“ಅಂಕಲಿ ಗ್ರಾಮದ ಶ್ರೀ ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮ ಉದ್ಘಾಟನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ
ದೇಶವನ್ನ ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ ಹಾಗಾಗಿ ಇಂದಿನ ಯುವಕರು ಸಂಸ್ಕಾರವಂತರಾಗಿ ಬೆಳೆದು ದೇಶದ ಪರಂಪರೆಯನ್ನು ಮುಂದು ನಡೆಸಿಕೊಂಡು ಹೋಗಬೇಕೆಂದು ಜಮಖಂಡಿಯ ಸಹಜಾನಂದ ಅವಧೂತರು ಹೇಳಿದರು
ಅವರು ತಾಲುಕಿನ ಅಂಕಲಿ ಗ್ರಾಮದಲ್ಲಿ ಕಳೆದ ದಿನಾಂಕ 11 ರಂದು ಶ್ರೀ ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಅವರು ಸಂಸ್ಕಾರದ ಕೊರತೆಯಿಂದಾಗಿ ಯುವಕರು ದಾರಿತಪ್ಪಿ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಕಾರಣ ಧಾರ್ಮಿಕ ಚಿಂತನೆಗಳು ಪದೇ ಪದೇ ಜರುಗುವುದರಿಂದ ಯುವಕರನ್ನ ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು

ಜೋಡಕುರಳಿ ಸಿದ್ದಾರೋಡ ಮಠದ ಚಿದ್ಘನಾನಂದ ಭರತಿ ಮಹಾಸ್ವಾಮಿಗಳು ಮಾತನಾಡುತಾ ಗುರುವಿನ ಗುಲಾಮನಾಗುವ ತನಕ ದೊರೆಯದನ ಮುಕುತಿ ಗುರುಸೇವ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕೆಂದು ಹೇಳಿದರು
ಕೋಳಿಗುಡ್ಡದ ಸಿದ್ಧಾರೂಢ ಶ್ರೀಗಳು ಮಾತನಾಡಿ ಮಾನವ ಧರ್ಮ ಶ್ರೇಷ್ಠವಾದ ಧರ್ಮ ದಾನ ಧರ್ಮ ಮಾಡುವ ಮೂಲಕ ಪುಣ್ಯದ ಮಾರ್ಗ ಹಿಡಿಯಬೇಕೆಂದು ಹೇಳಿದರು
ಲಿಂಗನೂರಿನ ಶ್ರೀಗಳು ಮಾತನಾಡಿದರು ಹಾಗೂ ಜಮಖಂಡಿಯ ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಮಾತನಾಡಿದರು

ಕಾರ್ಯಕ್ರಮದಲ್ಲಿ ಈರಪ್ಪ ಮಾಳಿಗೆ ತುಕಾರಾಂ ಕುರಣೆ. ಅನಿಲ್ ಬಡಿಗೇರ್. ಬಾಳು ಕುರೆ.ಚಂದ್ರಕಾಂತ್ ಕುರೆ.ಅಮರ್ ನಡುಮನಿ. ಪಿಂಟು ಮಾಳಗೆ. ರಾಕೇಶ ತಳಕೇರಿ.
ಗಜಾನನ ವಗ್ಗೆ.ಸುಕುಮಾರ ಚಲವಾದಿ. ವಿಶ್ವನಾಥ ಘಟ್ಟೆ .ಸೇರಿದಂತೆ ಅಂಕಲಿಯ ಶ್ರೀ ರುದ್ರಾವಧೂತ ಮಠದ ಸರ್ವ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು


Share with Your friends

You May Also Like

More From Author

+ There are no comments

Add yours