ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕೂಸಿನ ಮನೆಗಳಿಗೆ ಮೊಬೈಯಿಲ್ ಕ್ರಷ್ ಸಂಸ್ಥೆ ಸಂಯೋಜಕರಾದ ವಿಜಯಲಕ್ಷ್ಮಿ ಯವರು ಗ್ರಾಮ ಪಂಚಾಯತಿಗಳಲ್ಲಿನ ಕೂಸಿನ ಮನೆಗೆ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಮಾತನಾಡಿ, ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಕೂಸಿನ ಮನೆಗಳಿಗೆ ಹೆಚ್ಚಿನ ಸಂಕ್ಯೆಯಲ್ಲಿ ಮಕ್ಕಳು ಕರೆದು ತಂದು ಅವರಿಗೆ ಪೌಷ್ಟಿಕ ಆಹಾರ ನೀಡಿ ಆರೋಗ್ಯಯುತವನ್ನಾಗಿ ಮಾಡುವಂತೆ ಅವರು ಸಲಹೆ ನೀಡಿದರು.
ಗ್ರಾಮದಲ್ಲಿರುವ ಮೂರು ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಮನೆಗೆ ಭೇಟ್ಟಿ ನೀಡಿ ಕೂಸಿನ ಮನೆ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಆರೈಕೆದಾರರು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.ಸರಕಾರ
ಕೂಸಿನ ಮನೆಗಳಿಗಾಗಿ ಹೆಚ್ಚಿನ ಅನುದಾನ ನೀಡುತ್ತಿದೆ. ಅದನ್ನು ಬಳಕೆ ಮಾಡಿಕೊಂಡು ಕೂಸಿನ ಮನೆಯನ್ನು ಅಭಿವೃದ್ದಿ ಪಡಿಸುವಂತೆ ತಿಳಿಸಿದರು.
ತಾಲೂಕಿನ ವಿವಿಧ ಕೂಸಿನ ಮನೆಗಳಿಗೆ ಭೇಟ್ಟಿ ನೀಡಿ ಮಕ್ಕಳಿಗೆ ನೀಡುವ ಆಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಾದ್ರೋಳ್ಳಿ, ಸಹಾಯಕ ನಿರ್ದೇಶಕರಾದ ಎಸ್.ಎಸ್.ಮಠದ,ಶಿವಾನಂದ ಶಿರಗಾಂವೆ, ಸಿಡಿಪಿಓ ಸಂತೋಷ ಕಾಂಬಳೆ,ಐಇಸಿ ಸಂಯೋಜಕರಾದ ರಂಜಿತ ಕಾರ್ಣಿಕ, ಹಿರಿಯ ಮೇಲ್ವವಿಚಾರಕಿ ಭಾರತಿ ಹೆದ್ದೂರಿಶೆಟ್ಟಿ, ಗ್ರಾಮ ಪಂಚಾಯತ ಪಿಡಿಓಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
+ There are no comments
Add yours