“ಚಿಂಚಣಿ ಗ್ರಾಮ ಪಂಚಾಯಿತಿಗೆ ಒಳಪಡುವ ಹಂಡ್ಯಾನವಾಡಿ ಗ್ರಾಮಕ್ಕೆ ಬಸ್ ಭಾಗ್ಯ ದೊರೆತಿದ್ದು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲೂಕಿನ ಚಿಂಚಣಿ ಗ್ರಾಮ ಪಂಚಾಯಿತಿಗೆ ಒಳಪಡುವ ಹಂಡ್ಯಾನವಾಡಿ ಗ್ರಾಮಕ್ಕೆ ಇಂದು ಬಸ್ ಭಾಗ್ಯ ದೊರೆತಿದ್ದು,ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಹಿನ್ನೆಲೆಯಲ್ಲಿ ಈಗ ಶ್ರೀ ಪ್ರಕಾಶ ಬಾ ಹುಕ್ಕೇರಿ ಹಾಗೂ ಶ್ರೀ ಗಣೇಶ ಹುಕ್ಕೇರಿ ಯವರ ಪ್ರಯತ್ನದಿಂದ ಬಹು ದಿನಗಳ ಕನಸು ಈಡೇರಿದಂತಾಗಿದೆ.

ಇದರಿಂದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.ಏಕೆಂದರೆ ಸುಮಾರು ಎಳೆಂಟು ವರ್ಷಗಳಿಂದ ರಸ್ತೆ ಸರಿ ಇಲ್ಲ ಎಂಬ ನೆಪವೊಡ್ಡಿ ಬಸ್ ಸಂಚಾರ ಸ್ಥಗಿಗೊಳಿಸಲಾಗಿತ್ತು. ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಜನತೆ ಈಗ ನಿಟ್ಟುಸಿರು ಬಿಟ್ಟಂತಾಗಿದೆ. ಮುಖ್ಯ ಹೆದ್ದಾರಿ ರಸ್ತೆಯಿಂದ 1 ರಿಂದ 2 ಕಿಲೋ ಮೀಟರ್ ದೂರದ ರಸ್ತೆಗೆ ಸುಮಾರು 80 ಲಕ್ಷ ಅನುದಾನ ಬಿಡುಗಡೆ ಮಾಡಿ ಡಾಂಬರೀಕರಣ ಮಾಡಿಸಿ ಈಗ ಬಸ್ ಅನುಕೂಲ ಮಾಡಿ ಕೊಟ್ಟಿದ್ದಕ್ಕಾಗಿ ಗ್ರಾಮಸ್ಥರು ಮಾನ್ಯ ಶಾಸಕರಿಗೆ ಹೃದಯ ಪೂರ್ವಕ ಧನ್ಯವಾದ ಸಮರ್ಪಿಸಿದರು. ಈ ಬಸ್ಸಿನಿಂದ ಶಾಲಾ ಕಾಲೇಜು ಮಕ್ಕಳಿಗೆ,ವೃದ್ಧರಿಗೆ ತಾಯಂದಿರಿಗೆ ಒಟ್ಟಿನಲ್ಲಿ ಸರ್ವ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ.

ಈ ಕಾರ್ಯಕ್ರಮವನ್ನು ಗ್ರಾಮದ ಕಾಂಗ್ರೇಸ್ ಧುರೀಣರು, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮಣ ದುಂಡಪ್ಪ ಜಿಗಣ,ಬಸ್ಸಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಚಾಲನೆ ನೀಡಿದರು.ಈ ಸಮಯದಲ್ಲಿ ಜಕ್ಕಪ್ಪ ಹಾಲಪ್ಪಾ ಖೋತ, ಮಾರುತಿ ಸನದಿ,ವಿಠ್ಠಲ ಖೋತ, ರಾಜೇಂದ್ರ ಜಿಗಣ,ಭಿಮಾಜಿ ಗೋಣೆ,ಭೀಮಾ ವರಗೆ,ನಿಂಗಪ್ಪ ಕುರಬರ ,ಸುಭಾಷ್ ಖೋತ ,ಸಿದ್ದರಾಮ ಜಿಗಣ ,ಸಿದ್ದಪ್ಪಾ ಮದೆನ್ನವರ,ಚಂದ್ರಕಾಂತ ಬೀಳಗೆ,ಹಾಲಪ್ಪಾ ಕೆಂಚಪ್ಪಾ ಮಹದಾಜ, ಹಾಗೂ ಸಮಸ್ತ ಹಂಡ್ಯಾನವಾಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಬಿ.ಎಲ್. ನಿಲಯಜ್ಯೋತಿ.ಹಾಗೂ ಚಾಲಕ ನಾಯಿಕವಾಡಿ,ನಿರ್ವಾಹಕಿ ಸವಿತಾ ಹಡಪದ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours