ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮೌನವನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೋ..? ಅಥವಾ ಅವರ ಒಳ್ಳೇತನಕ್ಕೆ ಬೆಲೆ ಕೊಡುತ್ತಿಲ್ಲವೋ..? ಅಥವಾ ಏನ್ ಮಾಡಿದ್ರೂ ಅವ್ರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಬಿಡು ಎನ್ನುವ ತಾತ್ಸಾರವೋ..? ಗೊತ್ತಿಲ್ಲ..ಬಿಎಂಟಿಸಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಂತಾಗಿದೆ. .ಇದಕ್ಕೆ ಜ್ಬಲಂತ ಉದಾಹರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗಳು.
ಬಿಎಂಟಿಸಿ ಡಿಪೋ 34 ಕ್ಕೆ ಸಂಬಂಧಿಸಿದ್ದೆಂದು ಹೇಳಲಾಗ್ತಿರೋ ಒಂದಷ್ಟು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ವೀಡಿಯೋ ನೋಡಿದ ಎಂಥವರಿಗೂ ಬೇಸರವಾಗದೆ ಇರೊಲ್ಲ. ಮೇಲಾಧಿ ಕಾರಿಗಳ ದಬ್ಬಾಳಿಕೆ-ದೌರ್ಜನ್ಯ ಈ ಮಟ್ಟಿಗಿದೆಯಾ ಎನ್ನುವ ಆಕ್ರೋಶ ಮೂಡುವುದರ ಜತೆಗೆ ರಾಮಲಿಂಗಾರೆಡ್ಡಿ ಅವರು ಇಷ್ಟೊಂದು ಅನ್ಯಾಯ ಆಗುವಷ್ಟು ತಮ್ಮ ಇಲಾಖೆಯಲ್ಲಿ ಅಧಿಕಾರಿಗಳಿಗೆ ಸಲುಗೆ ಕೊಟ್ಟು ಬಿಟ್ರಾ ಎನ್ನುವ ಶಂಕೆ ಕಾಡುತ್ತದೆ.
ಫೋಟೋ ಮತ್ತು ವೀಡಿಯೋದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಡ್ಯೂಟಿಯಲ್ಲಿರುವ ಡ್ರೈವರ್ಸ್ ಕಂಡಕ್ಟರ್ಸ್ ದುಡಿದು ದಣಿದಿರುತ್ತಾರೆ.ಆ ಕೆಲಸ ಮಾಡೋದೇ ಕಷ್ಟವಾಗಿರುತ್ತದೆ.ಅಂತದ್ದರಲ್ಲಿ ಅವರಿಂದ ಬಸ್ ಗಳನ್ನು ಗುಡಿಸಿ, ಕ್ಲೀನ್ ಮಾಡಿಸೋದು ಎಂದ್ರೆ ಅದು ಅನ್ಯಾಯ-ಕ್ರೌರ್ಯಅಲ್ಲದೆ ಇನ್ನೇನು..ಡಿಪೋ 34 ರ ಡಿಪೋ ಮ್ಯಾನೇಜರ್ ತಮ್ಮ ಸಿಬ್ಬಂದಿಯಿಂದ ಮಾಡಿಸುತ್ತಿದ್ದಾರೆನ್ನಲಾಗುತ್ತಿರುವ ಕೆಲಸವೂ ಅದೇ.. ಡ್ರೈವರ್ಸ್-ಕಂಡಕ್ಟರ್ಸ್ ಗಳೇ ಬಸ್ ಗಳನ್ನು ಗುಡಿಸಿ,ಕ್ಲೀನ್ ಮಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿದೆ.ಡಿಪೋಗಳಲ್ಲಿ ಆ ಕೆಲಸ ಮಾಡಲಿಕ್ಕೆಂದೇನೆ ಟೆಂಡರ್ ಕೊಡಲಾಗಿರುತ್ತದೆ..ಗುತ್ತಿಗೆ ಪಡೆದ ಏಜೆನ್ಸಿಯವನು ತನ್ನ ಸಿಬ್ಬಂದಿ ಮೂಲಕ ಆ ಕೆಲಸ ಮಾಡಿಸಬೇಕಿರುತ್ತದೆಯಲ್ಲವೇ..? ಎನ್ನುವ ಪ್ರಶ್ನೆ ಮೂಡಿದ್ರೆ, ಖಂಡಿತಾ ಹಾಗೆಯೇ ಮಾಡಬೇಕು..ಆದ್ರೆ ಅದನ್ನು ಡಿಪೋ ಮ್ಯಾನೇಜರ್ ಎನಿಸಿಕೊಂಡ ಜವಾಬ್ದಾರಿಯುತ ಅಧಿಕಾರಿ ಮಾಡಿಸುತ್ತಿಲ್ಲವಲ್ಲ ಎನ್ನುವುದೇ ದುರಾದೃಷ್ಟಕರ.
