“ಅರಣ್ಯ ಇಲಾಖೆ” ಉದ್ದಾರಕ್ಕೆ “ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ” ದಿವಾಳಿಯಾಗಬೇಕಾ..?!
ಬೆಂಗಳೂರು: ಸರ್ಕಾರದ ಬೊಕ್ಕಸ ಬರಿದಾಗಿದೆಯೇ..? ಇಲಾಖೆಗಳನ್ನು ನಡೆಸ್ಲಿಕ್ಕೆ ಹಣದ ಕೊರತೆ ಎದುರಾಗಿದ್ಯಾ..? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೊಕ್ಕಸದಲ್ಲಿದ್ದ ಹಣವನ್ನು ಅರಣ್ಯ ಇಲಾಖೆಯ ನಿರ್ವಹಣೆಗೆ ಬಿಡುಗಡೆ ಮಾಡುವಂತೆ ಸೂಚಿಸಿರುವ ಹಿನ್ನಲೆಯಲ್ಲಿ, ಫೈನಾನ್ಸ್ ಡಿಪಾರ್ಟ್ಮೆಂಟ್ ಮಂಡಳಿಗೆ ಬರೆದಿರುವ ಪತ್ರವೇ ಇಂತದ್ದೊಂದು ಅನುಮಾನ ಬಲಗೊಳಿಸುತ್ತದೆ.ತನ್ನದೇ ಶ್ರಮ-ಪ್ರಯತ್ನದಿಂದ ಸಂಪನ್ಮೂಲ ಕ್ರೋಢೀಕರಿಸಿಟ್ಟುಕೊಂಡಿರುವ ಮಂಡಳಿಯ ಹಣದಲ್ಲಿ ನೂರಾರು ಕೋಟಿ ಹಣವನ್ನು ಅನಾಮತ್ತಾಗಿ ಅರಣ್ಯ ಇಲಾಖೆಗೆ ಕೊಡುವಂತೆ ಆದೇಶಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮಂಡಳಿಯ ಅಧಿಕಾರಿ-ನೌಕರರಲ್ಲಿ ಮೂಡಿದೆ.ಸರ್ಕಾರದ ಧೋರಣೆ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಲು […]
ಕನ್ನಡ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಕಿರಣ್(ಚಿಕ್ಕಣ್ಣ) ಅಸಹಜ ಸಾವು..?!
ಬೆಂಗಳೂರು: ಕನ್ನಡದ ಹಲವು ನ್ಯೂಸ್ ಚಾನೆಲ್ ಗಳಲ್ಲಿ ಹಿರಿಯ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದ ಕಿರಣ್ ಕುಮಾರ್ ಬೆಂಗಳೂರು ಹೊರವಲಯದ ಕಡಬಗೆರೆಯ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಸಣ್ಣ ಪ್ರಾಯದಲ್ಲೇ ಅಸಹಜ ಸಾವಿಗೆ ತುತ್ತಾಗಿರುವುದಕ್ಕೆ ದಿಗ್ಬ್ರಾಂತಿ ವ್ಯಕ್ತವಾಗಿದೆ. ಮೂಲತಃ ಕೆ.ಆರ್ ಪೇಟೆಯವರಾದ ಕಿರಣ್ ಬಿ.ಜೆ. ದಶಕಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.ಕಸ್ತೂರಿಯಿಂದ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಆರಂಭಿಸಿದ್ದರು.ನಂತರ ಪ್ರಜಾ ಟಿವಿ, ನ್ಯೂಸ್-18 ಕನ್ನಡದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ […]
ಆತ್ಮಹತ್ಯೆ ಪ್ರಚೋದನೆ,ಹಲ್ಲೆ ಆರೋಪ:BMTC ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು..
