ಚಿಕ್ಕೋಡಿ :–
ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಅವರ ಆತ್ಮವಿಶ್ವಾಸ ಹೆಚ್ಚಿಸಿ ಸಹಕಾರ ಸಂಘದ ಸದುಪಯೋಗವನ್ನು ಜನರ ಮನೆ ಬಾಗಿಲಿಗೆ ಜೊಲ್ಲೆ ಗ್ರುಪ್ ತೆಗೆದುಕೊಂಡು ಹೋಗಿದೆ. ಸಹಕಾರ, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯದಲ್ಲಿ ಜೊಲ್ಲೆ ಗ್ರುಪ್ ಪ್ರಾಮಾಣಿಕ ಕೆಲಸ ಮಾಡುತ್ತಿದೆ ಎಂದು ಜೊಲ್ಲೆ ಗ್ರುಪ್ ಸಂಸ್ಥಾಪಕರು ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದ ನನದಿ ಕ್ಯಾಂಪಸ್‌ದಲ್ಲಿ ಜರುಗಿದ ಜೊಲ್ಲೆ ಗ್ರುಪ್‌ನ ವಿವಿಧ ಸಂಸ್ಥೆಗಳ ವಾರ್ಷಿಕ ಸರ್ವಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ೩೫ ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಬೀರೇಶ್ವರ ಸಹಕಾರಿ ಶಾಖೆಗಳನ್ನು ಆರಂಭಿಸಿ ಸಹಕಾರಿ ರಂಗದಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಸಹಕಾರಿ ಸಂಸ್ಥೆಯಲ್ಲಿ ದೊರೆಯುತ್ತವೆ. ಇದರಿಂದ ಗ್ರಾಹಕರ ನೆಚ್ಚಿನ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ ೪.೦೮ ಲಕ್ಷ ಸದಸ್ಯರನ್ನು ಹೊಂದಿದೆ. ೪೩೩೮ ಕೋಟಿ ಠೇವು ಸಂಗ್ರಹ. ೩೩೧೩ ಕೋಟಿ ಸಾಲ. ೪೫.೩೫ ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ.ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಾದ್ಯಂತ ೨೨೬ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯು ಇಷ್ಟೊಂದು ಬೆಳವಣಿಗೆ ಸಾಧಿಸಲು ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿ ಪ್ರೋತ್ಸಾಹ ಮತ್ತು ಸಿಬ್ಬಂದಿಗಳ ನಿರಂತರ ಪರಿಶ್ರಮ ಕಾರಣ ಎಂದರು.
ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ. (ಬಹುರಾಜ್ಯ) ೩೫ನೆಯ ಸರ್ವಸದಸ್ಯರ ಸಭೆ. ಎಣ್ಣೆಬೀಜ ಬೆಳಗಾರರ ಸಹಕಾರಿ ಸಂಘ ನಿ.ಯಕ್ಸಂಬಾದ ೩೨ ನೆಯ ವಾರ್ಷಿಕ ಸಭೆ. ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ೩೧ ನೆಯ ವಾರ್ಷಿಕ ಸಭೆ. ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ೩೦ ನೇ ವಾರ್ಷಿಕ ಸಭೆ. ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ೧೮ ನೆಯ ವಾರ್ಷಿಕ ಸಭೆ.ಲೋಕ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ೧೪ ನೆಯ ವಾರ್ಷಿಕ ಸಭೆ.ಬಸವಜ್ಯೋತಿ ಫಾರ್ಮರ್ ಪ್ರೊಡ್ಯುಸರ್ ಅರ್ಗನೈಜೇಶನ ಕೋ-ಆಪ್. ಸೊಸಾಯಟಿಯ ೫ ನೆಯ ವಾರ್ಷಿಕ ಸಭೆ ನಡೆಯಿತು.

