ಬೆಂಗಳೂರು :–
ಜುಲೈ ೧ ರಿಂದ ಪ್ರಯಾಣ ದರ ಹೆಚ್ಚಿಸಲಾಗುತ್ತದೆ ಎಂಬ ಸುತ್ತೋಲೆಯನ್ನು ಭಾರತೀಯ ರೈಲ್ವೆ ಸೋಮವಾರ ಹೊರಡಿಸಿದೆ.
ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿ ಇಲ್ಲದ ಬೋಗಿಗಳಿಗೆ ಪ್ರತಿ ಕಿಲೋ ಮೀಟರ್‌ಗೆ 1 ಪೈಸೆ ಹೆಚ್ಚಾಗಿದ್ದರೆ, ಎಲ್ಲಾ ಎಸಿ ಬೋಗಿಗಳಿಗೆ ಪ್ರತಿ ಕಿಲೋ ಮೀಟರ್‌ಗೆ 2 ಪೈಸೆ ಹೆಚ್ಚಾಗಲಿದೆ.
ಸಾಮಾನ್ಯ ಸ್ಲೀಪರ್ ಮತ್ತು ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸು ವವರು ಪ್ರತಿ ಕಿಲೋ ಮೀಟರ್‌ಗೆ ಅರ್ಧ ಪೈಸೆ ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.