ಎಲ್ಲಾ ಡಿಪೋಗಳಂತೆ ಘಟಕ -34 ರಲ್ಲಿಯೂ ಸಂಸ್ಥೆಯ ವಾಹನಗಳ ಸ್ವಚ್ಛತೆಗೆ ಟೆಂಡರ್ ಮುಖಾಂತರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿರುತ್ತದೆ. ಆದರೆ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಇಂದಿನ ಘಟಕ ವ್ಯವಸ್ಥಾಪಕರು ಅಧಿಕಾರದ ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವುದು ಅವರ ಮೇಲಿರುವ ಆರೋಪ.
ಘಟಕದ ಹಿರಿಯ ಚಾಲನಾ ಸಿಬ್ಬಂದಿ ಹಾಗೂ ಕಿರಿಯ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ನಡೆಸಿ,ಅವರ ಮೇಲೆ ಒತ್ತಡ ಹೇರಿ ಬಸ್ಸು ಗಳನ್ನು ಸ್ವಚಗೊಳಿಸುತ್ತಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿದೆ.
ಹಾಗಾದರೆ ಟೆಂಡರ್ ಮುಖಾಂತರ ಗುತ್ತಿಗೆ ಆಧಾರದ ಮೇಲೆ ಪಾಸ್ ಮಾಡುತ್ತಿದ್ದಂತಹ ಬಿಲ್ ಗಳ ಹಣ ಎಲ್ಲಿ ಹೋಯಿತು..?ಅದು ಘಟಕ ವ್ಯವಸ್ಥಾಪಕರ ಜೇಬು ಸೇರುತ್ತಿದೆಯೇ ಎಂಬುದರ ಬಗ್ಗೆ ಅನುಮಾನಗಳು ಕಾಡುತ್ತಿವೆ.
ಇದರ ಬಗ್ಗೆ ಘಟಕದ ಸೆಕ್ಯೂರಿಟಿ ವಿಜಿಲೆನ್ಸ್ ಯಾಕೆ ರಿಪೋರ್ಟ್ ನೀಡುತ್ತಿಲ್ಲ ಎಂಬ ಶಂಕೆ ಕಾಡುತ್ತಿದೆ.ಟೆಂಡರ್ ಕೊಟ್ಟ ಹೊರತಾಗಿಯೂ ಕೆಳ ಹಂತದ ಸಿಬ್ಬಂದಿ ಮೂಲಕ ಇಂಥಾ ಕೆಲಸ ಮಾಡಿಸುತ್ತಿರುವ ಡಿಪೋ ಮ್ಯಾನೇಜರ್ ವಿರುದ್ದ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಕೇಳಿಬರುತ್ತಿದೆ.ಸಚಿವ ರಾಮಲಿಂಗಾರೆಡ್ಡಿ ಇದನ್ನು ನೋಡಿಕೊಂಡು ಸುಮ್ಮನಿರುತ್ತಾರಾ..? ಅಥವಾ ಕ್ರಮಕ್ಕೆ ಆದೇಶಿಸ್ತಾರಾ ಕಾದುನೋಡಬೇಕಿದೆ.
BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?