ಬೆಂಗಳೂರು :–
ಜನ ಸುರಾಜ್ ವಕ್ತಾರ ಮತ್ತು ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಪವನ್ ವರ್ಮಾ, ಕೇಂದ್ರ ಸರ್ಕಾರದ ವಿರುದ್ಧ ವಿಶ್ವಬ್ಯಾಂಕ್‌ನಿಂದ ಬೇರೆ ಯಾವುದೋ ಯೋಜನೆಗೆ ಮೀಸಲಾದ ಹಣವನ್ನು ಕೇಂದ್ರ ಸರ್ಕಾರ ಬಿಹಾರ ವಿಧಾನಸಭಾ ಚುನಾವಣೆಗೆ ತಿರುಗಿಸಿ ರಾಜ್ಯದ ಮಹಿಳಾ ಮತದಾರರಿಗೆ ವಿತರಿಸಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿಯಲ್ಲಿ ೧.೨೫ ಕೋಟಿ ಮಹಿಳಾ ಮತದಾರರ ಖಾತೆಗೆ ೧೦,೦೦೦ ರೂ.ಗಳನ್ನು ವರ್ಗಾಯಿಸಲಾಗಿತ್ತು.
ಬಿಹಾರದಲ್ಲಿ ಸಾರ್ವಜನಿಕ ಸಾಲ “ಪ್ರಸ್ತುತ ೪,೦೬,೦೦೦ ಕೋಟಿ ರೂಪಾಯಿಗಳಷ್ಟಿದ್ದು, ದಿನಕ್ಕೆ ೬೩ ಕೋಟಿ ರೂ ಬಡ್ಡಿ” ಪಾವತಿಸಲಾಗುತ್ತಿದೆ. ಖಜಾನೆ ಖಾಲಿಯಾಗಿದೆ. ಅಲ್ಲದೆ ರಾಜ್ಯದ ಮಹಿಳೆಯರಿಗೆ ನೀಡಲಾದ ೧೦,೦೦೦ ರೂ.ಗಳನ್ನು ವಿಶ್ವಬ್ಯಾಂಕ್‌ನಿಂದ ಇನ್ನೊಂದು ಯಾವುದೋ ಯೋಜನೆಗಾಗಿ ಬಂದ ೨೧,೦೦೦ ಕೋಟಿ ರೂ.ಗಳಿಂದ ನೀಡಲಾಗಿದೆ. ಚುನಾವಣೆಗೆ ನೀತಿ ಸಂಹಿತೆಗೆ ಒಂದು ಗಂಟೆ ಮೊದಲು, ೧೪,೦೦೦ ಕೋಟಿ ರೂ.ಗಳನ್ನು ಹೊರತೆಗೆದು ರಾಜ್ಯದ ೧.೨೫ ಕೋಟಿ ಮಹಿಳೆಯರಿಗೆ ವಿತರಿಸಲಾಗಿದೆ ಎಂದು ಪವನ್ ವರ್ಮಾ ಹೇಳಿದ್ದಾರೆ.





