“ಶಾಸಕರ ಮಾದರಿ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಸಸಿ ನೆಟ್ಟು ಕಾರ್ಯಕ್ರಮ ಕೆ ಚಾಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಪ್ರತಿ ವರ್ಷ ಆಗಸ್ಟ್ ಹತ್ತರಂದು ಪ್ರಪಂಚದಾದ್ಯಂತ ವಿಶ್ವ ಜೈವಿಕ ಇಂಧನ ದಿನವನ್ನಾಗಿ ಆಚರಿಸಲಾಗುತ್ತದೆ ಶಕ್ತಿಯ ಪರ್ಯಾಯ ಮೂಲವಾಗಿ ಇಂಧನಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉತ್ತೇಜಿಸುವುದು ಆಗಿದೆ ಎಂದು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಎಸ್ ಕಾದ್ರೋಳ್ಳಿ ಹೇಳಿದರು

ಶನಿವಾರ ಶಾಸಕರ ಮಾದರಿ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಸಸಿ ನೆಟ್ಟು ಕಾರ್ಯಕ್ರಮ ಕೆ ಚಾಲನೆ ನೀಡಿ ಮಾತನಾಡಿದರು
ವಿಶ್ವ ಜೈವಿಕ ಇಂಧನ ದಿನವು ಜಾಗತಿಕ ಶಕ್ತಿ ಮತ್ತು ಹವಾಮಾನ ಗುರಿಗಳನ್ನು ಸಾಧಿಸಲು ಜೈವಿಕೆ ಇಂಧನಗಳ ಪಾತ್ರ ಬಹುಮುಖ್ಯವಾಗಿದೆ. ಜೈವಿಕ ಇಂಧನವು ಗಾಳಿ ಮತ್ತು ನೀರಿನ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಎ ಮೆಕಮರಡಿ ಸಾಮಾಜಿಕ ಅರಣ್ಯಾಧಿಕಾರಿಗಳಾದ ಸಚೀನ ಹೊನ್ನಮನಿ ತಾ ಪಂ ಸಹಾಯಕ ನಿರ್ದೇಶಕರಾದ (ಗ್ರಾ ಉ) ಶಿವಾನಂದ ಶಿರಗಾಂವೆ ಐಇಸಿ ಸಂಯೋಜಕರಾದ ರಂಜೀತ ಕಾರ್ಣಿಕ ಮತ್ತು ಶಾಲಾ ಶಿಕ್ಷಕರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು


Share with Your friends

You May Also Like

More From Author

+ There are no comments

Add yours