ಶಿವಪ್ರಕಾಶ್ ವಿರುದ್ಧ ಘಟಕ 12ರ ಸಿಬ್ಬಂದಿ ಮಹೇಶ್ ಆತ್ಮಹತ್ಯೆಗೆ ಪ್ರಚೋದನೆ,ಸಿಬ್ಬಂದಿ ಲಕ್ಕಪ್ಪ ಮೇಲೆ ಮಾರಣಾಂತಿಕ ಹಲ್ಲೆ ಆರೋಪ ಬೆಂಗಳೂರು:ಸಾರಿಗೆ ನೌಕರರು ಸಣ್ಣ ತಪ್ಪು ಮಾಡಿದ್ರೂ ಘನಘೋರ ಅಪರಾಧ ಎನ್ನುವಂತೆ ಬಿಂಬಿಸಿ ಶಿಕ್ಷೆ ನೀಡೊಕ್ಕೆ ಕಾದು ಕುಂತಿರುತ್ತದೆ ಬಿಎಂಟಿಸಿ ಆಡಳಿತ ಮಂಡಳಿ.ಆದ್ರೆ ಅದೇ ಅಧಿಕಾರಿಗಳು ಪ್ರಾಣ-ಮಾನ ಹೋಗುವಂಥ ಗಂಭೀರ ಸ್ವರೂಪದ ಕೃತ್ಯ ಎಸಗಿದ್ರೂ, ಗಂಭೀರ ಸ್ವರೂಪದ ಆಪಾದನೆ ಎದುರಿಸುತ್ತಿದ್ದರೂ ಅಂಥವ್ರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ.ಇದಕ್ಕೊಂದು ಜ್ವಲಂತ ನಿದರ್ಶನ ಎಂದರೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಶಿವಪ್ರಕಾಶ್ ಎನಿಸುತ್ತದೆ […]
EDUCATION EXCLUSIVE….PU ಶಿಕ್ಷಣ ಇಲಾಖೆಯಲ್ಲಿ, ನಿರ್ದೇಶಕರನ್ನೇ “ದಾರಿ” ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ “ಹಿತಾಸಕ್ತಿ”ಗಳಿವೆಯಾ..?!
ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ..? ದಕ್ಷ-ಪ್ರಾಮಾಣಿಕ IAS ಅಧಿಕಾರಿ ಸಿಂಧೂ B ರೂಪೇಶ್ ಅವರ “ಒಳ್ಳೆಯತನ”…?! ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ(DEPARTMENT OF SCHOOL EDUCATION-PRE UNIVERSITY) ಗೆ ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು […]
BTV MAKEUP MAN CHETHAN NOMORE..”ಬಣ್ಣ”ಗಳಲ್ಲಿ ಲೀನವಾದ BTV ಮೇಕಪ್ ಮ್ಯಾನ್ ಚೇತನ್..
ಬೆಂಗಳೂರು: ನ್ಯೂಸ್ ಚಾನೆಲ್ ಗಳ ಪರದೆ ಮೇಲೆ ನಿರೂಪಕರು,ರಿಪೋರ್ಟರ್ಸ್ ಗಳು ಚೆನ್ನಾಗಿ ಕಾಣುವುದರಲ್ಲಿ ತೆರೆ ಹಿಂದೆ ಕೆಲಸ ಮಾಡುವ ಮೇಕಪ್ ಮ್ಯಾನ್ ಗಳ ಪಾತ್ರ ನಿರ್ಣಾಯಕವಾಗಿರುತ್ತೆ.ತೆರೆ ಮೇಲೆ ಬಂದವರು ಸುದ್ದಿಯಾಗುತ್ತಾರೆ.ಆದರೆ ತೆರೆ ಹಿಂದೆ ಕೆಲಸ ಮಾಡಿದವರು ಪ್ರಚಲಿತಕ್ಕೆ ಬರುವುದೇ ಇಲ್ಲ.ಬಿಟಿವಿ ನ್ಯೂಸ್ ಚಾನೆಲ್ ನಲ್ಲಿ ಅನೇಕ ವರ್ಷಗಳಿಂದಲೂ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ಎನ್ನುವ ಮಿತಭಾಷಿ,ನಿರುಪದ್ರವಿ,ಅಜಾತಶತೃ ಯುವಕ ಸಣ್ಣ ವಯಸ್ಸಿನಲ್ಲೇ ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾನೆ. ಬಿಟಿವಿ ನ್ಯೂಸ್ ಚಾನೆಲ್ ನಲ್ಲಿ ಹಿರಿಯ ಮೇಕಪ್ ಮ್ಯಾನ್ […]
EXCLUSIVE….INDISCIPLINE IN PU BOARD..?! ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ..?! ಏನ್ ಮಾಡುತ್ತಿದ್ದಿರಾ ಶಿಕ್ಷಣ ಸಚಿವರೇ..?!
