ನರೇಗಾ ಯೋಜನೆ ಸಮುದಾಯದ ಕಾಮಗಾರಿಗಳಲ್ಲಿ ಉಮರಾಣಿ ಗ್ರಾ.ಪಂ ಸದಸ್ಯನ ಪ್ರಭಾವ, ಕೈವಾಡ ?

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಪ್ರತಿಯೋಬ್ಬರಿಗೆ ಮುಟ್ಟಿಸುವ ಜವಾಬ್ದಾರಿ ಪ್ರತಿಯೋಂದು ಗ್ರಾಮ ಪಂಚಾಯತಿ ಹಾಗೂ ಸದಸ್ಯರ ಕರ್ತವ್ಯವಾಗಿರುತ್ತದೆ. ಆದರೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮ ಪಂಚಾಯತಿಯ ಸದಸ್ಯನೇ ರಸ್ತೆ ಕಾಮಗಾರಿಯಲ್ಲಿ ಬೇರೇ ಕೂಲಿಗಾರರರ ಬದಲಿ ನಿಂತಿರುವುದಲ್ಲದೆ ಒಂದೆ ದಿನ ಸರಿ ಸುಮಾರು ೨-೩ ಕಾಮಗಾರಿಗಳಲ್ಲಿ ಎನ್.ಎಮ್.ಎಮ್. ಎಸ್. ಪೋಟೋದಲ್ಲಿ ಕಾಣಿಸಿಕೊಂಡಿದ್ದು ಮತ್ತು ಕಾಮಗಾರಿಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯ ಭಾಗವಹಿಸಿದನ್ನು ನೋಡಿದರೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಮತ್ತು ಸದಸ್ಯರ ಪ್ರಭಾವವಿರುವುದಾಗಿ […]
ಜಿಲ್ಲೆಯ ಶ್ರೀ ಗೋಪಾಲಕೃಷ್ಣ ಬಿ. ಗೌಡರ್, ಪೊಲೀಸ್ ಉಪಾಧೀಕ್ಷಕರು, ಚಿಕ್ಕೋಡಿ ಉಪ ವಿಭಾಗ ರವರು ಮಾನ್ಯ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ

ಚಿಕ್ಕೋಡಿ :– 2025ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಶ್ರೀ ಗೋಪಾಲಕೃಷ್ಣ ಬಿ. ಗೌಡರ್, ಪೊಲೀಸ್ ಉಪಾಧೀಕ್ಷಕರು, ಚಿಕ್ಕೋಡಿ ಉಪ ವಿಭಾಗ ರವರು ಮಾನ್ಯ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ ಅವರಿಗೆ ಬೆಳಗಾವಿ ಜಿಲ್ಲಾ ಪೋಲೀಸ್ ಘಟಕದ ಪರವಾಗಿ ಸೇರಿದಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
CHALLENGING STAR, “D BOSS” DARSHAN RELEASE AFTER 131 DAYS OF PRISONMENT ..ದರ್ಶನ್ ಗೆ ದೀಪಾವಳಿ ಗಿಫ್ಟ್.. 131 ದಿನಗಳ ಸೆರೆವಾಸದ ಬಳಿಕ ದರ್ಶನ್ ಗೆ ರಿಲೀಸ್ ಭಾಗ್ಯ-ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೋರ್ಟ್ ಅನುಮತಿ
ಬೆಂಗಳೂರು: ಒಂದಲ್ಲಾ ಎರಡಲ್ಲಾ ಬರೋಬ್ಬರಿ 131 ದಿನಗಳ ಸೆರೆವಾಸ ಕನ್ನಡ ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಗೆ ಬೇಲ್ ಭಾಗ್ಯ ಸಿಕ್ಕಿದೆ.ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರ್ಶನ್ ಗೆ ಎದುರಾಗಿರುವ ಆರೋಗ್ಯ ಸಮಸ್ಯೆ ಸಂಬಂಧ ವೈದ್ಯಕೀಯ ಚಿಕಿತ್ಸೆ ಪಡೆಯೊಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹೈ ಕೋರ್ಟ್ 6 ವಾರಗಳ ಮದ್ಯಂತರ ಜಾಮೀನು ಮಂಜೂರು ಮಾಡಿದೆ.ಈ ಮೂಲಕ ಕುಟುಂಬ-ಅಭಿಮಾನಿಗಳ ಸಮೇತ ದರ್ಶನ್ ದೀಪಾವಳಿ ಸಂಭ್ರಮ ಆಚರಿಸುವ ಅವಕಾಶ ಸಿಕ್ಕಂತಾಗಿದೆ. ದರ್ಶನ್ ಪಾಲಿಗೆ ಗಣೇಶ ಹಬ್ಬವಾಗಲಿ, ನಾಡಹಬ್ಬ […]
ವಿಜಯನಗರ: ಕಲುಷಿತ ನೀರು ಸೇವಿಸಿ 5 ಮಂದಿ ಸಾವು, 50 ಮಂದಿ ಅಸ್ವಸ್ಥ
ಕಲುಷಿತ ನೀರು ಸೇವಿಸಿ 8 ತಿಂಗಳ ಹಸುಗೂಸು ಸೇರಿ 5 ಮಂದಿ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಗಂಡು ಮಗು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ವಾರ […]
ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!
