“ಸ್ಪೆಷಲ್ ಒಲಿಂಪಿಕ್ಸ್ ಭಾರತ ಕರ್ನಾಟಕ ಸಮಿತಿ ಸಭೆಯನ್ನು ಜೂಮ್ ಮೂಲಕ ಮಾಜಿ ಸಚಿವರು,ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ನಡೆಸಿದರು”

ನಿಪ್ಪಾಣಿ :–

ಇಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ ಕರ್ನಾಟಕ ಸಮಿತಿ ಸಭೆಯನ್ನು ಜೂಮ್ ಮೂಲಕ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಸಭೆ ನಡೆಸಿ, ಸ್ಪೆಷಲ್ ಒಲಂಪಿಕ್ಸ್ ನ ರೂಪರೇಷಗಳ ಕುರಿತು ಚರ್ಚಿಸಿ,ಸಲಹೆ ಸೂಚನೆಗಳನ್ನು ನೀಡಿದರು.

ಸೆಪ್ಟೆಂಬರ್ 2023 ರಲ್ಲಿ ನಾನು ಅಧ್ಯಕ್ಷರಾದ ಮೇಲೆ ನಮ್ಮ ರಾಜ್ಯದ ವಿಶೇಷ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ 15 ಕಂಚಿನ ಪದಕ,30 ಚಿನ್ನದ ಪದಕ,25 ಬೆಳ್ಳಿ ಪದಕ ಒಟ್ಟು 70 ಪದಕ ದೊರೆತಿದ್ದು, ನಮ್ಮ ರಾಜ್ಯದ ಕೀರ್ತಿಯನ್ನು ವಿಶೇಷ ಮಕ್ಕಳು ಹೆಚ್ಚಿಸಿದ್ದಾರೆ. ಮತ್ತು ಕರ್ನಾಟಕಕ್ಕೆ 5 ಪ್ರಶಸ್ತಿಗಳು ದೊರೆತಿದ್ದು ಹೆಮ್ಮೆಯ ಸಂಗತಿಯಾಗಿದೆ.

ಇಂದಿನ ಸಭೆಯಲ್ಲಿ ಕರ್ನಾಟಕದಲ್ಲಿ ಗಾಲ್ಫ್ ಮತ್ತು ಜೂಡೋ ಕ್ರೀಡೆಯ ಬಗ್ಗೆ ಚರ್ಚಿಸಿ,ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಕ್ರೀಡಾಕೂಟದ ಅನುಭವದ ಮಾಹಿತಿ ಪಡೆದುಕೊಂಡರು. ನವೀಕರಣ ಸಾಪ್ತಾಹಿಕ ಕಚೇರಿಗೆ ವಾರದಲ್ಲಿ ಒಂದು ದಿನ ಭೇಟಿ ನೀಡುವುದು ಮತ್ತು 15 ದಿನಗಳಿಗೊಮ್ಮೆ ಆನ್ಲೈನ್ ಸಭೆ ನಡೆಸುವುದು ಇನ್ನಿತರ ವಿಷಯಗಳ ಕುರಿತು ಚರ್ಚಿಸಿದರು.

ಈ ಸಭೆಯಲ್ಲಿ ವಿಶೇಷ ಓಲಂಪಿಕ್ಸ ನ ವಲಯ ನಿರ್ದೇಶಕರಾದ ಶ್ರೀ ಅಮರೇಂದ್ರ ಎ, ಉಪಾಧ್ಯಕ್ಷರಾದ ಶ್ರೀ ರೂಪ್ ಸಿಂಗ್, ನಿರ್ದೇಶಕರಾದ ಶ್ರೀ ಶಾಂತಲಾ ಎಸ್ ಭಟ್ಟ, ಖಜಾಂಚಿಯಾದ ಶ್ರೀ ಆನಂದ ಡಿ.ಸಿ,ಶ್ರೀ ನಾರಾಯಣ ಶೇರಿಗಾರ್, ಮುಂತಾದವರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *