ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಫೈರಿಂಗ್ ಪ್ರಕರಣ ಸುಳ್ಳು ಎಂಬ ಆರೋಪದ ಬಗ್ಗೆ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು

ಬೆಂಗಳೂರು :–

ಗೃಹ ಸಚಿವ ಜಿ ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಫೈರಿಂಗ್ ಪ್ರಕರಣದ ಕುರಿತು ಮಹತ್ವದ ಹೇಳಿಕೆ ನೀಡಿದರು.

ಈ ಫೈರಿಂಗ್ ಸುಳ್ಳು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು

ತನಿಖೆ ಬಳಿಕ ಸಂತ್ಯಾಂಶ ಬಯಲಿಗೆ: ಈ ಘಟನೆ ಆಕಸ್ಮಿಕವೋ ಅಥವಾ ನಿಜವಾದ ದಾಳಿಯೋ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ, ಫಲಿತಾಂಶಕ್ಕಾಗಿ ಕಾಯೋಣ ಎಂದು ಅವರು ಹೇಳಿದರು

ನಾಳೆಯ ಅಧಿವೇಶನದ ನಿರೀಕ್ಷೆ: ಹುಬ್ಬಳ್ಳಿ ಫೈರಿಂಗ್ ಪ್ರಕರಣದ ಸಿಐಡಿ ತನಿಖೆ, ಒಕ್ಕಲಿಗ ಮತ್ತು ದಲಿತ ಸಮುದಾಯದ ಚರ್ಚೆಗಳು, ದಾವಣಗೆರೆಯ ಹಲ್ಲೆ ಪ್ರಕರಣದ ಕಠಿಣ ಕ್ರಮಗಳು ಹಾಗೂ ಕ್ಯಾಬಿನೆಟ್ ಸಭೆಯ ತೀರ್ಮಾನಗಳು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಕುತೂಹಲವನ್ನು ಮೂಡಿಸಿವೆ. ನಾಳೆಯ ಅಧಿವೇಶನದಲ್ಲಿ ಈ ವಿಷಯಗಳ ಕುರಿತಾದ ಚರ್ಚೆಯ ಫಲಿತಾಂಶಕ್ಕಾಗಿ ಎಲ್ಲರ ಚಿತ್ತ ನೆಟ್ಟಿದೆ.

Share this post:

Leave a Reply

Your email address will not be published. Required fields are marked *