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಳಿ ತಪ್ಪಿದ ಆಡಳಿತ..ಹದ್ದುಮೀರಿದ ಅಧಿಕಾರಿಗಳು…ಶಿಕ್ಷಣ ಸಚಿವರ ನಿಷ್ಕಾಳಜಿ..?! ಬೆಂಗಳೂರು:ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ನಿರ್ಣಾಯಕ ಘಟ್ಟ ಎನಿಸಿಕೊಳ್ಳುತ್ತೆ ಪದವಿಪೂರ್ವ ಶಿಕ್ಷಣ..ಇದರ ನಿರ್ವಹಣೆಗೆಂದೇ ಪಿಯು ಶಿಕ್ಷಣ ಇಲಾಖೆ ಎನ್ನೋದು ಕೆಲಸ ಮಾಡುತ್ತದೆ.ಆದ್ರೆ ಅಂತದ್ದೊಂದು ಇಲಾಖೆ ನಿಜಕ್ಕೂ ಜೀವಂತವಾಗಿದೆಯೇ..? ಇಲಾಖೆಯ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನಿಜಕ್ಕೂ ಅಲ್ಲಿ ಏನಾಗುತ್ತಿದೆ ಎನ್ನುವುದರ ಅರಿವು ಇದೆಯೇ..? ಆ ಇಲಾಖೆ ಮಾಡಬೇಕಿರುವುದೇನು..? ಮಾಡುತ್ತಿರುವುದೇನು ಎನ್ನುವುದರ ಮಾಹಿತಿಯಾದರೂ ಅವರಿಗಿದೆಯೇ..? ಇಲಾಖೆಯ ನಿರ್ದೇಶಕರೆನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ..? ಅಲ್ಲಿರುವ ಕೆಳ ಹಂತದ ಅಧಿಕಾರಿಗಳ […]
BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮೌನವನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೋ..? ಅಥವಾ ಅವರ ಒಳ್ಳೇತನಕ್ಕೆ ಬೆಲೆ ಕೊಡುತ್ತಿಲ್ಲವೋ..? ಅಥವಾ ಏನ್ ಮಾಡಿದ್ರೂ ಅವ್ರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಬಿಡು ಎನ್ನುವ ತಾತ್ಸಾರವೋ..? ಗೊತ್ತಿಲ್ಲ..ಬಿಎಂಟಿಸಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಂತಾಗಿದೆ. .ಇದಕ್ಕೆ ಜ್ಬಲಂತ ಉದಾಹರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗಳು. ಬಿಎಂಟಿಸಿ ಡಿಪೋ 34 ಕ್ಕೆ ಸಂಬಂಧಿಸಿದ್ದೆಂದು ಹೇಳಲಾಗ್ತಿರೋ ಒಂದಷ್ಟು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ವೀಡಿಯೋ […]
SAHYADRI SCIENCE COLLEGE ALUMNI MEET: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ “ಮಹಾಸಮಾಗಮ”ಕ್ಕೆ ಮುಹೂರ್ತ ಫಿಕ್ಸ್
