ನಿಪ್ಪಾಣಿ :–
“ಭೀಮಹೆಜ್ಜೆ ಶತಮಾನದ ಸಂಭ್ರಮ”
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿಯ 100 ವರ್ಷದ ಅಂಗವಾಗಿ ಬಿಜೆಪಿ ವತಿಯಿಂದ ಬೆಂಗಳೂರಿನಿಂದ ನಿಪ್ಪಾಣಿವರೆಗೆ ಏಪ್ರಿಲ್ 11 ರಿಂದ ಆರಂಭವಾಗಿರುವ ‘ಭೀಮ ಹೆಜ್ಜೆ 100 ರ ಸಂಭ್ರಮ’ ಜನ ಜಾಗೃತಿ ರಥಯಾತ್ರೆ ನಿಪ್ಪಾಣಿಗೆ ಆಗಮಿಸಿದ ಹಿನ್ನಲೆ
ಅಂಬೇಡ್ಕರ ಜಿ ಪ್ರತಿಮೆಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ,ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ,ಗೌರವ ನಮನ ಸಲ್ಲಿಸಿ,ಬೈಕ್ ರ್ಯಾಲಿಗೆ ಚಾಲನೆ ನೀಡಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಯಣಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಎನ್. ರವಿಕುಮಾರ,ಮಾಜಿ ಸಚಿವರು ಹಾಗೂ ಅಭಿಯಾನದ ಸಂಚಾಲಕರಾದ ಶ್ರೀ ಎನ್.ಮಹೇಶ್, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಸಿಮೆಂಟ ಮಂಜು,ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಶ್ರೀ ಡಾ.ಉಮೇಶ್ ಜಾಧವ, ಶ್ರೀ ಸತೀಶ್ ಅಪ್ಪಾಜಿಗೋಳ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.