ಚಿಕ್ಕೋಡಿ :–
ಉಚಿತ ಗುದಗತ ರೋಗಗಳ ತಪಾಸಣೆ ಶಿಬಿರ
ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಗುದಗತ ರೋಗಗಳ ಉಚಿತ ತಪಾಸಣೆ ಶಿಬಿರವನ್ನು ೨೦-೦೭-೨೦೨೫ ರಂದು ಮುಂಜಾನೆ ೦೯:೦೦ ರಿಂದ ಸಂಜೆ ೫:೦೦ರವರೆಗೆ ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ಮೂಲವ್ಯಾಧಿ (ಪೈಲ್ಸ್), ಭಗಂದರ (ಫಿಸ್ತುಲಾ), ಫಿಶರ, ಕುರು, ಪೈಲೋನೈಡಲ್ ಸೈನಸ್ (ನಾಡಿ ವೃಣ), ಗುದನಾಳದ ಸರಿಕೆ (ಹಿಗ್ಗುವಿಕೆ), ಗುದದ್ವಾರದ ಗಡ್ಡೆಗಳು, ಮಲಬದ್ಧತೆ, ಮಲ ವಿಸರ್ಜನೆ ಸಮಯದಲ್ಲಿ ರಕ್ತಸ್ರಾವ, ಉರಿ, ನೋವು ಸಮಸ್ಯೆಗಳಿಗೆ ಆಯುರ್ವೇದ ವೈದ್ಯರಿಂದ ಉಚಿತ ತಪಾಸಣೆ ಮಾಡಲಾಗುವುದು.
ವಿಶಿಷ್ಟ ಆಯುರ್ವೇದ ಚಿಕಿತ್ಸೆಗಳಾದ ಕ್ಷಾರಕರ್ಮ, ಕ್ಷಾರಸೂತ್ರ, ಶಸ್ತçಚಿಕಿತ್ಸೆ ವiತ್ತು ಔಷÀಧಿಗಳಿಂದ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕ ಮಾಹಿತಿಗಾಗಿ ಸಂಪರ್ಕಿಸಿ ೦೮೩೩೮೨೭೫೧೦೦.