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರುಪ್ ಸುಮಾರು ೨೨೬ ಶಾಖೆಗಳನ್ನು ಪ್ರಾರಂಭ ಮಾಡಿ ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಸಂಸ್ಥೆಯು ಹೆಮ್ಮರವಾಗಿ ಬೆಳೆಯಲು ಮೂರು ರಾಜ್ಯದ ಜನ ಸಾಕಷ್ಟು ಸಹಾಯ ಸಹಕಾರ ನೀಡಿದೆ. ಜನರ ಕೆಲಸಕ್ಕೆ ಜೊಲ್ಲೆ ಮನೆತನ ಟೊಂಕ ಕಟಿ ನಿಂತಿದೆ ಎಂದು ಮಾಜಿ ಸಚಿವರು ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕರಾದ, ಶ್ರೀಮತಿ ಶಶಿಕಲಾ ಜೊಲ್ಲೆ ಯವರು ಹೇಳಿದರು.
2024-25 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿ, ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತರಾದವರಿಗೆ ಪಿಂಚಣಿ ಪರಿಹಾರ ಮೊತ್ತ ವಿತರಣೆ, ಅಪಘಾತದಲ್ಲಿ ಮರಣಹೊಂದಿದ ಸಿಬ್ಬಂದಿ ಕುಟುಂಬದವರಿಗೆ ವಿಮೆ ಪರಿಹಾರ ಮೊತ್ತ ವಿತರಣೆ ಹಾಗೂ ಅತ್ಯುತ್ತಮ ಶಾಖೆಗಳಿಗೆ ಪುರಸ್ಕಾರ ಹಾಗೂ ಪ್ರೋತ್ಸಾಹ ಧನ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಮತ್ತು ಮಹಾರಾಷ್ಟ್ರ ಮಾಜಿ ವಿಧಾನ ಪರಿಷತ್ ಸದಸ್ಯ ದೀಪಕ ಸಾಳುಂಕೆ ಪಾಟೀಲ ಅವರು ಜೊಲ್ಲೆ ಗ್ರುಪ್ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಹಾಲ ಸಿದ್ದನಾಥ ಶುಗರ್ಸ್ ಅಧ್ಯಕ್ಷ, ಎಂ.ಪಿ.ಪಾಟೀಲ.ಉಪಾಧ್ಯಕ್ಷ ಪವನ ಪಾಟೀಲ.ಬೀರೇಶ್ವರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ. ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಶೀನ ತಾಂಬೋಳೆ, ವಿಭಾವರಿ ದೀಲಿಪ ಖಾಂಡಕೆ, ಆನಂದ ದೇವಗೌಡ ಪಾಟೀಲ, ಅಣ್ಣಾಸಾಹೇಬ ಚೌಗಲಾ, ರುಷಭ ಜೈನ, ವಜ್ರಕಾಂತ ಸದಲಗೆ, ಪ್ರಕಾಶ ಪಾಟೀಲ, ನಿಂಗಪ್ಪ ಕೋಕಲೆ, ಕಾಶಿನಾಥ ಕಮತೆ, ದತ್ತಾತ್ರೇಯ ಪಾಟೀಲ, ಬಾಳಾಸಾಹೇಬ ಕದಮ, ಮಲ್ಲಿಕಾರ್ಜುನ ತೇಲಿ, ಸದಾನಂದ ಹಳಿಂಗಳಿ, ಜಯಪ್ರಕಾಶ ಸಾವಂತ, ಚೇತನ ದೇಶಪಾಂಡೆ, ಶ್ರೀನಿವಾಸ ಕರಾಳೆ, ಶ್ರೀಪಾದ ನೇರ್ಲಿಕರ ಮತ್ತು ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ.ಮಂಗಾವತೆ, ಶಿವು ಡಬ್ಬನ್ನವರ, ಎಸ್.ಕೆ.ಮಾನೆ ಮುಂತಾದವರು ಇದ್ದರು.
ಜಯಾನಂದ ಜಾಧವ ಸ್ವಾಗತಿಸಿದರು.ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕ ಮಾತನಾಡಿದರು.