ನರೇಗಾ ಯೋಜನೆಯು ಗ್ರಾಮೀಣ ವಲಯದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸದ ಖಾತರಿಯು ಬಡವರು ತಮ್ಮ ಬಡತನವನ್ನು ನಿವಾರಿಸಲು ದೈನಂದಿನ ಜೀವನವನ್ನು ನಡೆಸಲು ಉಪಯೋಗ ಆಗಿದೆ – ಸಹಾಯಕ ನಿರ್ಧೇಶಕರಾದ ಶಿವಾನಂದ ಶಿರಗಾಂವಿ

ಚಿಕ್ಕೋಡಿ :–

ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ವಲಯದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸದ ಖಾತರಿಯನ್ನು ಒದಗಿಸುವ ಮೂಲಕ. ಬಡವರು ತಮ್ಮ ಬಡತನವನ್ನು ನಿವಾರಿಸಲು ಮತ್ತು ದೈನಂದಿನ ಜೀವನವನ್ನು ನಡೆಸಲು ಯೋಜನೆಯು ಉಪಯೋಗ ಆಗಿದೆ ಎಂದು ತಾ ಪಂ ನರೇಗಾ ಯೋಜನೆಯ ಸಹಾಯಕ ನಿರ್ಧೇಶಕರಾದ ಶಿವಾನಂದ ಶಿರಗಾಂವಿ ಹೇಳಿದರು

ಗುರುವಾರ ಉಮರಾಣಿ ,ಬೆಳಕೂಡ, ಬಂಬಲವಾಡ ,ಗ್ರಾಮ ಪಂಚಾಯತಿಗಳಿಗೆ ಬೇಟಿ ನೀಡಿ ಮಾತನಾಡಿದ್ದರು ಬದುಕನ್ನು ಬಡಜನರ ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮಾಡಲಾಗುತ್ತದೆ ಹಾಗೂ

ಪ್ರಸ್ತುತ ವರ್ಷದಲ್ಲಿ ಕೂಲಿ ದರ 370 ರೂ ಆಗಿದೆ 100 ದಿನ ಕೂಲಿ ಕೆಲಸ ಮಾಡಿದ್ದರೆ 37000 ರೂಪಾಯಿ ನಿಮ್ಮ ಬ್ಯಾಂಕ ಖಾತೆಗೆ ಜಮಾ ಆಗುತ್ತದೆ ಹಾಗೂ ಕಾಮಗಾರಿ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ನೆರಳಿನ ವ್ಯವಸ್ಥೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಲಾಗುವುದು. 2025-26 ನೇ ಸಾಲಿನಲ್ಲಿ ಬೇಸಿಗೆ ಬಿಸಿಲಿನ ಪ್ರಮಾಣ ತೀವ್ರವಾಗಿರುದರಿಂದ ಎಪ್ರೀಲ – ಮೇ ತಿಂಗಳಲ್ಲಿ ಕೆಲಸದ ಪ್ರಮಾನ ಶೇ.30 % ರಿಯಾಯತಿಯನ್ನು ನೀಡಲಾಗಿದೆ. ಹಾಗೂ ಹಿರಿಯನಾಗರಿಕರಿಗೆ ಹಾಗೂ , ಬಾಣಂತಿಯರಿಗೆ ಮಹಿಳೆಯರಿಗೆ ಕೆಲಸದಲ್ಲಿ ಶೆ 50 % ರಷ್ಟು ರಿಯಾಯತಿ ಇದೆ ಹಾಗೂ ನಿಮ್ಮಗೆ ಏನಾದರು ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತರಬೇಕು ನಾನು ಗ್ರಾಮ ಪಂಚಾಯತಿಯಿಂದ ವ್ಯವಸ್ಥೆ ಮಾಡಲಾಗುವುದು ಹಾಗೂ ಕೂಲಿ ಕಾರ್ಮಿಕರಿಗೆ ಏನು ಸಮಸ್ಯೆ ಆಗಬಾರದೆಂದು ಬಿ ಎಪ್ ಟಿ ಗಳು ,ಕಾಯಕ ಮಿತ್ರಗಳು ,ಹಾಗೂ ಕಾಯಕ ಬಂದುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು

ಈ ಸಂದರ್ಭದಲ್ಲಿ ತಾ ಪಂ ಐಇಸಿ ಸಂಯೋಜಕರಾದ ರಂಜೀತ ಕಾರ್ಣಿಕ ಹಾಗು ಪಿಡಿಒ ಬಿ ಎಪ್ ಟಿ ಕಾಯಕ ಮಿತ್ರ ಗ್ರಾಮ ಪಂಚಾಯತಿ ಸಿಬ್ಬಂದಿಗಳಿ ಉಪಸ್ಥಿರಿದ್ದರು

Share this post:

Leave a Reply

Your email address will not be published. Required fields are marked *