ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಂಬತ್ತು ವರ್ಷಗಳನ್ನು ಪೂರೈಸಿದೆ
ಈ ಅವಧಿಯಲ್ಲಿ ದೇಶ ಮತ್ತು
ಅದರ ಜನರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಮಾಡಿದ್ದಾರೆ.ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಚಿಕೋಡಿ ಲೋಕಸಭಾ ವ್ಯಾಪ್ತಿಯ ತಾಲುಕಿನ ಯಡೂರ ಗ್ರಾಮ ಗಡಿಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರಕ್ಕೆ ೯ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮಹಾಜನ ಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಿಂದ ಉಚಿತವಾಗಿ ಆಹಾರ ಧಾನ್ಯಗಳ ವಿತರಣೆ,ಕೊಟ್ಯಾಂತರ ಪ್ರಮಾಣದಲ್ಲಿ ಮನೆ,ಶೌಚಾಲಯಗಳ ನಿರ್ಮಾಣ,ಜಲಜೀವನ ಮಿಷನ್ ಮುಖಾಂತರ ಮನೆ ಮನೆಗೆ ಶುದ್ದಕುಡಿಯುವ ನೀರಿನ ಪೂರೈಕೆ,ಉಜ್ವಲ ಯೋಜನೆಯ ಮುಖಾಂತ ಗ್ಯಾಸ್ ಸಿಲಿಂಡರ್ ಗಳ ವಿತರಣೆ, ಹೆಣ್ಣುಮಕ್ಕಳಿಗೆ ಸೈನ್ಯಕ್ಕೆ ಸೇರ್ಪಡೆಯಾಗುವ ಅವಕಾಶ, ಮುದ್ರಾ ಯೋಜನೆ,ಕಿಸಾನ ಸನ್ಮಾನ,ಮೇಡಿಕಲ್ ಕಾಲೇಜಗಳ ಸ್ಥಾಪನೆ ಸೇರಿದಂತೆ ಹತ್ತುಹಲವಾರು ಅಭಿವೃಧಿ ಕಾಮಗಾರಿಗಳನ್ನು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಮಾಡಿದೆ.ಇಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸುವಂತಹ ಕೆಲಸ ಮಾಡಬೇಕು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ, ಡಾ!ರಾಜೇಶ ನೆರ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತ ಒಳ್ಳೆಯ ಪ್ರಾಮಾಣಿಕ ಆಡಳಿತ ನಡೆಸಿದ್ದಾರೆ.ಕೇಂದ್ರ ಸರ್ಕಾರವು ಜನಪರ ಯೋಜನೆಗಳನ್ನು ಪ್ರತಿ ಪ್ರತಿ ಮನೆಮನೆಗೆ ತಲುಪಿವೆ.ಕಾಂಗ್ರೆಸ್ ನ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು
ನಂತರ ಮಂಡಲದ ಅಧ್ಯಕ್ಷ ಸಂಜಯ ಪಾಟೀಲ, ಗ್ರಾ.ಪಂ ಸದಸ್ಯ ಅಜಯ ಸೂರ್ಯಶಿ,ಮಾಜಿ ಗ್ರಾ.ಪಂ ಅಧ್ಯಕ್ಷ ಅಮರ ಬೋರಗಾಂವೆ ಕಾರ್ಯಕ್ರಮ ಉದೇಶಿಸಿ ಮಾತನಾಡಿದರು.ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ವರಾಳೆ,ಉಪಾಧ್ಯಕ್ಷ ರಾಹುಲ ದೇಸಾಯಿ,ವಿಕ್ರಾಂತ ದೇಸಾಯಿ,ವಿನಾಯಕ ಚಿಕೋರ್ಡೆ,ಸತೀಶ ಪುಠಾಣಿ,ನವನಾಥ ಚವಾನ,ಸಂತೋಷ ಜೋಷಿ,ಮನೋಜ ಕಿಚಡೆ,ಮಹಾವೀರ ಮಂಗಸೂಳಿ,ಚಿದಾನಂದ ಕೋಳಿ,ಅಪ್ಪಾಸಾಹೇಬ ವನೇರೆ,ದೀಪಕ ಮಾನೆ,ಸನತಕುಮಾರ ಪಾಟೀಲ, ಶಂಕರ ಪವಾರ,ಅಜೀತ ಚಿಗರೆ,ದಿಲೀಪ ಪವಾರ,ಸಂಜು ನಾಂದ್ರೆ,ಜಯರಾಮ ಕಾನಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
+ There are no comments
Add yours