“ಮಕ್ಕಳಿಗೆ ಪೌಷ್ಟಿಕ ಆಹಾರ ಪೋಷಣ ಅಭಿಯಾನದ ಕಾರ್ಯಕ್ರಮ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–
ಮಕ್ಕಳಿಗೆ ಆರೋಗ್ಯ ರಕ್ಷಣೆ ಪೋಷಣ ಅಭಿಯಾನದ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಂತೋಷ ಕಾಂಬಳೆ ಹೇಳಿದರು
ಅವರು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಡಾ ಅಂಬೇಡ್ಕರ ಸಮುದಾಯ ಭವನದಲ್ಲಿ ಶುಕ್ರವಾರ ೧೩ ರಂದು ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು
ಮಕ್ಕಳ ಪೌಷ್ಟಿಕ ಆಹಾರ ಪದ್ಧತಿಗೆ ಸರ್ಕಾರ ಒತ್ತು ನೀಡಿದ್ದು ಅಭಿಯಾನ ಆರಂಭಿಸಿದೆ.ಗ್ರಾಮೀಣ ಬಡ ಮಕ್ಕಳು ಹಾಗೂ ಗರ್ಭಿಣಿಯರು ಬಾಣಂತಿಯರು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸುಧಾರಣೆ ಕಾಣಲು ಅನುಕೂಲವಾಗಿದೆ ಎಂದರು

ಪ್ರಾರ್ಥಮಿಕ ಹಂತದಲ್ಲಿ ಮಕ್ಕಳ ಆರೋಗ್ಯದ ಜೊತೆ ಉತ್ತಮ ಶಿಕ್ಷಣ ನೀಡುವ ಕೆಲಸವಾಗುತ್ತಿದೆ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನೀಡುವ ಆಹಾರದಲ್ಲಿ ಪೌಷ್ಟಿಕ ಶುಚಿತ್ವ ಆದ್ಯತೆ ನೀಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕರಾದ ಸಿದ್ಧಾರ್ಥ ಗಾಯಗೊಳ ಮಾತನಾಡಿಒಂದು ಕಾಲದಲ್ಲಿ ಶಾಲೆ ಎಂದರೆ ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗಿದ್ದವು ಆದರೆ ಇಂದು ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು
ಈ ಸಂದಭ೯ದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅನಿತಾ ದಯಾರಕರ, ತಾಲೂಕಾ ಮಟ್ಟದ ಕೋ ಆರ್ಡಿನೇಟರ ರಾಜು ನಾಗರಾಳೆ,ಯು ಡಿ ಕಾಂಬಳೆ, ಗ್ರಾಮ ಪಂಚಾಯತ್ ಸದಸ್ಯರಾದ ಸಕ್ಕೂಬಾಯಿ ನಾಂದ್ರೆ,ಶಕೀಲ ಮುಲ್ಲಾ,ಮಾಯಾ ಬೀಲವಾಡೆ,ಆರೋಗ್ಯ ಇಲಾಖೆಯ ಡಾ ರೋಹಿಣಿ.ಸುಪ್ರೀಯಾ ಜಿ ಎ ಸಾಳುಂಕೆ.ಎಲ್ಲಾ ಆಶಾ ಕಾರ್ಯಕತರು,ಅಂಗನವಾಡಿ ಕಾರ್ಯಕತೆರು ಹಾಗೂ ಗರ್ಭಿಣಿಯರು ಬಾಣಂತಿಯರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours