ಚಿಕ್ಕೋಡಿ :–
“ಚಿಕ್ಕೋಡಿ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಹೆಚ್ಚಾದ ಲಂಚದ ಹಾವಳಿ”!
ದೇಶದಲ್ಲಿ ಮೊಟ್ಟ ಮೊದಲ ಭಾರಿಗೆ ೨೦೧೪ ರಲ್ಲಿ ದೇಶದ ಚುಕ್ಕಾಣಿ ಹೊತ್ತ ನರೇಂದ್ರ ಮೋದಿಯವರ ಕನಸಿನ ಕೂಸಾದ ಭಷ್ಟಾಚಾರ ಮುಕ್ತ ಭಾರತದ ನಿರ್ಮಾಣದ ಕನಸನ್ನು ಹೋತ್ತ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ದಶಕಗಳೆ ಕಳೆದಿವೆ.
ಆದರೂ ಕೂಡಾ ಭ್ರಷ್ಟಾಚಾರ, ಸರಕಾರಿ ಅಧಿಕಾರಿಗಳು ಲಂಚತನದ ವ್ಯಾಮೋಹ ಬಿಡದೆ ಸರಕಾರದ ಸವಲತ್ತು ಮತ್ತು ಸೌಲಬ್ಯಗಳನ್ನು ನೀಡುವಲ್ಲಿ ವಿಳಂಭ ದೋರಣೆಯಿಂದ ಅಧಿಕಾರಿಗಳ ಮತ್ತು ಜನರು ಲಂಚತನದ ಪ್ರಕರಣಕ್ಕೆ ಮುಂದಾಗುತ್ತಿರುವುದು ನಾಚಿಕೇಡಿನ ಸಂಗತಿಯಾಗಿದೆ.
“ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬ ಗಾದೆಯಂತೆ
ಹೌದು ಚಿಕ್ಕೋಡಿ ತಾಲೂಕಿನ ತಾಲೂಕ ಪಂಚಾಯತಿಯ ಕಚೇರಿಯಲ್ಲಿ ಇಂತಹದೊಂದು ಪ್ರಕರಣದ ಗುಮಾನಿ ಎದ್ದಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳ ಮಟ್ಟದ ಮಹಿಳಾ ಸಂಜಿವೀನಿ ಒಕ್ಕೂಟದ ಸಿಬ್ಬಂದಿಗಳ ವೇತನ, ವಿ,ಪಿಆರ್,ಪಿ ಸರ್ವೇಯ ಸಿಬ್ಬಂದಿಗಳ ವೇತನದ ಮೇಲೆ ಕಣ್ಣು ಹಾಕಿ , ಅವರಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿರುತ್ತದೆ.

ಹೇಳಿಕೆ : ಕೆ,ಎನ್. ವನ್ನೂರ ಕಾರ್ಯ ನಿರ್ವಾಹಕ ಅಧಿಕಾರಿ, ಚಿಕ್ಕೋಡಿ
ಇದರ ಬಗ್ಗೆ ಮೇಲಾಧಿಕಾರಿಗಳಾದ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ , ನಾನು ಹೊಸದಾಗಿ ಈ ಹುದ್ದೆಯನ್ನು ಪಡೆದಿದ್ದು , ಯೋಜನೆಯ ಸಂಬಂಧಿತ ಅಧಿಕಾರಿಯಾದ ನುಡುವೀನಕೇರಿ ಎಂಬ ಅಧಿಕಾರಿಯ ಮೇಲೆ ಆರೋಪ ಬಂದ ಮೇಲೆ ಸದರಿ ಹುದ್ದೆಯಿಂದ ಮುಕ್ತಗೋಳಿಸಲಾಗಿದೆ. ಆದ್ದರಿಂದ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಮಾನದಲ್ಲಿ ನೀಡಲಾಗುವುದು ಎಂದರು.

ಹೇಳಿಕೆ : ಶ್ರೀ ಸಂತೋಷ ಎಸ್. ಪೂಜಾರಿ ಕರವೇ ಉಪಾಧ್ಯಕ್ಷರು, ಚಿಕ್ಕೋಡಿ
ಚಿಕ್ಕೋಡಿ ತಾಲೂಕಾ ಪಂಚಾಯತ ಕಚೇರಿಯಲ್ಲಿ ಅಧಿಕಾರಿಗಳ ದುವರ್ತನೆ, ಲಂಚತನ, ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ನರೇಗಾ ಯೊಜನೆಯಡಿಯಲ್ಲಿ ಚೆಕ್ ಮೇಜರಮೆಂಟ್, ಪಾಸಿಂಗ್ ಹೆಸರಲ್ಲಿ ಗುತ್ತಿಗೆದಾರರ ಹಣ ವಸೂಲಿ ಮಾಡುತ್ತಿದ್ದು ಇದರ ಬಗ್ಗೆ ಸೂಕ್ತ ಆಧಾರಗಳು ಸಿಕ್ಕರೆ ಭಷ್ಟ ಅಧಿಕಾರಿಗಳ ವಿರುದ್ದ ಹೋರಾಟ ಮಾಡಲಾಗುವುದು.





