ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ದೈನಂದಿನ ಅಡುಗೆಯಲ್ಲಿ ಅತಿಯಾದ ಉಪ್ಪು ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳು ಸೇರಿದಂತೆ
ವಿವಿಧ ಕಾಯಿಲೆಗಳಿಂದ ವಿಶ್ವಾದ್ಯಂತ ಪ್ರತಿ ವರ್ಷ 1.9 ಮಿಲಿಯನ್ ಜನರು ಸಾಯುತ್ತಿದ್ದಾರೆ. ಉಪ್ಪಿನಲ್ಲಿ ಶೇ.40ರಷ್ಟು ಸೋಡಿಯಂ ಮತ್ತು ಶೇ.60ರಷ್ಟು ಕ್ಲೋರೈಡ್ ಇದೆ,
ದಿನಕ್ಕೆ ಎರಡು ಗ್ರಾಂ ಸೋಡಿಯಂ ದೇಹಕ್ಕೆ ಸಾಕು. ಅದನ್ನು ಪಡೆಯಲು ದಿನಕ್ಕೆ ಐದು ಗ್ರಾಂ ಉಪ್ಪನ್ನು ಸೇವಿಸಿದರೆ ಸಾಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.