹಾಕಲು ಮಹಿಳೆಯ ನಾಟಕ

ಬೆಂಗಳೂರು :– ಗೀಸರ್‌ನಲ್ಲಿ ಕ್ಯಾಮೆರಾ ಇಟ್ಟು ಮಹಿಳೆಯ ಆಶ್ಲೀಲ ವಿಡಿಯೋ ದಾಖಲಿಸಿದ್ದ ಸುದ್ದಿ ವ್ಯಾಪಕ ವೈರಲ್ ಆಗುತ್ತಲೇ ಈ ಪ್ರಕರಣಕ್ಕೆ ಪೊಲೀಸರ ತನಿಖೆ ಶಾಕಿಂಗ್ ಟ್ರಸ್ಟ್ ನೀಡಿದ್ದು, ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಹಿಳೆಯೇ ಇಂತಹ ಬೃಹನ್ನಾಟಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು…ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿದ್ದ ವಿಡಿಯೋ ಮತ್ತು ಸುದ್ದಿ […]

ಹಿಡಕಲ್‌ ಡ್ಯಾಮ್‌ ಉದ್ಯಾನಕಾಶಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯಕ್ಕೆ ಶಂಕುಸ್ಥಾಪನೆ ಜ.20 ರಂದು

ಬೆಂಗಳೂರು (ಜ.19) : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಯಲ್ಲೇ, ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳ ಅಡಿಯಲ್ಲಿ ನಾಳೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದ ಆವರಣದಲ್ಲಿ ಬೆಳಗಾವಿ ಉಪ ಪ್ರಾದೇಶಿಕ ವಿಜ್ಞಾನ […]

“ಬಿ.ಕಾಂ ನ 1,2,3ನೇ ಸೆಮಿಸ್ಟರ್ ಪರೀಕ್ಷೆಯನ್ನು ನಿಗದಿತ ದಿನಾಂಕಕ್ಕೆ (ಜ.13ರಿಂದ) ನಡೆಸುವಂತೆ ಹೈಕೋರ್ಟ್ಅ ನುಮತಿ”

ಬೆಂಗಳೂರು :– ಬಿ.ಕಾಂ ಪರೀಕ್ಷೆ ಗೊಂದಲ ಸಂಬಂಧ ಈ ಮೊದಲು ಪರೀಕ್ಷೆ ಮುಂದೂಡುವಂತೆ ಹೈಕೋರ್ಟ್​​​ನ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಿ.ವಿ. ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಿರುವ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ. ಹೈಕೋರ್ಟ್​​ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿರುವ ನ್ಯಾ.ಅನು ಶಿವರಾಮನ್​, ನ್ಯಾ.ಎಂ.ಐ.ಅರುಣ್ ಅವರ ವಿಭಾಗೀಯ ಪೀಠವು ಬಿ.ಕಾಂ ಪರೀಕ್ಷೆ ಮುಂದೂಡಿಕೆಯಿಂದ 35 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.ಕೇವಲ 5 ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯಿಂದ ಪರೀಕ್ಷೆ […]

“ಎಲ್ಲರೂ ಮಾಸ್ಕ್ ಹಾಕಬೇಕು, ಲಾಕ್‌ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು” ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು :– ರಾಜ್ಯದ ರಾಜಧಾನಿಯಲ್ಲಿ ಹೆಚ್‌ಎಂಪಿ ಸೋಂಕು ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, 8 ತಿಂಗಳು ಮಗುವನ್ನು ನಾಳೆ ಡಿಸ್ಟಾರ್ಜ್ ಮಾಡಲಾಗುತ್ತದೆ. ಹೆಚ್‌ಎಂಪಿವಿ ಸೋಂಕಿಗೆ ತುತ್ತಾಗಿದ್ದ ಇಬ್ಬರೂ ಮಕ್ಕಳು ಗುಣಮುಖರಾಗಿದ್ದು, ಎಲ್ಲರೂ ಮಾಸ್ಕ್ ಹಾಕಬೇಕು, ಲಾಕ್‌ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದರು. ಇನ್ನು ಈ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ವೈರಸ್‌ನಿಂದ ಜೀವಕ್ಕೆ […]

“ಗ್ರಾಮದಲ್ಲಿ ಹತ್ತಾರು ಸಮಸ್ಯೆಗಳಿದ್ದರೆ, ಈ ನಂಬರ್​​ಗೆ​​​​ ಕರೆ ಮಾಡಿ”

ಬೆಂಗಳೂರು :– ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳು ಹಾಗೂ ವಿವಿಧ ಸಮಸ್ಯೆಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಸಾರ್ವಜನಿಕರು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ ಪಾವತಿ ಹಾಗೂ ಜನನ ಮತ್ತು ಮರಣ ಪ್ರಮಾಣ ಪತ್ರದ ಮಾಹಿತಿ ಬೇಕಿದ್ದಲ್ಲಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆಗೆ, ಗ್ರಾಮದ ರಸ್ತೆ ದುರಸ್ಥಿಗೆ ದೂರು […]