“ನಮ್ಮ ಜೀವನದ ಒಂದು ಭಾಗ ಕಲೆಯನ್ನು ನಾವು ಆರಾಧಿಸಿ ಶ್ರದ್ಧೆಯಿಂದ ಕಲಿತರೆ ಅದು ನಮ್ಮ ಜೀವನದುದ್ದಕ್ಕೂ ಕೈ ಬೀಡುವುದಿಲ್ಲ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಆಶಾದೀಪ ಸಮುದಾಯ ಕಲಾಕೇಂದ್ರ ಪಟ್ಟಣದಲ್ಲಿರುವ ರಾಜೀವನಗರ ಕಾರ್ಯಾಲಯದಲ್ಲಿ ಕಳೆದ ದಿನಾಂಕ 30 ಜೂನ 2023 ರಂದು ಧಾರವಾಡ ಜಿಲ್ಲೆಯ ಹರ್ಲಾಪೂರ ಗ್ರಾಮದ ಪ್ರತಿಭಾವಂತ ಹಿರಿಯ ರಾಜ್ಯಮಟ್ಟದ ಬೀದಿನಾಟಕ ಜಾನಪದ ಕಲಾವಿದರಾದ ಸಾಂ

ಭಯ್ಯ ಹಿರೇಮಠ ಇವರಿಗೆ ಭರತ ಕಲಾಚಂದ್ರ ಅವರು ಶಾಲು ಹಾಕಿ ಫಲ-ಪುಷ್ಟ ನೀಡಿ ಆತ್ಮೀಯವಾಗಿ ಗೌರವಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಾಂಭಯ್ಯ ಹಿರೇಮಠರವರು ಕಲೆ ನಮ್ಮ ಜೀವನದ ಒಂದು ಭಾಗ ಕಲೆಯನ್ನು ನಾವು ಆರಾಧಿಸಿ ಶ್ರದ್ಧೆಯಿಂದ ಕಲಿತರೆ ಅದು ನಮ್ಮ ಜೀವನದುದ್ದಕ್ಕೂ ಕೈ ಬೀಡುವುದಿಲ್ಲ ಅಂತಹ ನಮ್ಮ ನಾಡಿನ ಕಲೆ ಕಲಾವಿದರನ್ನು ಉಳಿಸಲು ಪ್ರತಿಯೊಬ್ಬರು ಪ್ರೋತ್ಸಾಹ ನೀಡಿ ಬೆಳೆಸಬೇಕೆಂದರು. ವಿಜಯಲಕ್ಷ್ಮೀ ಕಲಾಚಂದ್ರ, ಸುಜಾತಾ ಮಗದುಮ್ಮ ಹಾಗೂ ಸಿ.ವಾಯ್.ಸಿ.ಡಿ ಕಲಾತಂಡದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. 


Share with Your friends

You May Also Like

More From Author

+ There are no comments

Add yours