ಬೆಂಗಳೂರು :–
ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದ್ದ ಕನಿಷ್ಠ ಅಂಕಗಳನ್ನು ೩೫ ರಿಂದ ೩೩ ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಮುಂದಿಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪತ್ರ ಬರೆದಿದ್ದಾರೆ.

೩೩ ಅಂಕಗಳ ಬದಲಿಗೆ ೩೫ ಅಂಕಗಳನ್ನೇ ನಿಗದಿಪಡಿಸಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂದೆ ಇದ್ದ ನಿಯಮವೇ ಉತ್ತಮ.
ಜತೆಗೆ, ಪ್ರೌಢಶಾಲೆ, PU ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಹೊರಟ್ಟಿ ಅವರು ಬರೆದಿದ್ದಾರೆ.





