“ಚಿಕ್ಕೋಡಿ ತಾಲ್ಲೂಕು ಪತ್ರಕರ್ತರ ಕಚೇರಿಗಾಗಿ ನಿವೇಶನ ನೀಡಲು ಇಲಾಖೆಯು ಬದ್ಧವಾಗಿದೆ” : ತಹಶಿಲ್ದಾರ,ಸಿ ಎಸ್ ಕುಲಕರ್ಣಿ

ಚಿಕ್ಕೋಡಿ :–

“ಸಂವಿಧಾನದ 4ನೇ ಅಂಗವಾಗಿರುವ ಪತ್ರಿಕೋದ್ಯಮದ ಹೊಣೆಗಾರಿಕೆ ಬಹಳವಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಪತ್ರಕರ್ತರು ಸತ್ಯವನ್ನು ಪರಾಮರ್ಶಿಸಿ ವರದಿ ಮಾಡಬೇಕು” ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರದಲ್ಲಿ ಮಂಗಳವಾರ ಚಿಕ್ಕೋಡಿ ತಾಲ್ಲೂಕು ಪತ್ರಕರ್ತರ ಬಳಗ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, “ಮಾಹಿತಿಯ ಕೊರತೆಯ ವರದಿಯಿಂದ ಓದುಗರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಹಾಗಾಗಿ ಪತ್ರಕರ್ತರು ಸಮಗ್ರ ಮಾಹಿತಿ ಕಲೆ ಹಾಕಿ ವರದಿ ಮಾಡಬೇಕು. ಸಮಾಜ ತಿದ್ದುವ ಜವಾಬ್ದಾರಿಯು ಪತ್ರಕರ್ತರ ಮೇಲಿದೆ” ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಎಲ್‍ಇ ಸಂಸ್ಥೆಯ ಬಿ ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ ಮಾತನಾಡಿ, “ಯು ಟ್ಯೂಬ್ ಹಾವಳಿಯಿಂದ ನೈಜ ಪತ್ರಿಕೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನೈಜ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸಬೇಕು.ಯುಟ್ಯೂಬ್ ವರದಿಗಾರಿಕೆಯು ಸಮಾಜಕ್ಕೆ ಮಾರಕವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ ಮಾತನಾಡಿ, “ಚಿಕ್ಕೋಡಿ ತಾಲ್ಲೂಕು ಪತ್ರಕರ್ತರ ಕಚೇರಿಗಾಗಿ ನಿವೇಶನ ನೀಡಲು ಇಲಾಖೆಯು ಬದ್ಧವಾಗಿದೆ. ಅಲ್ಲದೇ, ಪತ್ರಕರ್ತರ ಇನ್ನುಳಿದ ಸಮಸ್ಯೆಗಳ ನಿವಾರಣೆಗೂ ಶ್ರಮಿಸುವ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ, ಚಿಕ್ಕೋಡಿಯ ವಿಡಿಯೋ ಜರ್ನಲಿಸ್ಟ್ ಸಂಘದ ಅಧ್ಯಕ್ಷ ಸಿದ್ದೇಶ ಪುಠಾಣಿ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಜು ಸಂಕೇಶ್ವರಿ, ಹಿರಿಯ ವರದಿಗಾರ ಸುಭಾಷ ದಲಾಲ, ವಿರುಪಾಕ್ಷಿ ಕವಟಗಿ, ಸಂತೋಷ ಕಾಮತ, ಅಜಿತ ಸಣ್ಣಕ್ಕಿ, ಸಂಜು ಅರಬಾಂವಿ, ಸಂಜು ಕವಲಗಿ, ಮಹಾದೇವ ಪೂಜಾರಿ,ಮಿಯಾಲಾಲ ಕಿಲ್ಲೇದಾರ ಮುಂತಾದವರು ಇದ್ದರು. ಸಂಜೀವ ಕಾಂಬಳೆ ಸ್ವಾಗತಿಸಿದರು. ಚಂದ್ರಶೇಖರ ಚಿನಕೇಕರ ನಿರೂಪಿಸಿದರು.

Share this post:

Leave a Reply

Your email address will not be published. Required fields are marked *