ಬೆಂಗಳೂರು: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿದ್ದಾಗಿದೆ.ಅವರನ್ನೇ ಕಣಕ್ಕಿಳಿಸುವುದು ಕೂಡ ನಿಕ್ಕಿಯಾಗಿದೆ.ಹೀಗಿದ್ರೂ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಸಾಕಷ್ಟು ಅಚ್ಚರಿ-ಅನುಮಾನ ಮೂಡಿಸಿದೆ. ಯೋಗೇಶ್ವರ್ ಬಿಟ್ಟು ಹೈಕಮಾಂಡ್ ಗೆ ಕಳುಹಿಸಿರಬಹುದಾದ ಮತ್ತೊಂದು ಹೆಸ್ರು ಯಾರದು..? ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ಮೊನ್ನೆ ಮೊನ್ನೆಯವರೆಗೂ ಡಿಕೆ ಬ್ರದರ್ಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸಿಕ್ಕಾಪಟ್ಟೆ ಬೈಯ್ಯುತ್ತಿದ್ದವರು ಸಿ.ಪಿ ಯೋಗೇಶ್ವರ್. ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿದ್ರೂ..ಜೆಡಿಎಸ್ ನೀವೇ ಸ್ಪರ್ದಿಸಿ ಎಂದು ಅಂಗಲಾಚಿದ್ರೂ ನಿಮ್ ಸಹವಾಸವೇ […]
ಚೆನ್ನಪಟ್ಟಣ ಉಪಸಮರ-2024: ಸಿ.ಪಿ ಯೋಗೇಶ್ವರ್ ಎದುರು ಕಣಕ್ಕಿಳಿಯಲು ನಿಖಿಲ್ ಹಿಂದೇಟು..?! ಲೆಕ್ಕಾಚಾರ ಕೆಳಗಾಗಿ ಸೋತರೆ “ಐರನ್ ಲೆಗ್” ಕಳಂಕ ಹೊತ್ತುಕೊಳ್ಳುವ ಆತಂಕ..?!
ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿರುವ ಡೆಡ್ ಲೈನ್ ಮುಗಿಯೊಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಇದೆ.ಆದ್ರೂ ಅಖಾಡದಲ್ಲಿ ಏನಾಗಲಿದೆ ಎನ್ನೋದು ಗೊತ್ತಾಗುತ್ತಲೇ ಇಲ್ಲ.ಎಲ್ಲವೂ ಅಚ್ಚರಿ-ನಿಗೂಢದಂತೆ ಕಾಣಿಸುತ್ತದೆ.ನಿನ್ನೆಯವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸಿ.ಪಿ ಯೋಗೇಶ್ವರ್ ನಿನ್ನೆ ರಾತ್ರಿ ಕೈ ಸೇರುವ ಮುನ್ಸೂಚನೆ ನೀಡಿ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ನೇತೃತ್ವದಲ್ಲಿ ಕೈ ಸೇರಿದ್ದಾಗಿದೆ.ಕಾಂಗ್ರೆಸ್ ನಿಂದಲೇ ಸ್ಪರ್ದಿಸ್ತಾರೆನ್ನುವ ಮಾತುಗಳು ಬಲವಾಗಿವೆ.ಆದರೆ ಕಡೇ ಕ್ಷಣದಲ್ಲಿ ಏನಾಗುತ್ತದೋ ಗೊತ್ತಾಗುತ್ತಿಲ್ಲ. ಸ್ಪರ್ದೆ ಮಾಡೋದಿದ್ರೆ ಅದು ಕೇವಲ ಬಿಜೆಪಿಯಿಂದ […]
CHENNAPATNA BYELECTION, POLITICAL EXCLUSIVE..: ಚನ್ನಪಟ್ಟಣಕ್ಕೆ “ಹೃದಯವಂತ” ಸಂಸದ ಡಾ.ಮಂಜುನಾಥ್ ಪತ್ನಿ ಅನುಸೂಯ “ಮೈತ್ರಿ” ಅಭ್ಯರ್ಥಿ..?!
ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಡಿಸಿರುವಷ್ಟು ಕುತೂಹಲವನ್ನು ಬಹುಷಃ ಇನ್ನ್ಯಾವ ಕ್ಷೇತ್ರಗಳ ಉಪ ಚುನಾವಣೆ ಹಿಡಿದಿಟ್ಟುಕೊಂಡಿಲ್ಲ ಎಂದೆನಿಸುತ್ತದೆ. ಎರಡು ಕ್ಷೇತ್ರಗಳಲ್ಲಿನ ಪ್ರತ್ಯೇಕ ಪಕ್ಷಗಳ ಅಭ್ಯರ್ಥಿಗಳು ಯಾರೆನ್ನುವುದು ಬಹುತೇಕ ನಿಕ್ಕಿಯಾಗಿದ್ರೂ ಚನ್ನಪಟ್ಟಣ ವಿಚಾರದಲ್ಲಿ ಎದುರಾಳಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಯಾರೆನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.. ಮೊದಲು ನೀವು ಘೋಷಣೆ ಮಾಡಿ ಎಂದು ಕಾಂಗ್ರೆಸ್ ಕುಳಿತಿದ್ರೆ ಜೆಡಿಎಸ್-ಬಿಜೆಪಿ ಮೈತ್ರಿ ಮೊದಲು ನೀವು ಮಾಡಿ ಎಂದು ಸವಾಲಾಕಿ ಕೂತಂತಿದೆ.ಇದೆಲ್ಲದರ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ […]
ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕನಿಗೆ 3 ಮೀ. ಉದ್ದದ ದಂಡ ವಿಧಿಸಿದ ಪೊಲೀಸರು!
ಸಾಮಾನ್ಯವಾಗಿ ಹೆಬ್ಬಾವು ಹಿಡಿದಾಗ ಹಿಡಿದವರು ತಲೆಯಿಂದ ಬಾಲದವರೆಗೂ ಎಲ್ಲರೂ ಹಿಡಿದುಕೊಂಡು ಫೋಟೊಗೆ ಫೋಜ್ ಕೊಡೋದು ಸಾಮಾನ್ಯ. ಆದರೆ ಇಲ್ಲಿ ಪೊಲೀಸರು ಹೆಬ್ಬಾವು ಹಿಡಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ರಸೀದಿಯನ್ನು ಹಿಡಿದು ಫೋಜ್ ಕೊಟ್ಟಿದ್ದಾರೆ. ಹೌದು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ನೀಡಿದ ದಂಡದ ಬಿಲ್ ಉದ್ದ ನೋಡಿ ಆಶ್ಚರ್ಯಚಕಿತರಾದ ಪೊಲೀಸರು ಚಾಲಕನ ಜೊತೆ ಬಿಲ್ ಹಿಡಿದು ಫೋಟೊ ತೆಗೆಸಿಕೊಂಡಿದ್ದಾರೆ. ಶಿವಮೊಗ್ಗದ ಸಂಚಾರಿ ಪೊಲೀಸರು ಸುಮಾರು 3 ಮೀಟರ್ ಉದ್ದದ ಸಂಚಾರಿ ನಿಯಮದ ಬಿಲ್ ಕೊಟ್ಟು […]
ಭವಾನಿ ರೇವಣ್ಣಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವೆ ಎಚ್.ಡಿ. ರೇವಣ್ಣ ಪತ್ನಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಅವರಿಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಎಸ್ ಐಟಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ […]
ಕಲಬುರಗಿಯಲ್ಲಿ ಕಾರು-ಬೈಕ್-ಲಾರಿ ಸರಣಿ ಅಪಘಾತ: ನಾಲ್ವರ ದುರ್ಮರಣ
ಕಾರು, ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ಕಲಬುರಗಿ ತಾಲೂಕಿನ ಹಸನಾಪುರ ಬಳಿ ಸಂಭವಿಸಿದೆ. ಬೈಕ್ ಮತ್ತು ಕಾರಿನಲ್ಲಿದ್ದ ರಾಘವೇಂದ್ರ (35), ಮುಜಾಹಿದ್ (30), ಹುಸೇನ್ ಬಿ (45) ಮತ್ತು ಮೌಲಾಬಿ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ನಲ್ಲಿದ್ದ ಪರಮಾನಂದ ಹಾಗೂ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ಕಾರಲ್ಲಿ ತೇರಳುತ್ತಿದ್ದರು. ಸ್ಥಳಕ್ಕೆ ಕಲಬುರಗಿ ಪೊಲೀಸ್ […]