ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಪ್ರತಿಯೋಬ್ಬರಿಗೆ ಮುಟ್ಟಿಸುವ ಜವಾಬ್ದಾರಿ ಪ್ರತಿಯೋಂದು ಗ್ರಾಮ ಪಂಚಾಯತಿ ಹಾಗೂ ಸದಸ್ಯರ ಕರ್ತವ್ಯವಾಗಿರುತ್ತದೆ.
ಆದರೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮ ಪಂಚಾಯತಿಯ ಸದಸ್ಯನೇ ರಸ್ತೆ ಕಾಮಗಾರಿಯಲ್ಲಿ ಬೇರೇ ಕೂಲಿಗಾರರರ ಬದಲಿ ನಿಂತಿರುವುದಲ್ಲದೆ

ಒಂದೆ ದಿನ ಸರಿ ಸುಮಾರು ೨-೩ ಕಾಮಗಾರಿಗಳಲ್ಲಿ ಎನ್.ಎಮ್.ಎಮ್. ಎಸ್. ಪೋಟೋದಲ್ಲಿ ಕಾಣಿಸಿಕೊಂಡಿದ್ದು ಮತ್ತು ಕಾಮಗಾರಿಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯ ಭಾಗವಹಿಸಿದನ್ನು ನೋಡಿದರೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ಮತ್ತು ಸದಸ್ಯರ ಪ್ರಭಾವವಿರುವುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ,.

ಗ್ರಾಮ ಪಂಚಾಯತ,ಉಮರಾಣಿ ಸದಸ್ಯ, ಸಂತೋಷ ದುಂಡಪ್ಪ ಪಾಟೀಲ
ಹೌದು ಉಮರಾಣಿ ಗ್ರಾಮದ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣಗೋಳ್ಳುತ್ತಿರುವ ನಾವಿ ತೊಟದ ರಸ್ತೆಯಿಂದ ದುಂಡಪ್ಪ ಪಾಟೀಲ ಮನೆಯವರೆಗೆ ಕಚ್ಚಾ ರಸ್ತೆ ನಿರ್ಮಾಣ (ಕೇಲಸದ ಸಂಕೇತ:೧೫೦೪೦೦೪೦೨೫/ಆರ್,ಸಿ/೯೩೩೯೩೦೪೨೮೯೨೪೭೩೭೦೩ ಎಮ್.ಎಸ್.ಆರ್. ಸಂಖ್ಯೆ: ೨೫೭೨೯ ಹಾಗೂ ೧೫೦೪೦೦೪೦೨೫/ಆರ್,ಸಿ/೯೩೩೯೩೦೪೨೮೯೨೪೭೯೩೯೨/ ಉಮರಾಣಿ ಗ್ರಾಮದ ಮಹಾತ ತೋಟ ರಸ್ತೆಯಿಂದ ನಿಂಗಪ್ಪಾ ಪಡ್ಲಾಳೆ ಮನೆಯವರೆಗೆ ಕಚ್ಚಾ ರಸ್ತೆ ನಿರ್ಮಾಣ ಎಮ್.ಎಸ್.ಆರ್. ಸಂಖ್ಯೆ: ೨೫೭೩೦ ರಲ್ಲಿ ಉಮರಾಣಿ ಗ್ರಾಮ ಪಂಚಾಯತ ಸದಸ್ಯ ಸಂತೋಷ ದುಂಡಪ್ಪ ಪಾಟೀಲ ಕಾಣಿಸಿಕೊಂಡಿದ್ದು ಇರುತ್ತದೆ.

ನರೇಗಾ ಯೊಜನೆಯ ಸಮುದಾಯದ ಕಾಮಗಾರಿಗಳಲ್ಲಿ ಗಾಮ ಪಂಚಾಯತ ಸದಸ್ಯರು ಭಾಗವಹಿಸುವುದು ಕಾನೂನು ಪ್ರಕಾರ ಅಪರಾಧವಿದ್ದು ನರೇಗಾ ಯೋಜನೆಯ ಚಿಕ್ಕೋಡಿಯ ಸಹಾಯಕ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯನ ಮೇಲೆ ಯಾವ ರೀತಿ ಕಾನೂನು ಕ್ರಮ ತೆಗೆದುಕೋಳ್ಳುತ್ತಾರೆ ಅಥವಾ ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನದಿಂದ ಅನರ್ಹಗೋಳಿಸುತ್ತಾರೆ ಎಂಬುದನ್ನು ಕಾದು ನೊಡಬೇಕಾಗಿದೆ.

ಮುರಿಗೆಪ್ಪ ಅಡಿಸೇರಿ
ಹೇಳಿಕೆ : ಮುರಿಗೆಪ್ಪ ಅಡಿಸೇರಿ( ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಮರಾಣಿ)
ಗ್ರಾಮದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ನಡೆದಿದ್ದು, ಅದರಲ್ಲೂ ನರೇಗಾದಂತಹ ಯೋಜನೆಯಲ್ಲಿ ಗ್ರಾಮ ಪಂಚಾಯತ ಸದಸ್ಯರು ಭಾಗವಹಿಸಿರುವುದು ತಪ್ಪು. ಇದರಿಂದ ನಮ್ಮ ಗ್ರಾಮದ ಹೆಸರು ಹಾಳಾಗುತ್ತಿದ್ದು ಗ್ರಾಮದ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ ಬಹುತೇಕ ಎಲ್ಲಾ ಕೆಲಸಗಳು ಜೆಸಿಬಿ ಯಿಂದ ಮಾಡುತ್ತಿದ್ದಾರೆ ಬರೆ ಹರಳು ಗಳನ್ನು ಆರಿಸಲು ಮಾತ್ರ ಕೊಲಿಕಾರನ್ನು ಉಪಯೊಗಿಸುತ್ತಾರೆ ಎಂದರು.
ಸಂಜಯ ಚೇನ್ನವರ (ಅಭಿವೃದ್ದಿ ಅಧಿಕಾರಿ, ಗ್ರಾಮ ಪಂಚಾಯತ, ಉಮರಾಣಿ)
ಹೇಳಿಕೆ :
ಗ್ರಾಮದಲ್ಲಿ ಹಲವಾರು ಕೂಲಿಕಾರರ ಬೇಡಿಕೆಯ ಅನುಗುಣವಾಗಿ ಕಾಮಗಾರಿಗಳ ನಡೆಯುತ್ತಿದ್ದು ಒಂದು ವೇಳೆ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದರೆ ಅದು ತಪ್ಪು ಇಷ್ಟಾದರೂ ತಪ್ಪೆ ತಪ್ಪು ಸದರಿ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದ್ದು ಹಾಗೂ ನಾನೇ ಸ್ವಯಂ ಪರಿಶೀಲನೆ ಮಾಡುತ್ತೇನೆ.

ರಾಹುಲ ಶಿಂಧೆ, ( ಸಿ ಇ ಒ,ಬೆಳಗಾವಿ)
ನಮ್ಮ ಗಮನಕ್ಕೆ ಇಂತಹ ಪ್ರಕರಣ ಬಂದರೆ ನರೇಗಾ ಒಂಬುಡ್ಸಮನ ಅಧಿಕಾರಿಗೆ ತಿಳಿಸಿ ಮುಂದಿನ ಕ್ರಮ ಕ್ಯೆಗೊಳ್ಳುತ್ತೇವೆ.
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಅಧಿಕಾರಿಗಳು ಇದರ ಬಗ್ಗೆ ಕ್ರಮವನ್ನು ಕೈಗೊಳ್ಳತ್ತಾರಾ ಎಂದು ಕಾದು ನೋಡಬೇಕು.