ಬೆಂಗಳೂರು :–
ರಾಜ್ಯದ ಮೇಲೆ ಬಿಹಾರ್ ಚುನಾವಣಾ ಫಲಿತಾಂಶ ಪರಿಣಾಮ ಬೀರಿದ್ದು ನವೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ನಾಯಕತ್ವ ಬದಲಾವಣೆ ಆಗುತ್ತೆ ಎಂದು ಈ ಮೊದಲು ಬಾರಿ ಚರ್ಚೆ ನಡೆಯುತ್ತಿತ್ತು. ಬಿಹಾರ ಫಲಿತಾಂಶದಲ್ಲಿ ಕಾಂಗ್ರೆಸ್ ಪೂರ್ತಿಯಾಗಿ ನೆಲಕಚ್ಚಿತೊ, ಇದೀಗ ಈ ಒಂದು ಬೆಳವಣಿಗೆಗೆ ಬ್ರೇಕ್ ಹಾಕಲಾಗಿದೆ.
ಸದ್ಯಕ್ಕೆ ನವೆಂಬರ್ ನಲ್ಲಿ ಯಾವುದೇ ಕ್ರಾಂತಿ ಆಗಲ್ಲ, ನಾಯಕತ್ವ ಬದಲಾವಣೆಯೂ ಇಲ್ಲ ಅಂತ ಹೇಳಲಾಗುತ್ತಿದೆ. ಆದರೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯ ಖ್ಯಾತ ಜ್ಯೋತಿಷಿ ಒಬ್ಬರು ಸ್ಫೋಟಕವಾದ ಭವಿಷ್ಯವನ್ನು ನುಡಿದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ ಕರ್ನಾಟಕ ಎರಡು ಭಾಗ ಆಗುತ್ತೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿನಿ ಅವರು ಈ ಭವಿಷ್ಯವಾಣಿ ನುಡಿದಿದ್ದಾರೆ.
ಕರ್ನಾಟಕ ಎರಡು ಭಾಗವಾಗಲಿದೆ. ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಜುಲೈ ತಿಂಗಳಲ್ಲೇ ಭವಿಷ್ಯ ಹೇಳಿದ್ದರು. ಗಾಂಧಿ ಕುಟುಂಬವಲ್ಲದ ಬೇರೆ ಯಾರಾದರೂ ಕಾಂಗ್ರೆಸ್ಸಿನ ನಾಯಕತ್ವ ವಹಿಸಿಕೊಂಡರೆ ಕಾಂಗ್ರೆಸ್ಸಿನ ಪುನರುಜ್ಜೀವನ ಸಾಧ್ಯ.
ರಾಹುಲ್ ಗಾಂಧಿ ಸಕ್ರಿಯ ರಾಜಕಾರಣದಿಂದ ನಿರ್ಗಮಿಸುವ ದಿನದಿಂದ ಬಿಜೆಪಿಗೆ ಕೆಟ್ಟ ದಿನಗಳು ಎದುರಾಗಲಿವೆ ಎಂದು ಪೋಸ್ಟ್ ಹಂಚಿಕೊಂಡಿದ್ದರು.





