ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ನರೇಗಾ ಕೂಲಿ ಕಾರ್ಮಿಕರು ದೈಹಿಕವಾಗಿ ಮತ್ತು ಮಾಸಿಕವಾಗಿ ಸದೃಡರಾಗಬೇಕಾದರೆ ನಿಮ್ಮ ಜೀವಿನ ಶೈಲಿ ಮತ್ತು ಉತ್ತಮ ಆಹಾರ ತಿನುವದರಿಂದ ನೀವು ಆರೋಗ್ಯದಿಂದ ಇರಬಹುದು ಎಂದು ತಾಲ್ಲೂಕ ಪಂಚಾಯತ ಸಹಾಯಕ ನಿರ್ದೆಶಕರಾದ ಶಿವಾನಂದ ಶಿರಗಾಂವಿ ಹೇಳಿದರು
ಮಂಗಳವಾರ. ತಾಲುಕಿನ ಮುಗಳಿ ಗ್ರಾಮ ಪಂಚಾಯತಯ ಕಮತ್ಯಾನಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಉಚಿತ ಆರೋಗ್ಯ ತಪಾಸಣೆಗಾಗಿ ಗ್ರಾಮ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು ದೈಹಿಕ ಮಾಸಿಕ ಮತ್ತು ಸಾಮಾಜೀಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ನಾವು ಬಿಡುವಿಲ್ಲದ ಬದುಕಿನಲ್ಲಿ ಪೌಷ್ಠಿಕಾಂಶಭರಿತ ಆಹಾರವನ್ನು ಮರೇತು ಬಿಟ್ಟಿದೇವೆ ಸಿದ್ದ ಆಹಾರ ಎಣ್ಣೆ ಪದಾರ್ಥಗಳು ಹಾಗೂ ಸತ್ವರಹಿತ ತಿನಿಸು ಸೇವಿಸಿ ನಮ್ಮ ಆರೋಗ್ಯದ ಮೇಲೆ ನಾವೆ ಕಲ್ಲಹಾಕಿಕೊಳ್ಳುದ್ದೇವೆ ಹಾಗೂ ನಿರ್ಲಕ್ಷ್ಯ ದ ಭಾವನೆ ಫಲವಾಗಿ ಹೃದಯ ಕಾಯಿಲೆ ,ಕ್ಯಾನ್ಸರ ,ಲಕ್ವ ,ಮತ್ತು ಮದುಮೇಹದಂತೆಹ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಆವರಿಸಿತ್ತವೆ ನಮ್ಮ ಜೀವನ ರಾಸಾಯನಿಕ ಕ್ರೀಯೆಗೆ ಹಾನಿಯುಂಟು ಮಾಡುತ್ತವೆ ಹೀಗಾಗಿ ನೈಸರ್ಗಿಕವಾಗಿ ಸಿಗುವ ಹೆಣ್ಣು ,ಸೊಪ್ಪು ತರಕಾರಿಗಳನ್ನು ತಿನ್ನುವುದು ಉತ್ತಮ
ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಅಮೃತ ಆರೋಗ್ಯ ಅಭಿಯಾನದಡಿ ಮಹಾತ್ಮ ಗಾಂದಿ ನರೇಗಾ ಯೋಜನೆಯ ಕೂಲಿಕಾರರಿಗೆ ಉಚಿತ ಆರೋಗ್ಯ ತಪಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
೧೮೦ ಕೂಲಿಕಾರರಿಗೆ ಬಿಪಿ, ಶುಗರ್, ರಕ್ತಹೀನತೆ ,ತಪಾಸಣೆ ಮಾಡಿ ಅಪೌಷ್ಠಿಕತೆ ,ಮಾನಸಿಕ ,ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಪಿಡಿಓ ಚಂದ್ರಶೇಖರ ಕುಂಬಾರ ಕಾರ್ಯದರ್ಶಿ ವಿಠ್ಠಲ ಭಂತೆ ತಾಂತ್ರಿಕ ಸಿಬ್ಬಂದಿ ಪ್ರಕಾಶ ನಾವಿ ಬಿ.ಎಪ್.ಟಿ ಮಾಹಾದೇವ ಮಠಪತಿ ಕೆ.ಎಚ್.ಪಿ.ಟಿ ತಾಲ್ಲೂಕ ಸಂಯೋಜಕರು ಮಾಹಾಂತೇಶ ಕರಜೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಕಾರ್ಯಕ್ರಮ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು
+ There are no comments
Add yours