ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಗ್ಯಾರಂಟೀ ಯೋಜನೆಗಳ ಜಾರಿಗೆ ಸ್ಪಷ್ಟತೆ ನೀಡದ, ಆರ್ಥಿಕ ಸಂಪನ್ಮೂಲದ ಕ್ರೋಡಿಕರಣದ ಬಗ್ಗೆ ನಿಖರ ಮಾಹಿತಿ ಒದಗಿಸದ, ಉದ್ಯಮ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನವಿಲ್ಲದ, ನಿರುದ್ಯೋಗ ನಿವಾರಣೆಗೆ ಯಾವುದೇ ಭರವಸೆ ನೀಡದ, ಶಿಕ್ಷಣ ಕ್ಷೇತ್ರವನ್ನು ದಿಕ್ಕು ತಪ್ಪಿಸುವ, ಜನವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಬಜೆಟ್’ಅನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.
ಸುಳ್ಳು ಭರವಸೆಗಳನ್ನೂ ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಭರಸೆಗಳನ್ನು ಮೊದಲು ಈಡೇರಿಸಬೇಕು.
ನಿಪ್ಪಾಣಿ ಶಾಸಕಿ, ಶಶಿಕಲಾ ಜೊಲ್ಲೆ.
ವಿವೇಚನೆ ಇಲ್ಲದ ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಕಲೆಕ್ಷನ್ ಬಜೆಟ್ ಇದಾಗಿದೆ. ಒಬ್ಬರ ಕಡೆಯಿಂದ ಕಸಿದು ಇನ್ನೊಬ್ಬರಿಗೆ ಕೊಡುವುದು ಅಷ್ಟೇ ಕಾಂಗ್ರೆಸ್ ಸರಕಾರದ ಉದ್ದೇಶ. ವಿವಿಧ ತೆರಿಗೆಗಳನ್ನು ಏರಿಸಿ ರಾಜ್ಯದ ಜನರ ಮೇಲೆ ಭಾರ ಹೆಚ್ಚಿಸಿದ್ದೆ ಈ ಬಜೆಟ್‌ನ ಸಾಧನೆ. ಆಸ್ತಿ ನೊಂದಣಿ ಶುಲ್ಕ ಹೆಚ್ಚಿಸಿ ಜನಸಾಮಾನ್ಯರ ಮನೆ ಕೊಳ್ಳುವ ಕನಸಿಗೆ ಕೊಳ್ಳಿ ಇಡಲಾಗಿದೆ. ಸಾಮಾನ್ಯ ಜನ ಬಳಸುವ ಸ್ಕೂಟರ್, ಬೈಕ್ ಮತ್ತು ಬೆಸಿಕ್ ಕಾರುಗಳ ಮೇಲೆಯೂ ತೆರಿಗೆ ಹೊರೆ ಹೊರಿಸಿ ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಬದುಕನ್ನೆ ವ್ಯಂಗ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಣ್ಣಾಸಾಹೇಬ ಜೊಲ್ಲೆ, ಸಂಸದರು,ಚಿಕ್ಕೋಡಿ
+ There are no comments
Add yours