ನವೆಂಬರ್ 23ಕ್ಕೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ(ಅಲುಮಿನಿ ಮೀಟ್) ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ(SHIVAMOGGA OR SHIMOGA) ದ ಮಟ್ಟಿಗೆ ಶಿಕ್ಷಣಕ್ಕೆ ಶ್ರೇಷ್ಟ ಹಾಗೂ ಸರ್ವೋತ್ಕ್ರಷ್ಟ ಆಯ್ಕೆ ಎಂದರೆ ಅದು ಸಹ್ಯಾದ್ರಿ ಕಾಲೇಜ್ (SAHYADRI COLLEGE) ಎನ್ನುವ ಮಾತಿದೆ.ಕಾಲ ಎಷ್ಟೇ ಬದಲಾದ್ರೂ ಶೈಕ್ಷಣಿಕ ವ್ಯವಸ್ಥೆಯಲ್ಲೆ ಎಷ್ಟೇ ಸ್ಥಿತ್ಯಂತರಗೊಂಡ್ರೂ, ಸಾಕಷ್ಟು ಮಗ್ಗಲುಗಳನ್ನು ಬದಲಿಸಿದ್ರೂ..ಆಯಾಮಗಳಲ್ಲಿ ಬದಲಾವಣೆ ಯಾದರೂ ಇವತ್ತಿಗೂ ಸಹ್ಯಾದ್ರಿ ಕಾಲೇಜ್ ತನ್ನ ತನ್ನ ಶೈಕ್ಷಣಿಕ ಶ್ರೇಷ್ಟತೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಆ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರ ಅಭಿಮತ. […]
PUNEETH RAJKUMAR AWARD FOR KANNADA NEWS CHANNEL CAMERAMANS… ನ್ಯೂಸ್ ಚಾನೆಲ್ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕ್ಯಾಮೆರಾಮನ್ ಮಿತ್ರರಿಗೆ “ಪುನೀತ್ ರಾಜ್ ಕುಮಾರ್” ಪ್ರಶಸ್ತಿ.
ಕನ್ನಡದ ವಿವಿಧ ನ್ಯೂಸ್ ಚಾನೆಲ್ ಗಳ 12 ಕ್ಯಾಮೆರಾಮನ್ ಗಳಿಗೆ ನಾಳೆ ಪ್ರಶಸ್ತಿ ಪ್ರಧಾನ ಬೆಂಗಳೂರು: ಕ್ಯಾಮೆರಾದ ಮುಂದೆ ರಿಪೋರ್ಟರ್ ಗಳನ್ನು ಸುಂದರವಾಗಿ ಆಕರ್ಷಕವಾಗಿ ಎಲ್ಲಕ್ಕಿಂತ ಪರಿಣಾಮಕಾರಿಯಾಗಿ ತೋರಿಸುವಂಥ ನಿರ್ಣಾಯಕ ಹಾಗು ಮಹತ್ವದ ಕೆಲಸ ಮಾಡುವಂಥವರು ನಮ್ಮ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಗಳು.ಆದರೆ ದುರಾದೃಷ್ಟಕ್ಕೆ ರಿಪೋರ್ಟರ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ನಡೆಯುತ್ತಲೇ ಇದೆ.ಆದ್ರೆ ಕ್ಯಾಮೆರಾಮನ್ ಗಳನ್ನು ಗುರುತಿಸುವವರೇ ಇಲ್ಲವಾಗಿದೆ.ಹಾಗಾಗಿ ಅವರಲ್ಲಿ ಪ್ರತಿಭೆ ಇದ್ದರೂ ಅದು ಕಾಡ ಬೆಳದಿಂಗಳಂತೆ ನಿಷ್ಪ್ರಯೋಜಕವಾಗುತ್ತಿದೆ. ಆದರೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ […]
DEEPAWALI BUMPER TO KSRTC: ದೀಪಾವಳಿ ಬಂಪರ್- KSRTC ಗೆ 18.62 ಕೋಟಿ ಗಳಿಕೆ-ಒಂದೇ ದಿನ ಸಾರ್ವಕಾಲಿಕ ದಾಖಲೆಯ 85,462 ಟಿಕೆಟ್ ಬುಕ್ಕಿಂಗ್
ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ. ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ […]