ವರದಿ : ಮಿಯಾಲಾಲ ಕಿಲ್ಲೇದಾರ
ಅಥಣಿ :–
ತಾಲೂಕಿನ ಝುಂಜರವಾಡ ಗ್ರಾಮದ ಶ್ರೀ ಅಪ್ಪಯ್ಯ ಹಾಗೂ ಚಂದ್ರಯ್ಯ ಸ್ವಾಮಿಗಳ ಶ್ರೀ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ನಡೆದ ‘ಬಸವ ಪುರಾಣದಲ್ಲಿ’ ಬಸವೇಶ್ವರ ಹಾಗೂ ನೀಲಾಂಬಿಕೆಯರ ವಿವಾಹ 12ನೇ ಶತಮಾನದ ಗತವೈಭವವನ್ನು ಮೀರಿಸುವಂತಿತ್ತು. ಆಡಂಬರದ ಶುಭ ವಾದ್ಯ ತರಂಗಗಳು, ಸುಸಂಸ್ಕೃತ ಸಾರುವ ಮುತ್ತೈದೆಯರ ಉಪಸ್ಥಿತಿ, ಸಾವಿರಾರು ತಾಯಂದಿರು ತಲೆಯ ಮೇಲೆ ಹೊತ್ತು ತಂದ ಬಸವ ಬುತ್ತಿ, ಸುನಾದದ ಸೋಬಾನ ಪದಗಳು, ಅಲ್ಲಲ್ಲಿ ಮಕ್ಕಳಿಂದ ವಚನ ಗಾಯನ, ಕಾರ್ಯಕ್ರಮ ಮೆರಗನ್ನು ಹೆಚ್ಚಿಸಿತ್ತು. ಮಲ್ಲಯ್ಯ ಸ್ವಾಮಿಗಳು ಹಾಗೂ ಅಪ್ಪಯ್ಯ ಸ್ವಾಮಿಗಳು ಮತ್ತು ದಾನಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಬಸವರಾಜೇಂದ್ರ ಶರಣರ ಪ್ರವಚನ ಎಲ್ಲರನ್ನು ಮಂತ್ರಮುಗ್ದಗೊಳಿಸಿತು. ಬಸವಣ್ಣವರಾಗಿ ಸೌಮ್ಯ ಯಡೂರ, ನೀಲಾಂಬಿಕೆಯಾಗಿ ಸೃಷ್ಟಿ ಯಡೂರ ಕಂಗೊಳಿಸಿದರು. ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು..
+ There are no comments
Add yours