ವರದಿ : ಮಿಯಾಲಾಲ ಕಿಲ್ಲೇದಾರ
ಬೆಂಗಳೂರು :–
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ದುರ್ಬಳಕೆ ತಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತನೆ ನಡೆಸಿದೆ.
ಕಾರ್ಡ್ ಗೆ 16 ರಿಂದ 17 ರೂಪಾಯಿ ವೆಚ್ಚವಾಗಲಿದ್ದು, ಇದನ್ನು ಯಾರು ಭರಿಸಬೇಕು ಎಂಬುದರ ಜೊತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಪ್ರತಿದಿನ ಸುಮಾರು 45 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.
ನಿರ್ವಾಹಕರ ವಿರುದ್ಧ ಗೋಲ್ಮಾಲ್ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದಾಯ ಸೋರಿಕೆ ತಡೆಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತನೆ ನಡೆದಿದೆ.
ಅಲ್ಲದೇ, ಕೆಲವು ಮಹಿಳೆಯರು ಉಚಿತ ಟಿಕೆಟ್ ಪಡೆಯುವ ಸಂಬಂಧಿಸಿದ ದಾಖಲೆ ತೋರಿಸದೆ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುವುದು ನಡೆಯುತ್ತಿದ್ದು,
ಈ ಗೊಂದಲಗಳಿಗೆ ತೆರೆ ಎಳೆಯಲು ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು.
+ There are no comments
Add yours